-->
ಪ್ರೀತಿಯ ಪುಸ್ತಕ : ಸಂಚಿಕೆ - 223

ಪ್ರೀತಿಯ ಪುಸ್ತಕ : ಸಂಚಿಕೆ - 223

ಪ್ರೀತಿಯ ಪುಸ್ತಕ
ಸಂಚಿಕೆ - 223
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


      ಚಿಟ್ಟಿ – ಎಂಬ ನಾಯಿ ಮತ್ತು ಅವಳ ಕಾಡಿನತೋಟ 
ಪ್ರೀತಿಯ ಮಕ್ಕಳೇ... ನಾಯಿ, ಬೆಕ್ಕು, ಇನ್ನೂ ಒಂದಷ್ಟು ಪ್ರಾಣಿಗಳನ್ನು ಸಾಕುವುದು ಪ್ರೀತಿಸುವುದು ಒಂದು ಚಂದದ ಅನುಭವ ಅಲ್ಲವೇ? ಚಿಟ್ಟಿಯ ಜೀವನ ಸಾಗಿದ್ದು ಪಶ್ಚಿಮ ಘಟ್ಟಗಳ ಕಾಡು ತೋಟದಲ್ಲಿ. ಬೇಕು ಬೇಕಾದ ಹಾಗೆ ವಿಹರಿಸುತ್ತಾ ಬೇರೆ ಬೇರೆ ಕಾಡು ಪ್ರಾಣಿಗಳನ್ನು ಎದುರಿಸಿದ ಕತೆಗಳನ್ನು ನೀವು ಕೇಳಬೇಕು. ಈ ಚಿಟ್ಟಿಗೆ ಹಲಸಿನ ಹಣ್ಣಿನ ಚಿಪ್ಸ್ ಅಂದರೆ ಪ್ರಾಣ. ಹಾಗೆಯೇ ಮೀನು ಅಂದರೂ ಇಷ್ಟ. ಮೀನು ಮಾರಿಕೊಂಡು ಬರುವ ಮುನಾಫ್ ಬಾಯ್ ಗೆ ಚಿಟ್ಟಿಯೇ ಮೊದಲ ಗಿರಾಕಿ. ಅವನೊಂದು ಮೀನು ಎತ್ತಿ ‘ಹಿಡ್ಕೋ’ ಅಂತ ಮೇಲಕ್ಕೆ ಎಸೆಯುವುದು, ಚಿಟ್ಟಿ ಚಂಗನೆ ಹಾರಿ ಅದನ್ನು ಹಿಡಿದು ತಿನ್ನುವ ದೃಶ್ಯವೇ ಚಂದ. ಚಿಟ್ಟಿಯ ಇಂತಹ ಹತ್ತು ಹಲವು ಅನುಭವಗಳನ್ನು ನೀವು ಇದರಲ್ಲಿ ಓದಬಹುದು. ಜೊತೆಗೆ ನೀವು ಕಂಡ ನಾಯಿ ಬೆಕ್ಕುಗಳ ಕತೆಗಳನ್ನು ಬರೆಯಬಹುದು. 

ಲೇಖಕರು : ಸೆರೋ
ವಿನ್ಯಾಸ: ರಾಜೀವ್ ಐಪ್
ಚಿತ್ರಗಳು: ತನ್ವಿ ಭಟ್
ಪ್ರಕಾಶಕರು:: ಬಹುರೂಪಿ
ಬೆಲೆ: ರೂ.140/  

ಓದುವ ಹವ್ಯಾಸ ಇರುವ ಮಕ್ಕಳಾದರೆ, 5-6 ತರಗತಿಯ ಮಕ್ಕಳು ಓದಿಕೊಳ್ಳಬಹುದು. ದೊಡ್ಡವರು ಗಟ್ಟಿ ಓದು ಮಾಡಬಹುದು. 

▪️ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 
Bahuroopi, fire Flies;  
whatsapp bookstore – 7019182729;
online bookstore – bahuroopi.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article