
ಅತಿಯಾಸೆಯ ಹಾಲು ಮಾರಾಟಗಾರ - ಕಥೆ
Friday, December 18, 2020
Edit
ಅನನ್ಯ ತಲೆಂಗಳ 5 ನೇ ತರಗತಿ
ಅತಿಯಾಸೆಯ ಹಾಲು ಮಾರಾಟಗಾರ -ಕಥೆ
ಒಂದಾನೊಂದು ಕಾಲದಲ್ಲಿ ಒಬ್ಬ ಹಾಲು ಮಾರಾಟಗಾರ ಇದ್ದ. ಅವನ ಹೆಸರು ಸೋಮು. ಸೋಮುವಿನ ಹತ್ತಿರ ಮೂರು ಹಸುಗಳಿದ್ದವು. ಅವನಿಗೆ ಇನ್ನೊಂದು ಹಸು ಕೊಂಡುಕೊಳ್ಳಬೇಕು ಎಂದು ಎಷ್ಟೋ ತಿಂಗಳುಗಳಿಂದ ಆಸೆ ಇತ್ತು. ಆದರೆ ಹಸು ಕೊಂಡುಕೊಳ್ಳುವಷ್ಟು ದುಡ್ಡು ಇರಲಿಲ್ಲ.
ಒಂದು ದಿವಸ ಆ ಊರಿನಲ್ಲಿ ಒಬ್ಬ ತುಂಬ ಕಡಿಮೆ ಹಣಕ್ಕೆ ಒಂದು ಹಸುವನ್ನು ಮಾರುತ್ತಿದ್ದ. ಅವನಿಗೆ ಆ ಹಸುವಿನಲ್ಲಿ ಏನಾದರೂ ತೊಂದರೆ ಇರಬಹುದು ಎಂದು ಗೊತ್ತಿತ್ತು. ಏನಾದರೂ ಕೊರತೆ ಇದ್ದರೆ ಮಾರಬಹುದು ಎಂದು ಯೋಚಿಸಿ ಆ ಹಸುವನ್ನೇ ಕೊಂಡುಕೊಂಡ. ಆದರೆ ಆ ಹಸು ತುಂಬಾ ಕಡಿಮೆ ಹಾಲು ಕೊಡುತ್ತಿತ್ತು. ಮತ್ತು ತುಂಬಾ ತಿನ್ನುತ್ತಿತ್ತು. ಇದನ್ನು ನೋಡಿ ಸೋಮು ಹಸುವನ್ನು ಮಾರಬೇಕು ಎಂದು ಯೋಚಿಸಿದ. ಪಕ್ಕದ ಮನೆಯವನಿಗೆ ಸುಳ್ಳು ಹೇಳಿ, ತುಂಬ ದುಡ್ಡು ಹೇಳಿ ಹಸುವನ್ನು ಮಾರಿದ. ಸ್ವಲ್ಪ ದಿನದ ಬಳಿಕ ಪಕ್ಕದ ಮನೆಯವನಿಗೂ ಆ ಹಸು ತುಂಬ ಕಡಿಮೆ ಹಾಲು ಕೊಡುವುದು ಗೊತ್ತಾಯಿತು. ಮತ್ತು ಸೋಮು ಸುಳ್ಳು ಹೇಳಿದ್ದಾನೆ ಎಂದು ಗೊತ್ತಾಯಿತು. ಆತ ದುಡ್ಡು ಸಿಗುತ್ತದೆ ಎಂದು ಮೋಸ ಮಾಡಿದ್ದಾನೆ, ಆತನಿಗ ತಕ್ಕ ಶಿಕ್ಷೆ ಕೊಡಲೇಬೇಕು ಎಂದು ಯೋಚಿಸಿದನು.
ಮರುದಿನ ಆ ಹಸುವನ್ನು ಸೋಮು ತರಕಾರಿ ತೋಟದಲ್ಲಿ ಕಟ್ಟಿದನು. ಆಗ ಅದು ಸೋಮು ಕಷ್ಟಪಟ್ಟು ಬೆಳೆದ ತರಕಾರಿ ಗಿಡಗಳನ್ನು ತಿಂದಿತು. ಇದನ್ನು ನೋಡಿ ಸೋಮುವಿಗೆ ತುಸು ಬೇಸರವಾಯಿತು. ನಾನು ಆತನಿಗೆ ಮೋಸ ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟನು.
ಅನನ್ಯ ತಲೆಂಗಳ
5ನೇ ತರಗತಿ
ವಿಶ್ವಮಂಗಳ ಶಾಲೆ, ಕೊಣಾಜೆ