ಪ್ರೀತಿಯ ಪುಸ್ತಕ ; ಸಂಚಿಕೆ - 240
Friday, November 27, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 240
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಮಕ್ಕಳಿಗೆ ಮನೆಯಲ್ಲಿ ಕೆಲವೊಮ್ಮೆ ಅಮ್ಮ, ಅಪ್ಪ ಹಣ ಕೊಡುತ್ತಾರೆ; ಕೆಲವೊಮ್ಮೆ ಮನೆಗೆ ಬಂದ ಮಾವ.. ಅತ್ತೆ, ನೆಂಟರು ಕೊಡುತ್ತಾರೆ. ಈ ಹಣವನ್ನು ಮಕ್ಕಳು ಕುಡಿಕೆಯಲ್ಲಿ ಹಾಕಿ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಹಣ ಸಂಗ್ರಹಿಸಿ ಇಡುವುದೇ ದೊಡ್ಡ ಖುಶಿ.
ಈ ಪಸ್ತಕದಲ್ಲಿ.... ಶಾಲೆಯಲ್ಲಿ ಒಮ್ಮೆ ಕಂಪ್ಯೂಟರ್ ಮತ್ತು ಸಂಗ್ರಹಿಸಿದ್ದ ಫೀಸು ಕಳ್ಳತನ ಆಗಿರುತ್ತದೆ. ಆಗ ಮಕ್ಕಳಿಗೆ ತಾವು ಕುಡಿಕೆಯಲ್ಲಿ ಹಣ ಜೋಡಿಸಿಟ್ಟರೆ ಕಳ್ಳತನವಾಗುವ ಭಯ ಶುರು ಆಗುತ್ತದೆ. ಹಣವನ್ನು ಬ್ಯಾಂಕಿನಲ್ಲಿ ಜೋಪಾನವಾಗಿ ಇಡುವುದು ಹೇಗೆ ಎಂಬ ಪ್ರಶ್ನೆಯಿಂದ ಹಿಡಿದು ಹಣದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮಕ್ಕಳು ಬೇರೆ ಬೇರೆ ಅನುಭವ ಕಥನಗಳ ಮೂಲಕ, ಹಣದ ಮೌಲ್ಯ ಅಂದರೇನು; ಖಾತೆ ತೆರೆಯುವುದು ಹೇಗೆ, ಪಾಸ್ ಬುಕ್, ಎ.ಟಿ.ಎಂ ಅಂದರೇನು. ಇವೆಲ್ಲದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದೇ ಈ ಪುಸ್ತಕದ ಸ್ವಾರಸ್ಯ. ಖಂಡಿತವಾಗಿ ಬೆಳೆಯುತ್ತಿರುವ ಈ ವಯಸ್ಸಿನಲ್ಲಿ ಓದಲೇ ಬೇಕಾದ ಪುಸ್ತಕ ಇದು.
ಲೇಖಕರು : ನಾಗೇಶ ಜಿ ವೈದ್ಯ
ಚಿತ್ರಗಳು: ಸಂತೋಷ್ ಸಸಿಹಿತ್ಲು
ಪ್ರಕಾಶಕರು:: ನವಕರ್ನಾಟಕ ಪ್ರಕಾಶನ
ಬೆಲೆ: ರೂ.100/
ಓದುವ ಅಭ್ಯಾಸ ಇದ್ದರೆ 7-8ನೇ ತರಗತಿ ಮಕ್ಕಳು ಓದಬಹುದಾದ ಪುಸ್ತಕ ಇದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ:
ನವಕರ್ನಾಟಕ ಪ್ರಕಾಶನ, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************