ಹಕ್ಕಿಗಳ ಒಗ್ಗಟ್ಟು -ಕಥೆ
Thursday, December 17, 2020
Edit
ನಂದನ್ ಕೆ ಎಚ್
6 ನೇ ತರಗತಿ
ಹಕ್ಕಿಗಳ ಒಗ್ಗಟ್ಟು - ಕಥೆ
ಒಂದು ಕಾಡಿನಲ್ಲಿ ಹಲವಾರು ಪಕ್ಷಿಗಳು ವಾಸಿಸುತಿದ್ದವು. ದಿನಬೆಳಗಾದರೆ ಪಾರಿವಾಳಗಳು ಆಹಾರ ಹುಡುಕಿಕೊಂಡು ಊರಿನ ಕಡೆ ಹೋಗಿ ಬರುತ್ತಿದ್ದವು. ಆದರೆ ಮರಳಿ ಬರುವಷ್ಟರಲ್ಲಿ ಒಂದು ಹಕ್ಕಿ ಕಾಣೆಯಾಗುತ್ತಿತ್ತು. ಹಕ್ಕಿಗಳೆಲ್ಲಾ ಬಹಳ ದುಃಖಿತವಾದವು. ಹೀಗೆ ಚಿಂತಿಸುತ್ತಿರುವಾಗ ಒಂದು ಗುಬ್ಬಚ್ಚಿ ಹೇಳುತ್ತದೆ , "ಈ ಸಲ ಒಂದು ಉಪಾಯ ಮಾಡಿ ಒಂದು ಪಾರಿವಾಳವನ್ನು ಮೊದಲು ಕಳುಹಿಸಿ ಹಿಂದಿನಿಂದ ನಾವೆಲ್ಲರೂ ಒಂದಾಗಿ ಹೋಗೋಣ. ಪಾರಿವಾಳ ಹೇಗೆ ಕಾಣೆಯಾಗುತ್ತದೆ ಇದಕ್ಕೆ ಕಾರಣ ಯಾರು ಎಂದು ಹುಡುಕೋಣ " ಎಂದಿತು. ಇದೇ ರೀತಿ ಮರುದಿನ ಬೆಳಿಗ್ಗೆ ಅವರು ಮಾಡಿದರು. ನೋಡಿದರೆ ಒಬ್ಬ ಹಕ್ಕಿಗಳ ಕಳ್ಳ ಪಾರಿವಾಳವನ್ನು ಹಿಡಿದು ಮಾರುತ್ತಿದ್ದಾನೆ ಎಂದು ಇವರಿಗೆ ತಿಳಿಯಿತು. ಆ ಕಳ್ಳನನ್ನು ಎದುರಿಸುವುದು ಹೇಗೆ ಎಂದು ಚಿಂತಿಸುತ್ತಿರುವಾಗ, ನವಿಲು ಹೇಳಿದ್ದು "ಈ ಸಲ ಮುಂದೆ ನಾನು ಹೋಗುತ್ತೇನೆ . ನನಗೆ ಹಾಕಿದ ಬಲೆಯನ್ನು ನಾನು ಕತ್ತರಿಸಿ ತುಂಡು ಮಾಡುತ್ತೇನೆ ನನ್ನ ಹಿಂದೆ ಹದ್ದು ಬರಬೇಕು , ನಮ್ಮ ಪಕ್ಷಿಗಳ ಸಂತತಿಯನ್ನು ನಾಶಮಾಡುತ್ತಿರುವ ಕಳ್ಳನನ್ನು ಹದ್ದು ಕುಕ್ಕಿ ಸಾಯಿಸಬೇಕು". ಎಂದು ಹೇಳಿತು.. ಎಲ್ಲಾ ಪಾರಿವಾಳಗಳಿಗೆ ಬಹಳ ಖುಷಿಯಾಯಿತು. ಗುಬ್ಬಚ್ಚಿ ಉಪಾಯ ಹಾಗೂ ಎಲ್ಲ ಪಕ್ಷಿಗಳ ಸಹಕಾರದಿಂದ ಮರುದಿನ ಅದೇ ರೀತಿ ಮಾಡಿದವು. ಕೊನೆಗೂ ಕಳ್ಳ ಹದ್ದಿನ ಬಾಯಿಗೆ ಸಿಕ್ಕಿ ಸತ್ತು ಹೋಗುತ್ತಾನೆ. ಅಂದಿನಿಂದ ಹಕ್ಕಿಗಳು ಬಹಳ ಸಂತಸದಿಂದ ಜೀವಿಸತೊಡಗಿದವು.
ನಂದನ್ ಕೆ ಹೆಚ್
6ನೇ ತರಗತಿ
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಪುತ್ತೂರು