ಲಾವಣ್ಯ ನ ಕವನಗಳು
Friday, December 11, 2020
Edit
ಲಾವಣ್ಯ ಎಸ್ ಜಿ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ
ಬಂಟ್ವಾಳ ತಾಲೂಕು
ನಿನ್ನೊಲವ - ಕವನ
ನಿನ್ನೊಲವ ನೋಟ ಕಂಡು
ಮರೆತೆ ನಾ ನನ್ನನೆ...
ನಿನ್ನೊಲವ ಭಾವ ಕಂಡು
ಮರೆತೆ ನಾ ಜಗವನೆ !
ನೀ ಹಾಡುವ ಮಧುರ ಗಾನ
ಕೇಳಲು ಅದೇ ಸವಿಗಾನ ...
ನನ್ನ ಪುಟ್ಟ ಪ್ರಪಂಚದ
ಸುಂದರ ಅರಗಿಣಿ ನೀನು !
ನಿನಗಾಗಿ ಬದುಕುವೆ ನಾನು.
ನಿನ್ನೊಲವ ಉಸಿರಲಿ
ಬೆಸೆಯುವ ಬಂಧ ನಾನು !
ಅಮ್ಮ
ಜನ್ಮವಿತ್ತಳು ಎನಗೆ
ಪ್ರೀತಿ ಕೊಟ್ಟಳು ಮನಕೆ
ಸ್ನೇಹ ಭಾವ ತುಂಬಿದಳು
ಎನ್ನ ಹೃದಯದೊಳಗೆ...
ನನ್ನ ಕಣ್ಣಲ್ಲಿ ಕಣ್ಣೀರು ಬಾರದಂತೆ
ನೋಡಿಕೊಂಡಳು ನನ್ನಮ್ಮ ;
ನನಗಾಗಿ ಎದುರಿಸಿದಳು
ಅದೆಷ್ಟೋ ಕಷ್ಟವನ್ನ.
ಒಂಬತ್ತು ತಿಂಗಳು ಹೊತ್ತು, ಹೆತ್ತು !
ಸಾಕಿ ಸಲುಹಿದಳು ನನ್ನನ್ನು .
ಪ್ರೀತಿ ಮಮತೆ ತುಂಬಿದ ಸ್ವರ್ಗವನ್ನು
ಕಣ್ಣೆದುರಿಗೆ ತಂದಿಟ್ಟಳು ಅಮ್ಮ.
ನಿನಗಾಗಿ ನಾ ಏನ ಮಾಡಿದರೂ ಕಡಿಮೆಯೇ,
ನೀ ನೀಡಿದೆ ಉಸಿರು.
ನೀನೇ ನನ್ನ ಒಡತಿಯು
ಸ್ನೇಹಭಾವ, ಸ್ನೇಹಜೀವಿ ಅಮ್ಮ !
ಕೊನೆಯವರೆಗೂ
ಗೆಳತಿಯಂತೆ ಇರುವಳು ನನ್ನಮ್ಮ.
ಕಲ್ಪನಾಲೋಕದ ವಿಹಾರಿ
ಲಾವಣ್ಯ. ಎಸ್. ಜಿ.