ಪ್ರೀತಿಯ ಪುಸ್ತಕ : ಸಂಚಿಕೆ - 220
Sunday, July 12, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 220
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಅಜ್ಜಿ ಕತೆ ಕೇಳುವುದು ಅಂದರೆ ನಮಗೆ ಬಹಳ ಇಷ್ಟವಿತ್ತು. ಈಗ ನಾನೇ ಅಜ್ಜಿಯಾದಾಗ ನಿಮ್ಮಂತಹ ಮಕ್ಕಳಿಗೆ ಕತೆ ಹೇಳುವುದೂ ಇಷ್ಟ. ನಿಮಗೂ ಕತೆ ಇಷ್ಟವೆಂದರೆ, ಈ ಪುಟ್ಟಜ್ಜಿ ಹೇಳುವ ಕತೆ ಓದಿ ಅಥವಾ ಓದಿಸಿಕೊಳ್ಳಿ.
ಇದರಲ್ಲಿ 15 ಕತೆಗಳಿವೆ. ಪುಟ್ಟಜ್ಜಿ ದೊಡ್ಡ ಕತೆ, ಸಣ್ಣ ಕತೆ, ಪುಟಾಣಿ ಕತೆ, ತಮಾಷೆ ಕತೆ, ಹಾಡ್ಗತೆ ಹೀಗೇ ತರತರಹದ ಕತೆ ಹೇಳುತ್ತಾಳೆ. ಈ ಪುಸ್ತಕದ ತುಂಬಾ ಹಾಡ್ಗತೆಗಳು ಇವೆ. ಅದರಲ್ಲಿ ಹಾಡೂ ಇರುತ್ತೆ, ಕತೇನೂ ಇರುತ್ತೆ. “ಪುಟ್ಟದೊಂದು ಊರು ಹೊರಗೆ; ಒಂದು ಹಳ್ಳ ಹರಿದಿದೆ; ಹಳ್ಳ ಅಲ್ಲಿ ಹರಿದು ಹರಿದು ಊರ ಜನರ ಪೊರೆದಿದೆ: ಹರಿವ ಹಳ್ಳ ಊರಿಗೊಂದು ಸೊಬಗ ತಂದು ಕೊಟ್ಟಿದೆ; ಹಸಿರು ಕಾಡು ಮರಗಳಲ್ಲಿ; ಹಕ್ಕಿ ಹಾಡು ಕೇಳಿದೆ – ಹೀಗೇ ಅನೇಕ ಹಾಡುಗಳು ಸುಂದರವಾಗಿ ಇವೆ.
ಲೇಖಕರು: ಡಾ.ನಾ.ಡಿಸೋಜ
ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
ಬೆಲೆ: ರೂ.160/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 9449886390
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************