ನನ್ನ ಪ್ರೀತಿಯ ಟೀಚರ್ - 2025 : ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -03
Sunday, September 7, 2025
Edit
ನನ್ನ ಪ್ರೀತಿಯ ಟೀಚರ್ - 2025
ವಿದ್ಯಾರ್ಥಿಗಳ ಬರಹಗಳು : ಸಂಚಿಕೆ -03
ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ : 05 - 2025
ಮಕ್ಕಳ ಜಗಲಿಯ ವಿದ್ಯಾರ್ಥಿಗಳ ಬರಹಗಳ ಮಾಲೆ
ಶಿಕ್ಷಕರ ದಿನಾಚರಣೆ - 2025 ವಿಶೇಷತೆಯಾಗಿ 'ನನ್ನ ಪ್ರೀತಿಯ ಟೀಚರ್' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಮಕ್ಕಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ಮಕ್ಕಳ ವಿಭಾಗದ ಮೂರನೇ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
ಈ ಸಂಚಿಕೆಯ ಬರಹಗಾರರು :
▪️ಸಾನಿಧ್ಯ , ದ್ವಿತೀಯ ಪಿಯುಸಿ
▪️ಶಯನ್ ಎಸ್ ಶೆಟ್ಟಿ, 2ನೇ ತರಗತಿ
▪️ಅಕ್ಷತ್, 10ನೇ ತರಗತಿ
▪️ಶಿಶಿರ್. ಕೆ, 4ನೇ ತರಗತಿ
▪️ಚಿನ್ಮಯಿ ಎನ್, ಪ್ರಥಮ ಪಿಯುಸಿ
▪️ಋತ್ವಿಕ್ ಮೊಳೆಯಾರ್, 8ನೇ ತರಗತಿ
▪️ಫರ್ಹನ, ದ್ವಿತೀಯ ಪಿಯುಸಿ
▪️ಸಮೀರಾ ಬಾನು, ದ್ವಿತೀಯ ಪಿಯುಸಿ
ಪ್ರತಿಯೊಬ್ಬರಿಗೂ ಅವರವರ ಶಾಲಾ ಜೀವನದಲ್ಲಿ ಒಬ್ಬ ನೆಚ್ಚಿನ ಶಿಕ್ಷಕರು ಇರುತ್ತಾರೆ. ನನಗೆ ಎಲ್ಲಾ ನೆಚ್ಚಿನ ಶಿಕ್ಷಕರೇ, ಅದ್ರಲ್ಲೂ ನನ್ನ ಹೈಸ್ಕೂಲಲ್ಲಿ ಸಿಕ್ಕ ಸ್ಪೆಷಲ್ ಟೀಚರ್ ಅಂದ್ರೆ ಮುಖ್ಯ ಗುರುಗಳಾದ ಸತೀಶ್ ಭಟ್ , ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ ಇವರು.
ನನಗೆ ಎಂಟನೇ ತರಗತಿಯಲ್ಲಿ NMMS ಮತ್ತು ಹತ್ತನೇ ತರಗತಿಯಲ್ಲಿ ವಿಜ್ಞಾನ ಪಾಠ ಮಾಡ್ಲಿಕೆ ಇದ್ರು . ಮಗುವಿನ ಮನಸ್ಸಿನ ಇವರು ತುಂಬಾ ಸಂವಾದಾತ್ಮಕ ಮತ್ತು ಸೃಜನಶೀಲ ರೀತಿಯಲ್ಲಿ ಕಲಿಸುತ್ತಾರೆ. ಇವರ ಎಲ್ಲಾ ತರಗತಿಗಳು ಆಸಕ್ತಿದಾಯಕವಾಗಿರುತ್ತದೆ ಮತ್ತು ಎಂದಿಗೂ ಬೇಸರ ತರಿಸಲ್ಲಿಲ್ಲ. ಸರ್ ಕ್ಲಾಸ್ ಗೆ ಬರುತ್ತಾರೆ ಅಂತ ಗೊತ್ತಾದಾಗ ತರಗತಿ ಸಂಪೂರ್ಣವಾಗಿ ಮೌನವಾಗುತ್ತಿತ್ತು. ಇವರು ಹೇಳುತ್ತಿದ್ದ ಜೀವನ ಪಾಠ ತುಂಬಾ ಇಷ್ಟವಾಗುತ್ತಿತ್ತು ಮತ್ತು ಇಂದು ನನ್ನ ಜೀವನದಲ್ಲಿ ಶಿಸ್ತು ಬದ್ಧವಾಗಿರಲು ನನಗೆ ಸ್ಫೂರ್ತಿ ನೀಡಿದ್ದಾರೆ. ನಾವು ಏನೇ ಹೇಳಿದ್ರು ಇಲ್ಲ ಎಂದು ಹೇಳದೆ ಎಲ್ಲ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಇವರಲ್ಲಿ ಒಬ್ಬ ಶಿಕ್ಷಕ ಮಾತ್ರ ಅಲ್ಲದೆ ಸಹಪಾಠಿ, ಸಹೋದರನ ರೀತಿಯಲ್ಲಿಯೂ ನಡೆದುಕೊಳ್ಳುತಿದ್ದರು. ನನ್ನ ಜೀವನದಲ್ಲಿ ಅಚ್ಚಳಿಯದೆ ಉಳಿದಿರುತ್ತೀರಿ ಸರ್. ಇನ್ನೊಂದು ಖುಷಿ ವಿಷಯ ಏನಂದ್ರೆ ಈ ದಿವಸ ಘನ ಕರ್ನಾಟಕ ಸರಕಾರದ 2025-26 ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ನಿಮಗೆ ಅಭಿನಂದನೆಗಳು ಸರ್.
ಶಿಕ್ಷಕ ಎಂದರೆ ಸ್ಫೂರ್ತಿ ಮಾರ್ಗದರ್ಶಕ ಮತ್ತು ಪ್ರೇರಕ. ಶಿಕ್ಷಕರು ತಮ್ಮ ಜ್ಞಾನದ ಮೂಲಕ ನಮಗೆ ವೈಭವದ ಹಾದಿಯನ್ನು ತೋರಿಸುವ ಬೆಳಕು.
ಒಂದಲ್ಲ ಒಂದು ರೀತಿಯಲ್ಲಿ ನನಗೆ ಬೋಧನೆಯನ್ನು ನೀಡಿದ ನನ್ನ ಎಲ್ಲಾ ಅಧ್ಯಾಪಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ದ್ವಿತೀಯ ಪಿ.ಯು. ಸಿ
ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ
ಕಾಲೇಜು, ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನನ್ನ ಪ್ರೀತಿಯ ಟೀಚರ್ ಕವಿತಾ ಮಿಸ್ ಹಾಗೂ ಅನಿತಾ ಮಿಸ್. ಇಬ್ಬರೂ ನನ್ನ ಎರಡು ಕಣ್ಣುಗಳು. ನಮ್ಮೆಲ್ಲರನ್ನೂ ಪ್ರೀತಿಸುವವರು. ನೋಡಲು ಸುಂದರವಾಗಿ ಇರುವರು. ಪಾಠದ ಸಮಯದಲ್ಲಿ ಶಿಸ್ತು ಕಲಿಸುವರು. ಆಟದ ಸಮಯದಲ್ಲಿ ಬಿಂದಾಸ್ ಇರಲು ಬಿಡುವರು. ಅವರು ಏನೇ ಹೇಳಿದರೂ ಸರಿ ಕಾಣುವುದು. ಶಾಲೆಗೆ ಬಾರದೆ ಇದ್ದಲ್ಲಿ ಅಳು ಬರುವುದು. ಎಲ್ಲಾ ವಿಷಯದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವರು. ಉದಾಸೀನ ನಾಚಿಕೆ ಮಾಡಿದಲ್ಲಿ ಎದ್ದು ನಿಲ್ಲಿಸುವರು. ಎಲ್ಲಾ ವಿಷಯವ ಅಮ್ಮನಿಗೆ ಹೇಳುವರು. ತಪ್ಪಿನಿಂದ ತಪ್ಪಿಸಲು ಸಾಧ್ಯವಿಲ್ಲದಾಗೆ ಮಾಡುವರು. ನನ್ನ ಪ್ರೀತಿಯ ಕವಿತಾ ಮಿಸ್ ಹಾಗೂ ಅನಿತಾ ಮಿಸ್ ಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
