-->
ಪ್ರೀತಿಯ ಪುಸ್ತಕ : ಸಂಚಿಕೆ - 227

ಪ್ರೀತಿಯ ಪುಸ್ತಕ : ಸಂಚಿಕೆ - 227

ಪ್ರೀತಿಯ ಪುಸ್ತಕ
ಸಂಚಿಕೆ - 227
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                            ಅಮ್ಮ ಮತ್ತು ನಾನು 
ಪ್ರೀತಿಯ ಮಕ್ಕಳೇ... ಮನೆಯಲ್ಲಿ ಅಮ್ಮ ಇಲ್ಲದೇ ಹೋದರೆ ಹೇಗಿರುತ್ತದೆ? ಮನೆ, ಮನೆ ಅಂತಾನೇ ಅನಿಸುವುದಿಲ್ಲ... ಅಂತ ಈ ಹುಡುಗಿ ಹೇಳುತ್ತಾಳೆ. ನಿಮಗೆ ಹೇಗೆ ಅನಿಸುತ್ತದೆ? ಆ ದಿನ ಅವಳ ಮನೆಯಲ್ಲಿ ಸಂಭ್ರಮ. ಅಮ್ಮ ಬರುತ್ತಿದ್ದಾರೆ. ಅಜ್ಜಿ ಅಮ್ಮನಿಗಾಗಿ ಒಗ್ಗರಣೆ ಅವಲಕ್ಕಿ ಮಾಡುತ್ತಿದ್ದಾಳೆ. ಅಜ್ಜಿ ಯಾವಾಗಲೂ ಹೇಳುತ್ತಾರೆ, ಅವಳು ನೋಡುವುದಕ್ಕೆ ಥೇಟ್ ಅಮ್ಮನ ತರಹ ಅಂತ. ಅವಳಿಗೂ ಅದು ಇಷ್ಟ ಅಮ್ಮ ಆಸ್ಪತ್ರೆಯಿಂದ ಬಂದೇ ಬಿಡುತ್ತಾರೆ. ಆದರೆ ಅಮ್ಮನ ಸೊಗಸಾದ ಉದ್ದ ಕೂದಲು ಇರುವುದಿಲ್ಲ. ಅವಳಿಗೆ ಅದು ವಿಚಿತ್ರ ಅನಿಸುತ್ತದೆ ಡಾಕ್ಟರ್ ಮೇಲೆ ಕೋಪ ಬರುತ್ತದೆ. ಅಮ್ಮನ ಮೇಲೂ ಕೋಪ ಬರುತ್ತದೆ. ಈಗ ಅವಳು ಅಮ್ಮನ ತರಹ ಕಾಣುವುದಿಲ್ಲವಲ್ಲಾ.. ಅದಕ್ಕಾಗಿ ಅಮ್ಮನ ತರಹ ಕಾಣಲು ಏನೇನು ಮಾಡುತ್ತಾಳೆ ನೋಡಿ. ಇದು ತನ್ನ ಗುರುತನ್ನು ಹುಡುಕುವ ಒಂದು ಮಗುವಿನ ಮುದ್ದಾದ ಕತೆ. 

ಕಥೆ: ಮಮತಾ ನೈನಿ
ಕನ್ನಡಕ್ಕೆ: ಕುಸುಮ ಪಟೇಲ್ 
ಚಿತ್ರಗಳು: ಸಂಕೇತ್ ಪೇಟ್ಕರ್ 
ಪ್ರಕಾಶಕರು:: ಬಹುರೂಪಿ 
ಬೆಲೆ: ರೂ.130/  

◾ಓದಲು ಬರುವ 3ನೇ, 4ನೇ ತರಗತಿಯ ಮಕ್ಕಳು ಇದನ್ನು ಓದಬಹುದು. ದೊಡ್ಡ ಮಕ್ಕಳಿಗೂ ಅನ್ವಯವಾಗುವ ಕತೆ. 

◾ ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ-: Bahuroopi, fire Flies; whatsapp bookstore – 7019182729; online bookstore – bahuroopi.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 






Ads on article

Advertise in articles 1

advertising articles 2

Advertise under the article