
ಸಾಹುಕಾರ ಮತ್ತು ಮಂಗ - ಕಥೆ
Wednesday, November 18, 2020
Edit
ಕಥೆ: ತನ್ಮಯ್ ಕೃಷ್ಣ ನೇರಳಕಟ್ಟೆ -
8ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಅನಂತಾಡಿ, ಬಂಟ್ಟಾಳ ತಾಲೂಕು
ಸಾಹುಕಾರ ಮತ್ತು ಮಂಗ.
ಒಂದೂರಲ್ಲಿ ಒಬ್ಬ ಸಾಹುಕಾರ ಇದ್ದನು. ಆತನಿಗೆ ತನ್ನ ಊರಿನಲ್ಲಿ ಯಾರು ಮಾಡದಂತಹ ವಿಶೇಷವಾದದ್ದನ್ನು ಮಾಡಬೇಕೆಂಬ ಆಶೆ ಇತ್ತು. ಅದಕ್ಕಾಗಿ ಆತ ಒಂದು ಮಂಕು ಬುದ್ದಿಯ ಮಂಗನನ್ನು ಸಾಕಿದ್ದ. ಆತ ಆ ಮಂಗನಿಗೆ ಬೇಕಾದ ಎಲ್ಲಾ ಸೌಲಭ್ಯ ಮತ್ತು ಊಟೋಪಚಾರವನ್ನು ಮಾಡುತ್ತಿದ್ದ. ಮಂಗವು ಅವನು ಹಾಕಿದ ಎಲ್ಲಾ ಆಹಾರವನ್ನು ತಿಂದು ಗಟ್ಟಿಮುಟ್ಟಾಗಿತ್ತು. ಸಾಹುಕಾರನು ಮಂಗನಿಗೆ ಮಲಗುವಾಗ ಮುಖಕ್ಕೆ ಗಾಳಿ ಬೀಸುವುದನ್ನು ಕಲಿಸಿದ್ದನು. ಹಾಗೂ ಈ ಬಗ್ಗೆ ಊರವರಲ್ಲಿ ಪ್ರಚಾರ ಮಾಡಿ ತಾನು ಸಾಕಿದ ಮಂಗನ ಬಗ್ಗೆ ಹೆಮ್ಮೆ ಪಡುತ್ತಿದ್ದನು.
ಒಂದು ದಿನ ಬೇಸಿಗೆ ಕಾಲದಲ್ಲಿ ಆ ಮಂಗವು ಸಾಹುಕಾರ ಮಲಗುವಾಗ ಆತನ ಮುಖಕ್ಕೆ ಗಾಳಿ ಬೀಸುತ್ತಿತ್ತು . ಆಗ ಒಂದು ನೊಣ ಸಾಹುಕಾರನ ತಲೆ ಮೇಲೆ ಬಂದು ಕುಳಿತಿತು. ಇದನ್ನು ನೋಡಿ ಮಂಗ ಆ ನೊಣವನ್ನು ಓಡಿಸಿತು. ಆದರೆ ಆ ನೊಣ ಪುನಃ ಅಲ್ಲಿಯೇ ಕುಳಿತಿತು. ಮಂಗ ಪುನಃ ಅದನ್ನು ಓಡಿಸಿತು. ಹೀಗೆ ಈ ಆಟ ಐದಾರು ಸಲ ನಡೆಯಿತು. ಕೊನೆಗೆ ಮಂಗನ ಕೋಪ ನೆತ್ತಿಗೇರಿತು. ಆ ಮಂಗ ಅಲ್ಲಿಯೆ ಹತ್ತಿರದಲ್ಲಿದ್ದ ಬಂದೂಕನ್ನು ಎತ್ತಿ ಸಾಹುಕಾರನ ತಲೆ ಮೇಲೆ ಕುಳಿತ್ತಿದ್ದ ನೊಣದ ಕಡೆ ಗುರಿಮಾಡಿ ಬಂದೂಕಿನಲ್ಲಿದ್ದ ಗುಂಡನ್ನು ಹಾರಿಸಿತು. ಅದು ನೇರವಾಗಿ ಹೋಗಿ ಸಾಹುಕಾರನ ತಲೆ ಮೇಲೆ ಬಿದ್ದು ಸಾಹುಕಾರ ಅಲ್ಲಿಯೇ ಸಾವನಪ್ಪಿದನು. ಊರವರೆಲ್ಲ ಸಾಹುಕಾರನ ದುಸ್ಥಿತಿಗೆ ಮರುಗಿದರು.
ನೀತಿ ಏನೆಂದರೆ :- ಯಾವುದೇ ಕೆಲಸಕ್ಕೂ ಅರ್ಹರನ್ನೆ ನೇಮಿಸಬೇಕು ಹಾಗೂ ಸೂಕ್ತ ತರಬೇತಿಯನ್ನು ಕೊಡಬೇಕು
ಕಥೆ : ತನ್ಮಯ್ ಕೃಷ್ಣ 8 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಅನಂತಾಡಿ