-->
ನನ್ನ ಕತೆ - ನೇಹಿಗ

ನನ್ನ ಕತೆ - ನೇಹಿಗ

ಮನುಜ ನೇಹಿಗ
ರಂಗಮನೆ ಸುಳ್ಯ

                     ನನ್ನ ಕಥೆ - ನೇಹಿಗ
           ಹಾಯ್ ಫ್ರೆಂಡ್ಸ್..... ಮಕ್ಕಳ ಜಗಲೀಲಿ ಇರುವ ಎಲ್ಲರಿಗೂ ನಮಸ್ತೆ ...  ನನ್ನ ಇಷ್ಟದ ತಾರಾನಾಥ್ ಮಾಮ
ನಂಗೆ ' ನೀನು ಏನಾದ್ರೂ ಬರೀಬೇಕು' ಅಂತ ಹೇಳಿದ ಕಾರಣ ನಾನೀಗ ಬರೀಲಿಕ್ಕೆ ಸುರು ಮಾಡಿದ್ದೇನೆ. ಇಲ್ಲಾಂದ್ರೆ ಬರೀತಾನೇ ಇರ್ಲಿಲ್ಲ.
         ನಂಗೆ ಬರಿಯುದಂದ್ರೆ ಅಷ್ಟಕಷ್ಟೆ. ಓದೋದು ಕೂಡ.. ನಂಗೆ ಹಾಡೋದು, ಮ್ಯಾಜಿಕ್ ಮಾಡೋದು, ನಾಟಕದಲ್ಲಿ ಆಕ್ಟಿಂಗ್ ಮಾಡೋದು, ಮತ್ತೆ ಸೊಂಟದಲ್ಲಿ ರಿಂಗ್ ತಿರುಗಿಸೋದು, ಯಕ್ಷಗಾನ ವೇಷ ಹಾಕಿ ಕುಣಿಯೋದು, ಮಣಿಪುರಿ ಸ್ಟಿಕ್ ಡಾನ್ಸ್ ಮಾಡೋದು , ಚಿತ್ರ ಬಿಡ್ಸುದೂ, ತಬಲ, ಕೊಳಲು ನುಡಿಸೋದು ....ಇಂತದ್ರಲ್ಲಿ ನಂಗೆ ತುಂಬಾ ಇಂಟ್ರೆಸ್ಟ್.! 
          ಮೊದಲು ನಾನು ರಂಗಕ್ಕೆ ಬಂದಾಗ ನನಗೆ ಎರಡೂವರೆ ವರ್ಷ. ಆಳ್ವಾಸ್ ದೀಪಾವಳಿಯ ಕಾರ್ಯಕ್ರಮದಲ್ಲಿ ನಾನು ಮೊದಲು ರಂಗಕ್ಕೆ ಬಂದದ್ದು. ಯಬ್ಬಾ! ದೊ.....ಡ್ಡ ಸ್ಟೇಜೂ.... ತುಂ..ಬ ಪ್ರೇಕ್ಷಕರು..! ವೇದಿಕೆಯಲ್ಲಿ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ನಡೀತಿತ್ತು. ಭರತನಾಟ್ಯ, ಸಿಂಹನೃತ್ಯ, ಯಕ್ಷಗಾನ, ಬೆಂಕಿ ತಿರುಗಿಸುದು, ತಾಲೀಮು ಕಸರತ್ತೂ , ದೋಲ್ ಚಲಮ್, ಗೊಂಬೆ ಕುಣಿತ ಎಲ್ಲ. ಮತ್ತೆ ಮಣಿಪುರಿ ಸ್ಟಿಕ್ ಡ್ಯಾನ್ಸ್ ಸಹಾ. ಅದನ್ನೆಲ್ಲ ನೋಡಿ  ನಂಗೆಸಾ ಸ್ಟೇಜ್ ಗೆ ಹೋಗ್ಬೇಕು ಅಂತ ಆಸೆ ಆಯ್ತು.. 
             ಅಪ್ಪ ಅಮ್ಮ ನಲ್ಲಿ ಹಟ ಮಾಡಿದೆ...ಬೇಡಾ ಆಂದ್ರು. ನಾನು ಬಿಡ್ಲಿಲ್ಲ. ನನ್ನ ಹಟದಿಂದಾಗಿ ವೇದಿಕೆಯ ಆಚೆ ಬದಿಗೆ ಮಣಿಪುರಿ ಅವರು ಸ್ಟಿಕ್ ಡಾನ್ಸ್ ಮಾಡುತ್ತಿರುವಾಗ ಈಚೆ ಬದಿಗೆ ನಾನು ರಿಂಗನ್ನು ಸೊಂಟಕ್ಕೆ ಹಾಕಿ ರೋಯ್ ರ್ರೋಯ್ ಅಂತ ತಿರುಗಿಸಿದೆ.. ಆ ಸಮಯದಲ್ಲಿ ನನಗೆ 103 ಡಿಗ್ರಿ ಜ್ವರ ಇತ್ತು. ಅಪ್ಪ ಅಮ್ಮನಿಗೆ ಹೆದರಿಕೆಯಾಗಿ ಮಧ್ಯದಲ್ಲೇ ನನ್ನನ್ನು ಸಾಕು ಸಾಕು ಅಂತ ಕೈಬಾಸೆ ಮಾಡಿ ಕರೀಲಿಕ್ಕೆ ಸುರು ಮಾಡಿದ್ರು. 
         ನಾನು ಮಾತ್ರ ರಿಂಗನ್ನು ತಿರುಗಿಸುತ್ತಲೇ ಇದ್ದೆ. ಸ್ಟಿಕ್ ಡ್ಯಾನ್ಸ್ ಮಾಡುವವರೆಲ್ಲ ದೊಡ್ಡವರು.. ಇಡೀ ಸ್ಟೇಜಲ್ಲಿ ನಾನು ಮಾತ್ರ ಚಿಕ್ಣಿ. ಆದ್ರೂ ಜನ ನನ್ನನ್ನು ನೋಡಿ ಚಪ್ಪಾಳೆ ತಟ್ಟಿದ್ರು.. ವಿಸಿಲ್ ಹೊಡ್ದರು.. ನಂಗೆ ಖುಷೀಯೋ ಖುಶಿ... ಮತ್ತೂ ಸ್ಪೀಡ್ ಸ್ಪೀಡಾಗಿ ರಿಂಗ್ ತಿರುಗಿಸಿದೆ... ಆ ಕಡೆ ಸ್ಟಿಕ್ ಡ್ಯಾನ್ಸ್ ಈ ಕಡೆ ನಾನು.. ಸೈಡ್ ವಿಂಗ್ ನಲ್ಲಿ ಹೆದ್ರಿದ ಅಪ್ಪಮ್ಮ.. ರಿಂಗ್ ತಿರುಗಿಸುವ ಖುಷಿಗೆ ನಂಗೆ  ನನ್ನ ಜ್ವರ ಎಲ್ಲಾ ಮರೆತೇ ಹೋಯಿತು. 
        ಕಾರ್ಯಕ್ರಮ ಮುಗಿದ ಮೇಲೆ ಎಲ್ಲರೂ ನನ್ನನ್ನು ಎತ್ತಿ ಮುದ್ದು ಮಾಡಿದ್ರು..ಮೋಹನ ಆಳ್ವ ಸರ್ ಕೂಡಾ 'ಗುಡ್ ಗುಡ್' ಅಂದ್ರು. ಮೂರು ದಿನದಿಂದ ಹುಶಾರಿಲ್ಲದೇ ಇದ್ದ ನನ್ನ ಜ್ವರ ಆದಿನ ನಿಜಕ್ಕೂ ಮಾಯ ಆಗಿತ್ತು..ಅಪ್ಪ ಅಮ್ಮನಿಗೆ ಆಶ್ಚರ್ಯ!!!! .ಆ ದಿನ ನಂಗೆ ತುಂಬ ಕಿಸ್ಸು.!     
        ಹೀಗೆ ನನ್ನ ಮೊದಲ ರಂಗಪ್ರವೇಶ ಆಳ್ವಾಸ್ ನಲ್ಲಿ ಆಯ್ತುಂತ ಹೇಳ್ಲಿಕ್ಕೆ ನಂಗೆ ಹೆಮ್ಮೆ. ಅಪ್ಪ ಅಮ್ಮ ನನ್ನನ್ನು ಯಾವಾಗ್ಲೂ ತುಂಬಾ ಮುದ್ದು ಮಾಡುತ್ತಿದ್ದರು. ರಂಗಮನೆ ಮತ್ತು ಬಾಲಾಡಿಯ ತಾತ, ಅವ್ವ ಎಲ್ಲರೂ. ಎಲ್ಲರಿಗೂ ನಾನಂದ್ರೆ ತುಂಬಾ ಇಷ್ಟ. "ಪಾಪೂ ಪಾಪೂ.." ಅಂತನೇ  ಎಲ್ರೂ ನನ್ನನ್ನು ಕರೆಯೋದು.
