ಪ್ರೀತಿಯ ಪುಸ್ತಕ : ಸಂಚಿಕೆ - 232
Friday, October 2, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 232
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಅಂಜೂರದ ಹೂವು, ತುಂಬಾ ಸುಂದರವಾದ ಹೂವಂತೆ. ಅದನ್ನು ನೋಡಲು ಎಲ್ಲರೂ ತವಕಿಸುತ್ತಾರೆ. ಅದರ ಬಗ್ಗೆ ಅನೇಕ ಕಥೆಗಳಿವೆ. ಪಿರ್ಕು ಮತ್ತು ಸಾನಿಶ್ ಗೆಳತಿಯರು. ರಿಂಚು ಪಿರ್ಕುವಿನ ತಂಗಿ. ಈ ಗೆಳತಿಯರು ರಿಂಚುವನ್ನು ದೂರ ಇಡುತ್ತಿದ್ದರು. ಇಬ್ಬರೂ ಸೇರಿ ಯಾರೂ ನೋಡಿರದ ಅಂಜೂರದ ಹೂವನ್ನು ತಾವು ನೋಡಿಲ್ಲದಿದ್ದರೂ ನೋಡಿದ್ದಾಗಿ, ಕತೆ ಕಟ್ಟುತ್ತಾ ರಿಂಚುವನ್ನು ಸತಾಯಿಸತೊಡಗಿದರು. ರಿಂಚು ಹೂವು ನೋಡಲು ಆಸೆ ಪಟ್ಟಾಗ, ಆ ಹೂವು ಬಗ್ಗೆ ಏನೇನೋ ವಿಚಿತ್ರ ವಿಚಿತ್ರ ಸುದ್ದಿ ಹೇಳತೊಡಗಿದರು. ಅದು ಅರಳುತ್ತದೆ, ಎಲ್ಲರಿಗೂ ನೋಡ ಸಿಗುವುದಿಲ್ಲ. ಹಾಗೆ ಹೀಗೆ ಅಂತ. ರಿಂಚು ತಲೆಯಲ್ಲಿ ಒಂದೇ ಆಸೆ. ಅಂಜೂರದ ಹೂವನ್ನು ನೋಡುವುದು. ಯಾರನ್ನು ಕೇಳಿದರೂ = ಅದನ್ನು ನೋಡಲು ಅದೃಷ್ಟ ಬೇಕು – ಅಂತ ಹೇಳುತ್ತಿದ್ದರು. ಕೊನೆಗೂ ರಿಂಚು ಅಂಜೂರದ ಹೂವನ್ನು ನೋಡಿದಳೇ! ಅದು ನಿಜವಾಗಿಯೂ ಹೇಗಿತ್ತು..? ಎಂಬುದನ್ನು ಸುಂದರವಾದ ಚಿತ್ರಗಳೊಂದಿಗೆ ವಿವರಿಸಿದ್ದಾರೆ. ನೋಡಲು ಓದಲು ಖುಶಿ ಅನಿಸುತ್ತದೆ.
ಕಥೆ: ರಿಂಚಿನ್
ಅನುವಾದ: ನಂದಾ ದೇವಿ ಬಿ.ಜಿ
ಚಿತ್ರಕಲೆ: ವಿಪುಲ್ ವರ್ಮ
ಪ್ರಕಾಶಕರು: ತುಲಿಕಾ
ಬೆಲೆ: ರೂ.150/
ತುಲಿಕಾ ಪ್ರಕಾರ ಇದು 6+ ವಯಸ್ಸಿನವರಿಗಾಗಿ ಇದೆ
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ:
◾ಪ್ರಥಮ್ ಬುಕ್ಸ್ :
▪️080 – 42052574/41159009
▪️www.prathambooks.org;
▪️www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************