ಪ್ರೀತಿಯ ಪುಸ್ತಕ : ಸಂಚಿಕೆ - 230
Saturday, September 19, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 230
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೆಸರು ಸುಂದರಬಾಗ್, ಅದು ರಸ್ತೆಯ ಗುಜರಿ ವಸ್ತುಗಳನ್ನು ಸಂಗ್ರಹ ಮಾಡುವ ಸ್ಥಳ. ಅಲ್ಲಿಗೆ ಜಾರಾ ಎಂಬ ಹುಡುಗಿ ಬರುತ್ತಾಳೆ. ಒಬ್ಬಳೇ ಕಾಲ ಕಳೆಯುತ್ತಾಳೆ. ಒಂದು ದಿನ ಅಲ್ಲಿಗೆ ಮಿಸ್. ಗಪ್ಪಿ ಬರುತ್ತಾರೆ. ಜಾರಾಳ ಮನಸ್ಸಿನಲ್ಲಿ ಹೊಸ ಆಲೋಚನೆಯನ್ನು ಬಿತ್ತುತ್ತಾರೆ. ಅದು ಎಂತಹ ಆಲೋಚನೆ? ಈ ಹಿಂದೆ ಇದೇ ಜಾಗದಲ್ಲಿ ಹೂವಿನ ಹಾಸಿಗೆ ಬೆಳೆದಿತ್ತು.. ಮೇಲಿನಿಂದ ಬಂಗಾರದ ಮಳೆ ಬೀಳುತ್ತಿತ್ತು.. ಊಹೆ ಮಾಡಲೂ ಸಾಧ್ಯವಿಲ್ಲ – ಎಂದು ಗಪ್ಪಿ ಹೇಳಿದ ಮಾತು ಜಾರಾಗೆ ನಾಟಿತ್ತು. ಮನದೊಳಗಿನ ಬೀಜ ಮೊಳಕೆಯೊಡೆದಿತ್ತು. ಹೂವಿನ ತೋಟದ ಕನಸು ಅರಳಿತ್ತು. ಕನಸು ಹೇಗೆ ನನಸಾಯಿತು ಓದಿ ನೋಡಿ. ನಿಮಗೂ ಇಂತಹ ಅನುಭವಗಳು ಆಗಿರಬಹುದು. ನೀವೂ ಬರೆಯಿರಿ.
ಕಥೆ : ನಂದಿತಾ ದಾ ಕುನ್ಹ
ಕನ್ನಡಕ್ಕೆ: ದೀಪದ ಮಲ್ಲಿ
ಚಿತ್ರಗಳು: ಪ್ರಿಯಾ ಕುರಿಯನ್
ಪ್ರಕಾಶಕರು:: ಬಹುರೂಪಿ
ಬೆಲೆ: ರೂ.140/
5-6ನೇ ತರಗತಿಯ ಮಕ್ಕಳು ಓದಿಕೊಳ್ಳಹುದು. ಇದು ಚಿಕ್ಕ ಮಕ್ಕಳಿಗೂ ಓದಬಹುದಾದ ಪುಸ್ತಕ.
▪️ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ :
▪️Bahuroopi, fire Flies
▪️whatsapp bookstore – 7019182729 ▪️online bookstore – bahuroopi.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************