
ತರಕಾರಿ ಮಾರಾಟಗಾರನ ಕಥೆ - ಕಥೆ
Thursday, December 17, 2020
Edit
ಅನನ್ಯ ತಲೆಂಗಳ
5 ನೇ ತರಗತಿ
ತರಕಾರಿ ಮಾರಾಟಗಾರನ ಕಥೆ
ಒಂದಾನೊಂದು ಕಾಲದಲ್ಲಿ ಒಬ್ಬ ತರಕಾರಿ ವ್ಯಾಪಾರಿ ವಾಸಿಸುತ್ತಿದ್ದ. ಅವನ ಹೆಸರು ರಾಮ. ರಾಮ ತಳ್ಳುಗಾಡಿಯಲ್ಲೇ ತರಕಾರಿಯನ್ನು ಮನೆಮನೆಗೆ ಹೋಗಿ ಮಾರುತ್ತಿದ್ದ. ಅವನು ಸಾಮಾನ್ಯವಾಗಿ ಬೆಳಗ್ಗೆ ಬೇಗ ಎದ್ದು ತರಕಾರಿ ಮಾರಲು ಹೋಗುತ್ತಿದ್ದ. ಆತ ಅವನೇ ಬೆಳೆದ ತರಕಾರಿ ಮಾರುತ್ತಿದ್ದ.
ಒಂದು ದಿವಸ ಅವನು ಹೋಗುತ್ತಿದ್ದ ದಾರಿಯಲ್ಲಿ ರಮೇಶ್ ಎಂಬ ಹಾಲಿನ ವ್ಯಾಪಾರಿ ಇದ್ದ. ಆತನ ಸೈಕಲಿನ ಚಕ್ರ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ರಾಮ ಬರುವುದನ್ನು ಕಂಡು ರಮೇಶ ಹೇಳಿದ, ರಾಮ ನನ್ನ ಸೈಕಲಿನ ಚಕ್ರ ಕೆಸರಿನಲ್ಲಿ ಹೂತು ಹೋಗಿದೆ, ಒಮ್ಮೆ ಅದನ್ನು ತೆಗೆಯಲು ಸಹಾಯ ಮಾಡುತ್ತೀಯ ಎಂದು.
ಆಗ ರಾಮ, “ಇಲ್ಲ ಇದು ಸಾಧ್ಯವಿಲ್ಲ, ನಿನಗಗೆ ಸಹಾಯ ಮಾಡುವಷ್ಟರಲ್ಲಿ ನನ್ನ ತರಕಾರಿಗಳು ಬಾಡಿ ಹೋಗುತ್ತವೆ’ ಎಂದು ಹೇಳಿ ಹೊರಟು ಹೋದನು. ಎಲ್ಲರೂ ಅವನಲ್ಲಿ ಸಹಾಯ ಮಾಡಲು ಹೇಳಿದಾಗ ಆತ ಇದೇ ಕಾರಣ ಹೇಳಿ ಸುಮ್ಮನೇ ಹೊರಟು ಹೋಗುತ್ತಿದ್ದ.
ಒಮ್ಮೆ ರಾಮ ತರಕಾರಿ ಮಾರಲು ಪಕ್ಕದ ಊರಿಗೆ ಹೋಗುತ್ತಿದ್ದಾಗ ಅವನ ತಳ್ಳುಗಾಡಿ ಬಿದ್ದು ಹೋಗಿ ಎಲ್ಲ ತರಕಾರಿಗಳೂ ಚೆದುರಿಹೋದವು. ಕೆಲವು ತರಕಾರಿಗಳಿಗೆ ಮಣ್ಣಾಯಿತು, ಮತ್ತೂ ಕೆಲವು ತರಕಾರಿಗಳು ನಜ್ಜುಗುಜ್ಜಾದವು. ಆಗ ಅವನಿಗೆ ಯಾರು ಕೂಡಾ ಸಹಾಯ ಮಾಡಲು ಬರಲಿಲ್ಲ. ಆಗ ರಮೇಶ್, ಅದೇ ದಾರಿಯಲ್ಲಿ ಹಾಲು ಮಾರುತ್ತಿದ್ದ. ಆಗ ರಾಮ ಅವನ ಹತ್ತಿರ ಸಹಾಯ ಕೇಳಿದಾಗ ರಮೇಶ್, “ನಾನು ಸಹಾಯ ಮಾಡುವುದಿಲ್ಲ. ನಾನು ನಿನಗೆ ಕೇಳಿದಾಗ ನೀನು ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದಿ...” ಎಂದು ಹೇಳಿ ಅಲ್ಲಿಂದ ಹೋದ. ಆಗ ರಾಮನಿಗೆ ಅರಿವಾಯಿತು. ಯಾರಾದರೂ ಸಹಾಯ ಕೇಳಿದಾಗ ನಾನು ಸಹಾಯ ಮಾಡದಿದ್ದರೆ ಎಷ್ಟು ಕಷ್ಟವಾಗುತ್ತದೆ ಎಂದು.
ಅನನ್ಯ ತಲೆಂಗಳ.
5ನೇ ತರಗತಿ
ವಿಶ್ವಮಂಗಳ ಶಾಲೆ ಕೊಣಾಜೆ