-->
ಪ್ರೀತಿಯ ಪುಸ್ತಕ : ಸಂಚಿಕೆ - 215

ಪ್ರೀತಿಯ ಪುಸ್ತಕ : ಸಂಚಿಕೆ - 215

ಪ್ರೀತಿಯ ಪುಸ್ತಕ
ಸಂಚಿಕೆ - 215
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     



                     ಪಯಣಿಸುವ ಬೀಜಗಳು    
ಪ್ರೀತಿಯ ಮಕ್ಕಳೇ.. ಇದೊಂದು ಪರಿಸರದ ಮಾಹಿತಿಯ ಅದ್ಭುತ ಪುಸ್ತಕ. ಚಿತ್ರಗಳೂ ಸುಂದರ.. ಮಾಹಿತಿಯೂ ವಿಶೇಷ. ಬೀಜ ಮೊಳಕೆಯೊಡೆದು ಗಿಡವಾಗುವುದು ನಮಗೆ ಗೊತ್ತೇ ಇದೆ. ಈ ಬೀಜಗಳು ಎಲ್ಲಲ್ಲೋ ಹೇಗೆ ಪಯಣಿಸುತ್ತವೆ ಎಂಬುದು ಬಹಳ ಆಸಕ್ತಿದಾಯಕವಾಗಿದೆ. ಕೆಲವು ಬೀಜಗಳು ನೇರ ನೆಲಕ್ಕೆ ಬೀಳುತ್ತವೆ. ಕೆಲವು ಹಾರುತ್ತವೆ. ದಿಕ್ಕು ದಿಕ್ಕುಗಳಿವೆ ಇವುಗಳು ಪಯಣಿಸುವ ಬಗೆಯೇ ಚಂದ. ತಮಗೆ ಹುಟ್ಟಿ ಬೆಳೆಯಲು ಅನುಕೂಲಕರವಾದ ಜಾಗ ಹುಡುಕಿಕೊಂಡು ಬೀಜಗಳು ಪಯಣಿಸುತ್ತವೆ. ಕೆಲವು ಬೀಜಗಳು ಕೀಟ, ಪಕ್ಷಿ, ಪ್ರಾಣಿಗಳ ಮೇಲೆ ಪುಕ್ಕಟೆಯಾಗಿ ಪಯಣಿಸುತ್ತವೆ. ಕೆಲವು ಬೀಜಗಳು ಹಕ್ಕಿ, ಮೀನುಗಳ ಹೊಟ್ಟೆಗೆ ಹೋಗಿ ಆಮೇಲೆ ಆಚೆ ಬರುತ್ತವೆ ಹಿಕ್ಕೆಯ ಮೂಲಕ. ಪುಸ್ತಕ ಓದುವ ಮೊದಲು ನಿಮಗೆ ಗೊತ್ತಿರುವ ಬೀಜಗಳ ಪಯಣವನ್ನು ಗುರುತಿಸಿಕೊಳ್ಳಿ.. ಆಮೇಲೆ ಇದನ್ನೂ ಓದಿ. ಸುಂದರವಾದ ಮಾಹಿತಿಗಳು ಇವೆ. 

ಲೇಖಕರು : ಲಾವಣ್ಯ ಕಾರ್ತಿಕ್
ಚಿತ್ರಗಳು: ಲಾವಣ್ಯ ಕಾರ್ತಿಕ್  
ಅನುವಾದ: ಶ್ರೀ ಹರ್ಷ
ಪ್ರಕಾಶಕರು: ಬಹುರೂಪಿ 
ಬೆಲೆ: ರೂ.130/- 

ಸುಮಾರು 6-7 ನೇ ತರಗತಿಯ ಮಕ್ಕಳು ಓದುವ ಹಾಗೆ ಇದೆ. ಇನ್ನೂ ದೊಡ್ಡವರಿಗೂ ಆಸಕ್ತಿ ಹುಟ್ಟುವ ಮಾಹಿತಿ ಇದೆ. ಚಿಕ್ಕ ಮಕ್ಕಳಿಗೆ ದೊಡ್ಡವರು ಓದಿಸಬಹುದು.

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: Bahuroopi, fire Flies; whatsapp bookstore – 7019182729; online bookstore – bahuroopi.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article