       ಅಪ್ಪ ನಾಟಕ ಪ್ರಾಕ್ಟೀಸ್ ಮಾಡುತ್ತಿರುವಾಗ ನಾನು ನೋಡ್ತಾ ಇದ್ದೆ.. ಮ್ಯೂಸಿಕ್ ಪಿಟ್ ನಲ್ಲಿರುವ ತಬಲ, ಟಮ್ಕಿ, ಡೋಲು, ತಾಸೆಗೆ ನನ್ನ ಪುಟಾಣಿ ಕೈಗಳಿಂದ ಮೆಲ್ಲನೆ ಢಂ ಢಂ ಠನ್ ಠನ್ ಟಿಂಗ್ ಟಿಂಗ್  ಅಂತ ಬಡೀತಿದ್ದೆ. ಚೂರು ಚೂರು  ಹಾರ್ಮೋನಿಯಂ ಮೇಲೆ ಕೈ ಆಡಿಸ್ತಿದ್ದೆ.. ಅದು ಪೂಯಿಂ ಪುಯಿಂ ಅಂತ ಸ್ವರ ಹೊರಡಿಸುವಾಗ ನಂಗೆ ಖುಷೀ ಆಗ್ತಿತ್ತು.. ಅಪ್ಪ 'ವೆರಿಗುಡ್' ಅಂತ ಹೇಳಿ " ಇನ್ನೂ ನುಡಿಸೂ ಬಾರಿಸೂ " ಅಂತ ಹೇಳ್ತಿದ್ರು. 
        ನಂಗೆ ಭಯಂಕರ ಖುಷಿ.. ನಾನು ಸಿಕ್ಕಿದ್ದು ಚಾನ್ಸ್ ಅಂತ ಹೇಳಿ ಜೋರು ನುಡಿಸ್ತಿದ್ದೆ. ಸ್ವಲ್ಪ ಹೊತ್ತು ನಾಟಕ ಪ್ರಾಕ್ಟೀಸ್ ಸ್ಟೋಪ್ ಆಗ್ತಿತ್ತು.. ದೊಡ್ಡ ಕ್ಲಾಸಿನ ಮಕ್ಕಳು ಕಲಾವಿದರಾಗಿದ್ದರೂ ನನ್ನನ್ನು ತುಂಬಾ ಮುದ್ದು ಮಾಡ್ತಿದ್ರು. ಅಮ್ಮನ ಸ್ವರ ಚಂದ - ದಪ್ಪ. ಅಮ್ಮ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಅಮ್ಮನ ಪದ್ಯ... ಅಪ್ಪನ ಆ್ಯಕ್ಷನ್. ಅಪ್ಪ ಅಮ್ಮ ಇಬ್ಬರೂ ಸೇರಿ ಹಾಡಿದ್ರೆ ಮಕ್ಕಳು ಎಲ್ಲರೂ ಕುಣೀಲಿಕ್ಕೆ ಸುರು ಮಾಡ್ತಿದ್ರು. ನಾನೂ ಅವರ ಜೊತೆ ಸಣ್ಣ ಧ್ವನಿಯಲ್ಲಿ ಹಾಡ್ತಾ ಕುಣೀತಿದ್ದೆ.. ಆಗ ನಂಗೆ ಊಟ ಬೇಡ, ಪಾಠ ಬೇಡ.. ಹಾಡುದು ಕುಣಿಯುದೇ ಬೇಕಿತ್ತು... 
      ಓಹ್!! ಟೈಮಾಯ್ತು..ಹೇಳ್ಲಿಕ್ಕೆ ಇನ್ನೂ ಇದೆ..
ತುಂಬ ಗಮ್ಮತ್ತು ಇದೆ ವಿಷಯ. ನಾಳೆ ಸಿಗುವೆ ಆಯ್ತಾ , ಈಗ ಆನ್ ಲೈನ್ ಕ್ಲಾಸ್ ನೋಟ್ಸ್  ಬರೀಲಿಕ್ಕಿದೆ.
ಬಾಯ್ ......
------------------ ಮನುಜ ನೇಹಿಗ ಸುಳ್ಯ
                     7 ನೇ ತರಗತಿ
                     ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆ ,
                     ಮೂಡಬಿದಿರೆ.


Ads on article

Advertise in articles 1

advertising articles 2

Advertise under the article