
ನನ್ನುಸಿರು ಅಮ್ಮಾ.... ಕವನ
Thursday, December 24, 2020
Edit
ಪವನ್ ಕುಮಾರ್.ಕೆ
9 ನೇ ತರಗತಿ.
ನನ್ನುಸಿರು ಅಮ್ಮಾ...!
ಅಮ್ಮಾ ಎನ್ನುವ ಎರಡಕ್ಷರವು..
ಮನಸ್ಸಿಗೆ ನೀಡಿತು ಹರುಷವು..!
ಅಮ್ಮಾ.. ನಿನ್ನಯ ಕಷ್ಟ ಒಡಲೊಳಗೆ..
ನಾನಿರುವೇ ನಿನ್ನಯ ಮಡಿಲೊಳಗೆ..!
ಒಂಭತ್ತು ತಿಂಗಳು ಹೊಟ್ಟೆಯಲಿರಿಸಿ.,
ಸುಖ ದುಃಖಗಳನು ನೀನೆ ಅನುಭವಿಸಿ..
ನನ್ನಯ ಹುಟ್ಟಿಗೆ ನೀ ಕಾರಣಳಾದೆ.,
ನನಗಾಗಿ ನೀ ಹಗಲಿರುಳು ದುಡಿದೆ...
ಅಮ್ಮಾ.. ನೀನೆ ನನ್ನಯ ಉಸಿರು..
ಎಂದಿಗೂ ಮರೆಯೆನು ನಿನ್ನಯ ಹೆಸರು..!
ನನ್ನಯ ನಾಮವ ಜಗದಿಡೀ ಹಬ್ಬಿಸಿರುವೇ
ನಿನ್ನಯ ಕನಸಾ ನಾ.. ನನಸಾಗಿಸುವೇ..!
ಎಂದಿಗೂ ಮರೆಯೆನು ನಿನ್ನಯ ಮಮತೆಯನು,....
ಸಾಧ್ಯವೇ ಇಲ್ಲ ಮರೆಮಾಚಲು ನೀ ನೀಡಿದ ಹೊಸ ಜೀವವನು...!!
ಪವನ್ ಕುಮಾರ್.ಕೆ
9 ನೇ ತರಗತಿ.
ಸ ಪ ಪೂ ಕಾಲೇಜು
ಐವರ್ನಾಡು.