ಪ್ರೀತಿಯ ಪುಸ್ತಕ : ಸಂಚಿಕೆ - 218
Sunday, June 28, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 218
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಆಕಾಶ ನೋಡುವುದು, ಅಲ್ಲಿಯ ಅದ್ಭುತಗಳನ್ನು ತಿಳಿದುಕೊಳ್ಳುವುದು ಅನೇಕ ಮಕ್ಕಳಿಗೆ ಬಹಳ ಕುತೂಹಲ. ಅಲ್ಲವೇ? ಈ ಪುಸ್ತಕದಲ್ಲಿ ಅನ್ವಿಗೆ ಬಾಹ್ಯಾಕಾಶವೆಂದರೆ ಎಲ್ಲಿಲ್ಲದ ಉತ್ಸಾಹ. ಸಂಜೆ ಆಗುತ್ತಿದ್ದಂತೆಯೇ ದೂರದರ್ಶಕಕ್ಕೆ ಅಂಟಿಕೊಂಡು ಬಿಡುತ್ತಾಳೆ. ಅನ್ಯಗ್ರಹಗಳಲ್ಲಿ ಬೇರೆ ಜೀವಿಗಳು ಇದೆಯೇ ಎಂದು ಹುಡುಕುತ್ತಿರುತ್ತಾಳೆ. ಒಮ್ಮೆ ಅಂತೂ ರಾತ್ರಿ ನೋಡುತ್ತಾ ನೋಡುತ್ತಾ ಅನ್ಯಗ್ರಹ ಜೀವಿಯನ್ನು ನೋಡಿಯೇ ಬಿಡುತ್ತಾಳೆ. ಅವುಗಳ ಗ್ರಹಕ್ಕೆ ಹೋಗಿ ಬಿಡುತ್ತಾಳೆ. ಏನೇನು ನೋಡುತ್ತಾಳೆ, ಸೌರಮಂಡಲದಾಚೆಗೂ ಇನ್ನೇನಾದರೂ ಇದೆಯೇ ಎಂಬ ಯೋಚನೆ ನಿಮಗೂ ಬಂದಿರಬಹುದು. ಪುಸ್ತಕ ಓದಲೇ ಬೇಕು ಅಂತ ನಿಮಗೂ ಈಗ ಅನಿಸಿರಬಹುದು. ಅಲ್ಲವೇ?
ಲೇಖಕರು: ಅನನ್ಯ ದಾಸ ಗುಪ್ತ
ಚಿತ್ರಗಳು: ಮಂದಾರ್ ಮಸ್ಕರ್
ಅನುವಾದ: ಲಕ್ಷ್ಮಿ ಬಿ ಆರ್
ಬೆಲೆ: ರೂ.85/-
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವ ಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೇ ತಾನೆ ಓದುವ ಮಕ್ಕಳಿಗಾಗಿ. ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ – 42052574/41159009;
www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************