-->
ಪ್ರೀತಿಯ ಪುಸ್ತಕ : ಸಂಚಿಕೆ - 235

ಪ್ರೀತಿಯ ಪುಸ್ತಕ : ಸಂಚಿಕೆ - 235

ಪ್ರೀತಿಯ ಪುಸ್ತಕ
ಸಂಚಿಕೆ - 235
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ    

 

                          ಸರ್ವಾಂತರ್ಯಾಮಿ
ಪ್ರೀತಿಯ ಮಕ್ಕಳೇ... ಅರೆ, ಈ ಸರ್ವಾಂತರ್ಯಾಮಿ ಅಂದರೆ ಏನು? ಬಹಳ ಸರಳ. ಎಲ್ಲೆಲ್ಲೂ ಇರುವಂಥವು ಎಂದರ್ಥ. ದೇವರನ್ನು ಹಾಗೆ ಹೇಳುವುದು ಕೇಳಿದ್ದೇವೆ. ಇಲ್ಲಿ ಯಾರು ಸರ್ವಾಂತರ್ಯಾಮಿ ಇದ್ದಾರೆ. ಮೈಕ್ರೋಸ್ಕೋಪ್ ಮೂಲಕ ನೋಡಿದರೆ ಕಣ್ಣಿಗೆ ಕಾಣುತ್ತವಲ್ಲಾ ಸೂಕ್ಷ್ಮಾಣು ಜೀವಿಗಳು.. ಅವೇ. ಎಲ್ಲಾ ಕಡೆ ಹೇಗೆ ಪಸರಿಸಿಕೊಂಡಿವೆ ಎಂಬುದನ್ನು ಇಲ್ಲಿ ಓದಿ ತಿಳಿದುಕೊಳ್ಳಬಹುದು. ಭೂಮಿಯ ಮೇಲೆ ಅಷ್ಟೇ ಅಲ್ಲ, ಅಂತರಿಕ್ಷದಲ್ಲಿ ಸುತ್ತುತ್ತಿರುವ ಗಗನ ನೌಕೆಯಲ್ಲೂ ಅವು ಇವೆಯಂತೆ. ಇವುಗಳಲ್ಲಿ ಕೆಲವು ನಮಗೆ ಸಹಕಾರಿಯೂ ಹೌದು, ಇನ್ನು ಕೆಲವು ಅಪಾಯಕಾರಿಯೂ ಆಗಿವೆ. ಇರಲಿ, ಈ ಪುಸ್ತಕದಲ್ಲಿ ಮಕ್ಕಳು ತಮ್ಮ ಬೇಸಿಗೆ ರಜೆಯಲ್ಲಿ ಪ್ರಾಜೆಕ್ಟ್ ಮಾಡುತ್ತಾ ಸೂಕ್ಷ್ಮಜೀವಿಗಳ ಬಗ್ಗೆ ತಿಳಿದುಕೊಳ್ಳುವ ವಿವರ ಇದೆ. ಇದೊಂದು ಸಣ್ಣ ಜೀವಿಗಳ ಮಾಂತ್ರಿಕ ಲೋಕ. ಕಣ್ಣಿಗೆ ಕಾಣಿಸುವ ಜೀವಿಗಳ ಬಗ್ಗೆ ನಮಗೆ ಒಂದಷ್ಟು ಗೊತ್ತು. ಸೂಕ್ಷ್ಮಾಣು ಜೀವಿಗಳ ಲೋಕ ತಿಳಿಯಲು ನಿಮಗೆ ಸ್ವಾಗತ. 

ಲೇಖಕರು : ಮೈತ್ರಿ ಬೆಂಗಳೂರು
ಚಿತ್ರಗಳು : ಹರಿಶ್ಚಂದ್ರ ಶೆಟ್ಟಿ 
ಪ್ರಕಾಶಕರು : ನವಕರ್ನಾಟಕ ಪ್ರಕಾಶನ
ಬೆಲೆ: ರೂ.90/  

ಇದು ಹದಿಹರೆಯದ ಮಕ್ಕಳು ಓದಬಹುದಾದ ಪುಸ್ತಕ.

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪ್ರಕಾಶನ, navakarnataka@gmail.com; www.navakrnataka.com.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article