-->
ಪ್ರೀತಿಯ ಪುಸ್ತಕ : ಸಂಚಿಕೆ - 208

ಪ್ರೀತಿಯ ಪುಸ್ತಕ : ಸಂಚಿಕೆ - 208

ಪ್ರೀತಿಯ ಪುಸ್ತಕ
ಸಂಚಿಕೆ - 208
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     

                     ಭೂಮ್ತಾಯಿ ಅಜ್ಜಿ ಆದ್ಲಾ? 
ಪ್ರೀತಿಯ ಮಕ್ಕಳೇ.. "ಒಂದು ಸಾರಿ ಚಂದ್ರಣ್ಣನಿಗೆ ಬೇಸರವಾಯಿತಂತೆ, ತನ್ನ ಬೆಳಕು ತನ್ನದಲ್ಲ, ಸೂರ್ಯನ ಪ್ರತಿಫಲನದಿಂದ ಆಗಿದೆ.. ತಾನೇ ನತದೃಷ್ಟ ಅಂತ. ಸೂರ್ಯನಿಗೆ ಇದು ತಿಳಿದಾಗ, ಬೆಂಕಿ ಅತ್ತುಸ್ಕೊಂಡು ಉರಿವ ತಾನೇ ನತದೃಷ್ಟ ಎಂದು ಸೂರ್ಯಣ್ಣ ವಾದ ಮಾಡಿದಂತೆ. ಅಷ್ಟರಲ್ಲಿ ಇವರ್ಯಾಕೆ ಈ ಪಾಟಿ ಜಗಳಾಡ್ತಿದ್ದಾರೆ ಅಂತ ಭೂಮಿ ಓಡೋಡಿ ಬರುತ್ತಾಳೆ. ಯಾಕೆ ಕಿತ್ತಾಡ್ತೀರಿ ಅಂತ ವಿಚಾರಿಸುತ್ತಾಳೆ. ಸೂರ್ಯಣ್ಣ ಕೆಂಪಾಗಿ, ಭೂಮಜ್ಜಿ ನೀನು ಸುಮ್ಮನಿರು ಅಂತಾನೆ. ಅದಕ್ಕೆ ಭೂಮಿ ಕೋಪದಿಂದ, ಜೊತೆಗೇ ಹುಟ್ಟಿದವರು ತಾವು, ಅದು ಹೇಗೆ ತಾನು ಅಜ್ಜಿ ಆಗೋದು ಅಂತ. ಆಗ ಭೂಮಿ ತನ್ನ ಅನುಭವ ಹೇಳಿಕೊಳ್ಳುತ್ತಾಳೆ. ಜನರು ತನಗೆ ಯಾವ ಯಾವ ರೀತಿಯಲ್ಲಿ ಅನ್ಯಾಯ ಮಾಡುತ್ತಾರೆ ಅಂತ ವಿವರಿಸಿ, ತಾನೇ ನತದೃಷ್ಟೆ ಅನ್ನುತ್ತಾಳೆ… ಸೂರ್ಯಣ್ಣ ಚಂದ್ರಣ್ಣ ಯೋಚನೆ ಮಾಡುತ್ತಾರೆ..” ಇದು ಒಂದು ಕತೆಯ ಸಾರಾಂಶ. ಈ ಪುಸ್ತಕದಲ್ಲಿ 23 ಕತೆಗಳಿವೆ. ಪಲ್ಲವಿ ಮಕ್ಕಳಿಗಾಗಿ ಬರೆದ ಮೊದಲ ಪುಸ್ತಕ. ಓದಿ ನೋಡಿ. 

ಲೇಖಕರು : ಎಡೆಯೂರು ಪಲ್ಲವಿ
ಚಿತ್ರಗಳು: ಗುಜ್ಜಾರಪ್ಪ 
ಪ್ರಕಾಶಕರು:ವಸಂತ ಪ್ರಕಾಶನ, ಬೆಂಗಳೂರು
ಬೆಲೆ: ರೂ.100/-

6-7ನೇ ತರಗತಿಯ ಮಕ್ಕಳಿಗಾಗಿ ಇದೆ. ಚಿಕ್ಕವರಿಗೂ ಕೆಲವು ಕಥೆಗಳನ್ನು ಓದಿ ಹೇಳಬಹುದು. ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ವಸಂತ ಪ್ರಕಾಶನ, ಬೆಂಗಳೂರು, www.vasanthaprakashana.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 




Ads on article

Advertise in articles 1

advertising articles 2

Advertise under the article