ಪ್ರೀತಿಯ ಪುಸ್ತಕ : ಸಂಚಿಕೆ - 229
Saturday, September 12, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 229
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಕಾಡಿನ ಹುಲಿ ನಮಗೆ ಗೊತ್ತು. ನದಿಯ ಹುಲಿ ಯಾರು ಗೊತ್ತೇ? ಇದು ಅದ್ಭುತವಾದ ಮಹಶೀರ್ ಎಂಬ ವಿಶೇಷ ಮೀನು. ಅದರ ಹೆಸರು ಮತಿಶಾ. ಜಗತ್ತಿನ ಅತ್ಯಂತ ದೊಡ್ಡ ಮತ್ತು ಸುಂದರ ಸಿಹಿ ನೀರಿನ ಮೀನುಗಳಲ್ಲಿ ಇದೂ ಒಂದು. ಸಾಹಸ ಮಾಡಲು ಇಷ್ಟ ಮತೀಶಾಗೆ. ನದಿಯನ್ನು ಮತ್ತು ಸುತ್ತಲಿನ ಕಾಡನ್ನು ಗಮನಿಸುತ್ತಾಳೆ. ಅನೇಕ ಪ್ರಾಣಿಗಳನ್ನು ಭೇಟಿ ಮಾಡುತ್ತಾಳೆ. ತನ್ನನ್ನು ಹಿಡಿದು ತಿನ್ನಲು ಆಸೆಪಡುವ ಹಸಿದ ಹಕ್ಕಿ, ಮೊಸಳೆ ಹಾಗೂ ನೀರುನಾಯಿಗಳಿಂದ ತಪ್ಪಿಸಿಕೊಳ್ಳುವುದೇ ಒಂದು ಚಂದ. ಈ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ಅಪಾಯಕಾರಿ ಪ್ರಾಣಿ ‘ಮನುಷ್ಯ’ ಎಂಬುದೂ ಅವಳಿಗೆ ಗೊತ್ತಾಗಿದೆ. (ಹೌದೇ ಮನುಷ್ಯರು ಅಪಾಯಕಾರಿ ಪ್ರಾಣಿಯೇ? ನಿಮಗೆ ಏನು ಅನಿಸುತ್ತದೆ? ) ಇರಲಿ, ನದಿಯ ಪ್ರವಾಹಕ್ಕೆ ಎದುರಾಗಿ ವಲಸೆಹೋಗಿ ತನ್ನ ಮೊಟ್ಟೆಗಳನ್ನು ಇಡಲು ಮತೀಶಾ ಮಾಡುವ ಅದ್ಭುತ ಸಾಹಸಗಳನ್ನು ಓದಿ ನೋಡಿ. ಚಿತ್ರಗಳೂ ಬಹಳ ಮೋಹಕವಾಗಿವೆ.
ಕಥೆ: ಏಡ್ರಿಯನ್ ಪಿಂಡರ್
ಕನ್ನಡಕ್ಕೆ: ಅಪೂರ್ವ ಬಿ ಎ
ಚಿತ್ರಗಳು: ಮಾಯಾ ರಾಮಸ್ವಾಮಿ
ಪ್ರಕಾಶಕರು::ಬಹುರೂಪಿ
ಬೆಲೆ: ರೂ.140/
▪️ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ-:
▪️Bahuroopi, fire Flies;
▪️whatsapp bookstore – 7019182729;
▪️online bookstore – bahuroopi.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************