-->
ಪ್ರೀತಿಯ ಪುಸ್ತಕ : ಸಂಚಿಕೆ - 200

ಪ್ರೀತಿಯ ಪುಸ್ತಕ : ಸಂಚಿಕೆ - 200

ಪ್ರೀತಿಯ ಪುಸ್ತಕ
ಸಂಚಿಕೆ - 200
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                         ಚಂದಮಾಮ ಕಥೆಗಳು  
ಪ್ರೀತಿಯ ಮಕ್ಕಳೇ, ಚಂದಮಾಮ - ತಿಂಗಳಿಗೊಮ್ಮೆ ಪ್ರಕಟವಾಗುತ್ತಿದ್ದ ಪುಸ್ತಕವಿದು. ನಾವು ಚಿಕ್ಕವರಿದ್ದಾಗ ಇದಕ್ಕಾಗಿ ಕಾಯುತ್ತಿದ್ದೆವು. ಬಣ್ಣ ಬಣ್ಣದ ಚಿತ್ರಗಳೊಂದಿಗೆ ಬೇರೆ ಬೇರೆ ರೀತಿಯ ಕಥೆಗಳು ತುಂಬಿತ್ತು. ದೆವ್ವಗಳ ಕತೆಯಂತೂ ಬಹಳ ರೋಚಕ. ವಿಕ್ರಮ ಬೇತಾಳ ಕತೆ ಪ್ರತಿ ಸಾರಿಯೂ ಬೇರೆ ಬೇರೆ. ಬೇತಾಳನನ್ನು ಹಿಡಿದು ತರಲು ಯತ್ನಿಸುವ ವಿಕ್ರಮ, ವಿಕ್ರಮ ಬಾಯಿ ಬಿಟ್ಟರೆ ಬೇತಾಳ ವಾಪಾಸು ಹೋಗುವುದು ನಿಯಮ. ಬೇತಾಳ ವಿಕ್ರಮನಿಗೆ ಏನೋ ಒಂದು ಕತೆ ಹೇಳುವುದು, ಕೊನೆಯಲ್ಲಿ ಪ್ರಶ್ನೆ ಕೇಳುವುದು, ವಿಕ್ರಮ ಉತ್ತರ ಕೊಟ್ಟ ತಕ್ಷಣ ಬೇತಾಳ ಮಾಯ. ಅಜ್ಜಿ ಕತೆಗಳು, ನೀತಿ ಕತೆಗಳು, ಹಾಸ್ಯ ಕತೆಗಳು.. ಇರುತ್ತಿದ್ದವು. ಈಗ ಈ ಪತ್ರಿಕೆ ಬರುತ್ತಿಲ್ಲ. ಆದರೆ 1970 ರಿಂದ 2012 ನಡುವೆ ಪ್ರಕಟವಾದ ಕಥೆಗಳನ್ನು ಚಿತ್ರಗಳೊಂದಿಗೆ ಐದು ಭಾಗಗಳಲ್ಲಿ ಪ್ರಕಟವಾಗಿದೆ. ಹಳೆ ಕಥೆಗಳ ಜಗತ್ತು ನೋಡಿ.

ಲೇಖಕರು : ವಸುಂಧರ (ತೆಲುಗಿನಲ್ಲಿ)
ಕನ್ನಡಕ್ಕೆ – ಡಾ.ಕೆ.ವಿ.ರಾಜೇಶ್ವರಿ
ಚಿತ್ರಗಳು: ಶಕ್ತಿ ದಾಸ್ 
ಪ್ರಕಾಶಕರು: ಹೇಮಂತ ಸಾಹಿತ್ಯ, ಬೆಂಗಳೂರು
ಬೆಲೆ: ರೂ.400/- 

ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ.. ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು. 
ಈ ಪುಸ್ತಕ ಬಹಳಷ್ಟು ಪುಸ್ತಕ ಮಳಿಗೆಗಳಲ್ಲಿ ಸಿಗುತ್ತದೆ; ಅಥವಾ ಲಡಾಯಿ ಪ್ರಕಾಶನದವರು ಕರೆ ಮಾಡಿದರೆ ಕಳುಹಿಸುತ್ತಾರೆ: 9480286844
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article