 
ಕೋಗಿಲೆ - ಕವನ
Friday, December 25, 2020
Edit
     ಬಿಂದುಶ್ರೀ 10 ನೇ ತರಗತಿ
                        ಕೋಗಿಲೆ - ಕವನ 
ಓ... ಕೋಗಿಲೆ 
ನಮಗಾಗಿ ಸುಮಧುರ ಹಾಡೊಂದ ಹಾಡೆಲೇ...
ನೀ ನಮ್ಮ ಹತ್ತಿರ ಸುಳಿಯಲಾರೆ 
ನಿನ್ನ ಧ್ವನಿಯ ನಾ ಆಲಿಸದಿರಲಾರೆ.. 
ನೀನೊಮ್ಮೆ ಸುಮಧುರ ಕಂಠದಿಂದ ಹಾಡು 
ನಮಗೆ ಅರ್ಥೈಸು ನಿನ್ನೀ ಜೀವನದ ಪಾಡು !
ಹಾಡಿದರೆ ನೀನೊಮ್ಮೆ ಇಂಪಾಗಿ 
ಆಲಿಸುವೆವು ನಾವು ತನ್ಮಯರಾಗಿ...
ನಿನ್ನ ಸಂಗೀತಕ್ಕೆ ಮನ ಕರಗಿ 
ಪ್ರಕೃತಿಯೇ ತಲೆಬಾಗುವುದು 
ನಿನ್ನ ಸಂಗೀತಸುಧೆಗೆ ಶರಣಾಗಿ !
ಸಪ್ತ ಸ್ವರಗಳು ನಿನ್ನಾದನಿಯಲ್ಲಿ ಮೂಡಿ
ನೀ ಮಾಡಿದೆ ಎಲ್ಲರ ಮನದಲ್ಲಿ ಮೋಡಿ !
ನಿನ್ನ ಬಣ್ಣ ಒಂಥರಾ ಕಪ್ಪು
ಅದ್ಭುತ ನಿನ್ನ ಸಂಗೀತದ ಕಂಪು !!
ನೀನೊಮ್ಮೆ ಹಾಡು.... ನಿತ್ಯ ಹಾಡು
ಹಾಡದಿದ್ದರೆ ಹುಡುಕಿ ಬರುವೆ ನಿನ್ನ ಜಾಡು....!
                                                           ಬಿಂದುಶ್ರೀ 
                                10 ನೇ ತರಗತಿ
                  ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
                                  ಬಂಟ್ವಾಳ        
 
