-->
ನನ್ನ ಕನಸು

ನನ್ನ ಕನಸು

ಅನನ್ಯ..
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜಿ ಕಲ್ಲು.
ಬಂಟ್ವಾಳ ತಾಲೂಕು

                           ನನ್ನ ಕನಸು.....

       ಹೊಸ ವರುಷ ಎಂದರೆ ಏನೋ ಒಂದು ಹೊಸ ಚೈತನ್ಯ. ಆಗ ನಮ್ಮ ಮನಸ್ಸು ಕೂಡಾ ಸಂತೋಷ ಗೊಳ್ಳುತ್ತದೆ..ನಾವು ಮಾಡುವ ಕೆಲಸಗಳು ಕೂಡಾ ಉಜ್ವಲವಾಗುತ್ತದೆ. ಹೊಸ ವರುಷದಲ್ಲಿ ನಮ್ಮಲ್ಲಿ ಬದಲಾವಣೆ ಆಗುವುದನ್ನು ನಾವೇ ಕಂಡು ಕೊಳ್ಳುತ್ತೇವೆ, ಹೊಸ ವಿಷಯಗಳನ್ನು ತಿಳಿಯುತ್ತೇವೆ, ಹಾಗೂ ನಾವು ಹೊಸ ಕನಸ್ಸುಗಳನ್ನು ಕಂಡು ಕೊಳ್ಳುತ್ತೇವೆ..
     ನಾನು ಈ ಹೊಸ ವರುಷದಲ್ಲಿ ಉಜ್ವಲವಾಗಿ ಅಭಿವೃದ್ಧಿ ಗೊಂಡು ಮುಂದಿನ ತರಗತಿಗೆ ಹೋಗಬೇಕು. 10 ನೇ ತರಗತಿಯಲ್ಲಿ ಉತ್ತಮ ಅಂಕವನ್ನು ತೆಗೆದು ನನ್ನ ಶಾಲೆಗೆ, ಶಾಲೆಯ ಶಿಕ್ಷಕರಿಗೆ, ಹಾಗೆ ನನ್ನ ಪ್ರೀತಿಯ ತಂದೆ - ತಾಯಿಗೆ, ಹಾಗೂ ನನ್ನ ಕುಟುಂಬದವರಿಗೆ ಕೀರ್ತಿ ತರಬೇಕು. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ನನ್ನ ತಂದೆ - ತಾಯಿಯ ಜೊತೆಗೆ ಖುಷಿಯಾಗಿ ಇರಬೇಕು. ನನ್ನ ಮುಂದಿನ ಪಿ.ಯು.ಸಿಯಲ್ಲಿ ಒಳ್ಳೆಯ ಶಿಕ್ಷಣ ಪಡೆದು ನನ್ನ ತಂದೆ - ತಾಯಿಗೆ,ಶಿಕ್ಷಕರಿಗೆ ಒಳ್ಳೆಯ ಗೌರವ ತರಬೇಕು. ನಾನು ಎಲ್ಲರಿಗೂ ಸಹಾಯ ಮಾಡಬೇಕು. ನನ್ನ ಭರತನಾಟ್ಯದಲ್ಲಿ ಆಗಿರಬಹುದು,ನಾನು ಒಳ್ಳೆಯ ಸಾಧನೆ ಮಾಡಬೇಕು. ನನಗೆ ಡಾಕ್ಟರ್ ಕೆಲಸ ತುಂಬಾನೇ ಇಷ್ಟ. 
        ಈ ಹೊಸ ವರುಷದಲ್ಲಿ ಜನವರಿ ಮೊದಲ ತಿಂಗಳಲ್ಲಿ ನನ್ನ ಹುಟ್ಟು ಹಬ್ಬದ ದಿನವೂ ನನ್ನ ಜೀವನದ ಅಭಿವೃದ್ಧಿಯ ಮೆಟ್ಟಿಲಾಗಿರಲಿ ಎಂದು ಬಯಸುವೆ. ನನ್ನ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದೇನೆ. ಈ ಹೊಸ ವರುಷದಲ್ಲಿ ಎಲ್ಲ ವೈರಸ್ ಗಳು ದೂರವಾಗಿ ನಮ್ಮ ರಾಷ್ಟ್ರವೂ ಅಭಿವೃದ್ಧಿಯ ಹಾದಿಯತ್ತ ಸಾಗಲಿ ಎಂದು ಆಶಿಸುವೆ.

 ಅನನ್ಯ..
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜಿ ಕಲ್ಲು.
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article