ಪ್ರೀತಿಯ ಪುಸ್ತಕ : ಸಂಚಿಕೆ - 226
Saturday, August 22, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 226
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಮಾಯಾ ಸಿಲಿಂಡರ್ ಹೆಸರು ಕೇಳುವಾಗ ಕುತೂಹಲ ಅನಿಸುತ್ತದಲ್ಲಾ.. ಹೌದು, ಇದು ಕುತೂಹಲಕಾರಿಯೂ ಇದೆ, ವೈಜ್ಞಾನಿಕ ಮಾಹಿತಿಯೂ ಇದೆ. ವಿಲಾಸ್ ಮತ್ತು ನಿನಾದ್ ಚಿಖಲ್ ಗಾಂವ್ ನಲ್ಲಿ ನೆರೆಹೊರೆಯವರು. ಈ ಹಳ್ಳಿ ಇರುವುದು ಹುಲಿಗಳ ನೆಲೆಯಾದ ತಡೋಬಾ ಕಾಡಿನ ಪಕ್ಕದಲ್ಲಿ. ಅಲ್ಲಿಯವರು ಅಡುಗೆ ಮಾಡಲು ಕಟ್ಟಿಗೆಗಾಗಿ ಕಾಡನ್ನು ಅವಲಂಬಿಸಿದ್ದಾರೆ. ಅದಕ್ಕಾಗಿ ಮರಗಳನ್ನೂ ಕಡಿಯಬೇಕಾಗುತ್ತದೆ. ಇದರಿಂದ ಕಾಡು ಕುಗ್ಗುತ್ತದೆ. ಜನರು ಹುಲಿ ಚಿರತೆಗಳಿಂದ ಅಪಾಯವನ್ನೂ ಎದುರಿಸಬೇಕಾಗುತ್ತದೆ. ಹೀಗಿರಬೇಕಾದರೆ ವಿಲಾಸ್ ಕಟ್ಟಿಗೆಗಾಗಿ ಕಾಡಿಗೆ ಹೋಗುವುದು ಕಡಿಮೆಯಾಗಿರುತ್ತದೆ. ಅವರು ಅಡುಗೆ ಮಾಡಲು, ನೀರು ಕಾಯಿಸಲು ಒಂದು ‘ಮಾಯಾ ಸಿಲಿಂಡರನ್ನು’ ಪಡೆದುಕೊಳ್ಳುತ್ತಾರೆ. ಈ ಸಿಲಿಂಡರ್ ಗೆ ಕಡಿಮೆ ಕಟ್ಟಿಗೆ ಸಾಕು. ಈ ಮಾಯಾ ಸಿಲಿಂಡರ್ ಆಮೇಲೆ ಎಲ್ಲರಿಗೂ ಪ್ರಿಯವಾಯಿತು. ಓದಿದರೆ ನಿಮಗೂ ಪ್ರಿಯವಾಗಬಹುದು.
ಲೇಖಕರು : ಮೀನು ಥಾಮಸ್
ಅನುವಾದ: ಕೃಪಾಕರ್ ಸೇನಾನಿ
ಚಿತ್ರಗಳು: ರೋಹಿತ್ ಕೇಲ್ಕರ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: 80/
◾ಪ್ರಥಮ್ ಪ್ರಕಾರ ಇದು 4ನೇ ಹಂತದ ಪುಸ್ತಕ. ಸುಲಭವಾಗಿ ಓದುವ ಸಾಮರ್ಥ್ಯವಿರುವ ಮಕ್ಕಳಿಗಾಗಿ; ವಿಶ್ವಾಸದಿಂದ ಓದಬಲ್ಲಂತಹ ದೊಡ್ಡ ಮಕ್ಕಳಿಗಾಗಿ
◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ:
ಪ್ರಥಮ್ ಬುಕ್ಸ್ – 42052574/41159009;
◾ www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*******************************************