-->
ಪ್ರೀತಿಯ ಪುಸ್ತಕ : ಸಂಚಿಕೆ - 225

ಪ್ರೀತಿಯ ಪುಸ್ತಕ : ಸಂಚಿಕೆ - 225

ಪ್ರೀತಿಯ ಪುಸ್ತಕ
ಸಂಚಿಕೆ - 225
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


          ಆದಿಲ್ ಮಾತಾಡಿದರೆ ಪದಗಳು ಕುಣಿಯುತ್ತವೆ
ಪ್ರೀತಿಯ ಮಕ್ಕಳೇ.... ಆದಿಲ್ ಜೊತೆಗೆ ಸ್ನೇಹ ಬೆಳೆಸಿಕೊಳ್ಳುವ ಆಸೆ ನಿಮಗೆ ಇದೆಯೇ? ಅವನು ಗಾಳಿಯಂತೆ ಓಡುತ್ತಾನೆ. ಮೀನಿನಂತೆ ಈಜುತ್ತಾನೆ. ಎತ್ತರದ ಮರಗಳನ್ನು ಏರುತ್ತಾನೆ. ಅವನಿಗೆ ಶಬ್ದಗಳು ಸರಿಯಾಗಿ ಕೇಳುವುದಿಲ್ಲ. ಕೇಳಲು ಆಗದ ಕಾರಣ ಮಾತಾಡುವಲ್ಲಿಯೂ ತೊಂದರೆ ಅನುಭವಿಸುತ್ತಾನೆ. ಕೇಳಿಸಿಕೊಳ್ಳಲು ಆಗದೇ ಹೋದರೂ ಅವನು ಕೈ-ಕಾಲುಗಳ ಮೂಲಕ ಸಂಗೀತದ ಕಂಪನಗಳನ್ನು ಗ್ರಹಿಸಬಲ್ಲ. ತುಟಿಯ ಚಲನೆಗಳನ್ನು ಓದಬಲ್ಲ. ಸಂಕೇತ ಭಾಷೆಯನ್ನು ಕಲಿತಿದ್ದಾನೆ. ಬೆರಳುಗಳನ್ನು ಕುಣಿಸುತ್ತಾ ಮಾತಾಡುತ್ತಾನೆ. ಪ್ರತಿಯೊಂದು ಚಲನೆಗೂ ಅರ್ಥವಿದೆ. ಇಷ್ಟು ನೀವು ಅರ್ಥಮಾಡಿಕೊಂಡರೆ ನಿಮಗೆ ಅವನ ಜೊತೆಗೆ ಸ್ನೇಹ ಬೆಳೆಸುವುದು ಸಾಧ್ಯ. ಈ ಪುಸ್ತಕದ ಚಿತ್ರಗಳು ಆದಿಲ್ ನ ಲೋಕವನ್ನು ನಮ್ಮ ಎದುರು ತೆರೆದಿಡುತ್ತವೆ. ಬೆರಳುಗಳ ಕುಣಿತದ ಚಿತ್ರಗಳನ್ನು ಕಾಣಬಹುದು. ಓದುವುದು ಮಾತ್ರವಲ್ಲ ಆದಿಲ್ ಜೊತೆ ಸ್ನೇಹ ಬೆಳೆಸಿಕೊಳ್ಳಿ. 

ಲೇಖಕರು : ಲಾವಣ್ಯ ಕಾರ್ತಿಕ್  
ಅನುವಾದ: ಗಿರೀಶ್ ಜಕಾಪುರೆ
ಚಿತ್ರಗಳು: ಲಾವಣ್ಯ ಕಾರ್ತಿಕ್  
ಪ್ರಕಾಶಕರು: ಬಹುರೂಪಿ
ಬೆಲೆ: ರೂ.130/

◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 
Bahuroopi, fire Flies;  
whatsapp bookstore – 7019182729;
online bookstore – bahuroopi.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************



Ads on article

Advertise in articles 1

advertising articles 2

Advertise under the article