ಪ್ರೀತಿಯ ಪುಸ್ತಕ : ಸಂಚಿಕೆ - 216
Saturday, June 13, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 216
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... 'ಗೋಲ್' ಪುಸ್ತಕದ ಹೆಸರು ಕೇಳುವಾಗಲೇ ಗೋಲ್ ತಲಪುವ ವಿಚಾರ ಮನಸ್ಸಿಗೆ ಬರಬಹುದು. ಹೌದು ಇದು ಹುಡುಗಿಯೊಬ್ಬಳ ಕನಸು. ಅಣ್ಣ ಮತ್ತು ಅವನ ಸ್ನೇಹಿತರು, ಇನ್ನೂ ಅಷ್ಟೊಂದು ಜನ ಹುಡುಗಿಯರು ಆಟದ ಮೈದಾನದಲ್ಲಿ ಆನಂದದಿಂದ ಆಡುವುದು ನೋಡುತ್ತಿದ್ದರೆ ಹೀನಾಗೆ ತಾನೂ ಆಡಬೇಕು ಅನಿಸುತ್ತದೆ. ಫುಟ್ ಬಾಲ್ ಆಟ ಅಂದರೆ ಅವಳಿಗೆ ಬಹಳ ಇಷ್ಟ. ಆಡುವ ಉತ್ಸಾಹ ಅವಳ ಮೈಮನದಲ್ಲಿ ತುಂಬಿದೆ. ಆದರೆ ಅಮ್ಮಿ ಹಾಗೂ ಅಬ್ಬುವನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಕೊನೆಯಲ್ಲಿ ಅವಳು ಒಂದು ಅದ್ಭುತ ಗೋಲ್ ಹೊಡೆಯುತ್ತಾಳೆ. ಅದು ಹೇಗೆ ಸಾಧ್ಯವಾಯಿತು? ಯಾರು ಅವಳಿಗೆ ಸಹಕಾರ ನೀಡಿದರು.. ಓದಿ ನೋಡಿ. ಹೀನಾಳ ಸಾಧನೆ ಖಂಡಿತಾ ನಿಮಗೆ ಪ್ರೇರಣೆ ನೀಡಬಹುದು.
ಲೇಖಕರು : ನೇಹಾ ಸಿಂಗ್ ಮತ್ತು ಸಬಾ ಖಾನ್
ಚಿತ್ರಗಳು: ಅಲಫಯಾ ಹಸನ್ ಮತ್ತು ಪೈರೋ
ಅನುವಾದ: ನಾವಿಕ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/-
ಪ್ರಥಮ್ ಪ್ರಕಾರ ಇದು 4ನೇ ಹಂತದ ಪುಸ್ತಕ. ಸುಲಭವಾಗಿ ಓದುವ ಸಾಮರ್ಥ್ಯವಿರುವ ಮಕ್ಕಳಿಗಾಗಿ; ವಿಶ್ವಾಸದಿಂದ ಓದಬಲ್ಲಂತಹ ದೊಡ್ಡ ಮಕ್ಕಳಿಗಾಗಿ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************