 
ಹೊಸ ವರುಷ ಹೊಸ ಹರುಷ - ಕವನ
Thursday, December 31, 2020
Edit
ಬಿಂದುಶ್ರೀ 
10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲೂಕು
ಹೊಸ ವರುಷ - ಹೊಸ ಹರುಷ
ಬಂದಿದೆ ಹೊಸ ವರುಷ..
ತಂದಿದೆ ಹೊಸ ಹರುಷ..
ಹೇಳಬೇಕಿದೆ 2020ಕ್ಕೆ ವಿದಾಯ 
ಶುರುವಾಗಲಿದೆ 2021ರ ಹೊಸ ಅಧ್ಯಾಯ !
ಪ್ರತಿವರ್ಷವೂ ಸರಿಯುವ ಆ ಒಂದು ಕ್ಷಣ 
ಮನಸ್ಸಿನ ಮೂಲೆಯಲ್ಲಿ ಸಣ್ಣಗೆ ನೋವಿನ ತಲ್ಲಣ! 
ಆದರೆ, ನೊಂದುಕೊಂಡು ಜಾಸ್ತಿ  ಪಡಬೇಕಾಗಿಲ್ಲ ಚಿಂತೆ ..
ಬದುಕಿನ ಅಧ್ಯಾಯದ ಹೊಸ ಪುಟ ತೆರೆಯಲು ಅವಕಾಶವಿದು ಮತ್ತೆ! 
ಕಹಿ ನೆನಪುಗಳು ಮಾಸಿ, ಸಿಹಿ ನೆನಪುಗಳು ಚಿರವಾಗಲಿ..
ಹೊಸ ವರುಷದಲಿ ಕಂಡ ಕನಸು ನನಸಾಗಲಿ..
ಮೂಡಲಿ ಹೊಸ ಉಲ್ಲಾಸ, ಹೊಸ ಚೈತನ್ಯ, ಹೊಸ ವಿಶ್ವಾಸ !
ಬದುಕಿನ ಕಳೆ ಹೆಚ್ಚಿಸಲಿ ಈ ಹೊಸ ವರುಷ ! 
ಹೊಸ ವರುಷವ ನಗುನಗುತ್ತಾ ಸ್ವಾಗತಿಸೋಣ
ಒಳಿತು - ಕೆಡುಕುಗಳ ವಿಮರ್ಶಿಸಿ, ಭವಿಷ್ಯದ ಕುರಿತು ಚಿಂತಿಸೋಣ! 
ಮಧುಪರ್ಕದಂತೆ ಸಿಹಿಯಾಗಲಿ ಈ ಜೀವನ..
ಛಲದಿಂದ ಗುರಿ ಸಾಧಿಸುವತ್ತ , ಸಾಗಲಿ ನಮ್ಮ ಪಯಣ !!!
ಬಿಂದುಶ್ರೀ 
10 ನೇ ತರಗತಿ
