-->
ಪ್ರೀತಿಯ ಪುಸ್ತಕ : ಸಂಚಿಕೆ - 222

ಪ್ರೀತಿಯ ಪುಸ್ತಕ : ಸಂಚಿಕೆ - 222

ಪ್ರೀತಿಯ ಪುಸ್ತಕ
ಸಂಚಿಕೆ - 222
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                              ನೀನು ಮರಕುಟಿಕವೇ?
ಪ್ರೀತಿಯ ಮಕ್ಕಳೇ... ಕಿಲಿ ಮತ್ತು ಕಿಲನ್ ಎರಡು ಗಿಳಿಗಳು. ಎತ್ತರದ ಮರವೊಂದರಲ್ಲಿ ವಾಸವಾಗಿದ್ದವು. ಒಂದು ದಿನ ಬಿರುಗಾಳಿಗೆ ಮರ ನೆಲಕ್ಕೆ ಉರುಳಿತು. ಅದರ ಜೊತೆಗೆ ಕಿಲಿ ಕಿಲನ್ ಅವರ ಮನೆಯೂ ಬಿದ್ದು ಹೋಯಿತಲ್ಲಾ. ಇಬ್ಬರೂ ಜೋರಾಗಿ ಅಳತೊಡಗಿದರು. ಇವರ ಅಳು ಕೇಳಿಸಿಕೊಂಡ ಕಾಗೆ ಹತ್ತಿರ ಬಂದು ವಿಚಾರಿಸಿತು. ಕಿಲಿ-ಕಿಲನ್ ನಮಗೆ ಮನೆಯಿಲ್ಲ ಅಂತ ಅಳುತ್ತಾ ಹೇಳಿದರು. ಮರದಲ್ಲಿ ಗೂಡು ಕೊರೆಯುವ ಮರಕುಟಿಕ ಹಕ್ಕಿಯನ್ನು ಕೇಳಿದರೆ ಸಹಾಯ ಸಿಗಬಹುದು ಅಂತ ಕಾಗೆ ಅವರಿಗೆ ಸಲಹೆ ನೀಡಿತು. ಅಂತೆಯೇ ಮರಕುಟಿಕವನ್ನು ಹುಡುಕುತ್ತಾ ಕಿಲಿ – ಕಿಲನ್ ಹೊರಟರು. ಹೋಗುತ್ತಾ ಹೋಗುತ್ತಾ ದಾರಿಯಲ್ಲಿ ಬೇರೆ ಬೇರೆ ಹಕ್ಕಿಗಳು ಸಿಕ್ಕವು, ಅವು ಗೂಡು ಕಟ್ಟಿಕೊಳ್ಳುವ ಹೊಸ ಹೊಸ ರೀತಿಯೂ ತಿಳಿಯಿತು. ಪುಸ್ತಕ ಓದಿದರೆ ಅವೆಲ್ಲಾ ನಿಮಗೂ ತಿಳಿಯುತ್ತದೆ. ಕೊನೆಗೆ ಕಿಲಿ ಕಿಲನ್ ಗೆ ಯಾರು ಸಹಾಯ ಮಾಡಿದರು ಅಂತ ಕೂಡಾ ತಿಳಿಯುತ್ತದೆ.

ಲೇಖಕರು : ಸುಹೇಲ್ ಖಾದರ್  
ಅನುವಾದ: ಹೇಮಾ ಖುರ್ಸಾಪುರ್
ಚಿತ್ರಗಳು : ಕಲ್ಯಾಣಿ ಗಣಪತಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/

ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವ ಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೇ ತಾನೆ ಓದುವ ಮಕ್ಕಳಿಗಾಗಿ.

◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 
▪️ಪ್ರಥಮ್ ಬುಕ್ಸ್ – 42052574/41159009; ▪️www.prathambooks.org
▪️www.storyweaver.org.in.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*****************************************


Ads on article

Advertise in articles 1

advertising articles 2

Advertise under the article