ಪ್ರೀತಿಯ ಪುಸ್ತಕ : ಸಂಚಿಕೆ - 219
Saturday, July 4, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 219
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ನಿಮಗೆ ಹಣ ಸಂಗ್ರಹ ಮಾಡುವ ಅಭ್ಯಾಸ ಇದೆಯೇ? ಅಜ್ಜಿ, ಮಾವ, ಅತ್ತೆ ಹೀಗೇ ಯಾರಾದರೂ ಕೊಟ್ಟ ಹಣವನ್ನು ಕೂಡಿಟ್ಟು ಅದನ್ನು ಆಗಾಗ ಲೆಕ್ಕ ಮಾಡುವುದು, ಹೆಚ್ಚಾಗುವಾಗ ಸಂಭ್ರಮ ಪಡುವುದು ಒಂದು ಚಂದದ ಅನುಭವ. ಆಮೇಲೆ ಅದನ್ನು ಮನ ಮೆಚ್ಚುವ ರೀತಿಯಲ್ಲಿ ಖರ್ಚು ಮಾಡುವುದಂತೂ ಭಾರೀ ಆನಂದ. ಈ ಪುಸ್ತಕದಲ್ಲಿ ಬಾಂಕೊ ಬಹಳ ದಿನಗಳಿಂದ ಉಳಿತಾಯ ಮಾಡುತ್ತಿದ್ದ. ಅವನು ಅದನ್ನು ಆಗಾಗ ಲೆಕ್ಕ ಮಾಡುವಾಗ ದಾಯಿ ಅವನಿಗೆ ಹಣದ ಲೆಕ್ಕಾಚಾರ ಹೇಳಿ ಕೊಡುತ್ತಿದ್ದರು. ಅದುವೇ ಒಂದು ಲೆಕ್ಕದ ಆಟ ಆಗುತ್ತಿತ್ತು. ಕೊನೆಯಲ್ಲಿ ಅವನು ಕೂಡಿಟ್ಟ ಆ ಹಣವನ್ನು ಯಾವುದಕ್ಕೆ ಬಳಸಿದ? ಓದಿ ನೋಡಿ. ನೀವೂ ನಿಮ್ಮ ಹಣ ಕೂಡಿಡುವ ಅನುಭವ ಬರೆಯಿರಿ.
ಲೇಖಕರು : ಮಾಲಾ ಕುಮಾರ್
ಅನುವಾದ: ಪ್ರವೀಣ್ ಎಸ್
ಚಿತ್ರಗಳು: ತನ್ವಿ ಭಟ್
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವ ಇಚ್ಛೆಯಿಂದ ಓದುವ ಮಕ್ಕಳಿಗಾಗಿ ; ಇನ್ನೊಬ್ಬರ ಸಹಾಯ ಇಲ್ಲದೇ ತಾನೆ ಓದುವ ಮಕ್ಕಳಿಗಾಗಿ
▪️ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ – 42052574/41159009;
▪️ www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************