-->
ಹೊಸವರುಷದಲ್ಲಿ ನನ್ನ ಕನಸು - ಕವನ

ಹೊಸವರುಷದಲ್ಲಿ ನನ್ನ ಕನಸು - ಕವನ

                        ಅನುಲಕ್ಷ್ಮಿ 9ನೇ ತರಗತಿ
            ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
                         ಬಂಟ್ವಾಳ ತಾಲೂಕು

ಹೊಸ ವರುಷದಲ್ಲಿ ನನ್ನ ಕನಸು -ಕವನ

     ಹೊಸ ವರುಷ ಬರುತಲಿದೆ
     ನನ್ನ ಕನಸುಗಳು ಅರಳುತಲಿದೆ
ನಮ್ಮ ಕನಸುಗಳು ಕೈಗೂಡಲಿ
ಹೊಸ ಚೈತನ್ಯ, ಹುರುಪು ತುಂಬಲಿ
     ನಮ್ಮ ಹಳೇ ನೋವುಗಳು ಮರೆಯಾಗಲಿ
     ಸುಖ-ಸಂತೋಷದಿಂದ ತುಂಬಲಿ
ಸಮಾಜದ ಸೇವೆ ಮಾಡೋಣ 
ಜನರ ಕಷ್ಟಗಳನ್ನು ಪರಿಹರಿಸೋಣ
     ಪರಿಸರ ಮಾಲಿನ್ಯವನ್ನು ನಿಯಂತ್ರಿಸೋಣ
     ಪರಿಸರವನ್ನು ರಕ್ಷಿಸೋಣ
 ಅಂಧ ಮಕ್ಕಳಿಗೆ ದಾನ ಮಾಡೋಣ   
 ಅವರ ಮೊಗದಲ್ಲಿ ಖುಷಿ ಕಾಣೋಣ
      ಜನರ ಕಷ್ಟಗಳು ದೂರವಾಗಲಿ 
      ಸುಖದಿಂದ ನೆಲೆಸುವಂತಾಗಲಿ
ಆದಷ್ಟು ಒಳ್ಳೆಯ ಕನಸನ್ನು ಕಾಣೋಣ 
ಜನರ ಕಷ್ಟಗಳಿಗೆ ಪರಿಹಾರವನ್ನು ಒದಗಿಸೋಣ
      ಹೊಸ ಹೊಸ ಕನಸನ್ನು ಕಾಣೋಣ 
      ಖುಷಿಯಿಂದ ಹೊಸ ವರುಷವನ್ನು ಆಚರಿಸೋಣ
                     
              ಅನುಲಕ್ಷ್ಮಿ 9ನೇ ತರಗತಿ
              ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು                        ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article