2ನೇ ಎ ತರಗತಿ
ವಿವೇಕಾನಂದ ಇಂಗ್ಲೀಷ್
ಮೀಡಿಯಂ ಸ್ಕೂಲ್, ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನನ್ನ ನೆಚ್ಚಿನ ಶಿಕ್ಷಕಿ ಎಂದರೆ ಸುಮಿತ್ರ ಮೇಡಂ. ಇವರು ನಮಗೆ ಶಿಕ್ಷಣದ ಜೊತೆಗೆ ಜೀವನದ ಪಾಠವನ್ನು ಕಲಿಸಿದ್ದಾರೆ. ಇವರು ನಮ್ಮ ತರಗತಿಯಲ್ಲಿ ಬಂದು ಮಾತನಾಡುವ ಶೈಲಿಯೇ ಚಂದ. ಇವರು ನಮ್ಮನ್ನು ಶಾಲೆಗೆ ಬಂದ ಮಕ್ಕಳು ಎಂದು ಭಾವಿಸದೆ, ತನ್ನ ಸ್ವಂತ ಮಕ್ಕಳ ಹಾಗೆ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತಿದ್ದರು. ಇವರನ್ನು ಕಂಡರೆ ಎಲ್ಲಾ ಮಕ್ಕಳಿಗೂ ಅಚ್ಚು ಮೆಚ್ಚು. ಯಾರಾದ್ರೂ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬುದ್ದಿ ಹೇಳಿ, ಆ ತಪ್ಪನ್ನು ಮಾಡದಂತೆ ಮಾರ್ಗದರ್ಶನ ನೀಡುತಿದ್ದರು. ಇವರು ಮಕ್ಕಳಿಗೆ ಹುಷಾರು ಇಲ್ಲದಿದ್ದಾಗ ತೋರಿಸುತಿದ್ದ ಮಮತೆ ಕಾಳಜಿ ತುಂಬಾ ಇಷ್ಟವಾಗುತಿತ್ತು. ಇವರು ತಮ್ಮ ಹುಟ್ಟು ಹಬ್ಬವನ್ನು ತಾವೇ ಆಚರಿಸಿಕೊಳ್ಳುವ ಬದಲು, ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡುತಿದ್ದರು. ಶಾಲೆಗೆ ಯಾರಾದರೂ ತೊಂದರೆ ಮಾಡಿದಲ್ಲಿ ಇವರು ತಕ್ಷಣವೇ ಕ್ರಮ ಕೈ ಗೊಳ್ಳುತಿದ್ದರು. ಇವರು ಮನೆಯ ಕೆಲಸದ ಜೊತೆಗೆ ಶಾಲೆಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತಿದ್ದರು. ಇವರು ಯಾವಾಗಲೂ ನನ್ನ ಅಚ್ಚು ಮೆಚ್ಚಿನ ಶಿಕ್ಷಕಿ ಶ್ರೀಮತಿ ಸುಮಿತ್ರ ಮೇಡಂ..
10ನೇ ತರಗತಿ ಎ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜ್ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ವಿದ್ಯಾರ್ಥಿ ಬದುಕಿನಲ್ಲಿ ಗುರಿಯೊಂದನ್ನು ಬಿತ್ತಲು ಗುರು ಬಹಳ ಮುಖ್ಯ ಪಾತ್ರವಹಿಸುತ್ತಾರೆ. ಗುರುಗಳು ಹಲವರಿದ್ದರು ನಮಗೆ. ಹತ್ತಿರವಾಗುವವರು ಕೆಲವರಷ್ಟೇ... ಹಾಗೆಯೇ ನನ್ನ ಬದುಕಿನಲ್ಲಿ ಮಾರ್ಗದರ್ಶನ ಮಾಡಿ ಗುರಿಯೆಡೆಗೆ ಹೆಜ್ಜೆ ಇಡಲು ಕಾರಣರಾದ ಇವರು ನನಗಿಷ್ಟವಾಗಿರುತ್ತಾರೆ. ಅವರೇ ನನ್ನ ಪ್ರೀತಿಯ ವೀಣಾ ಟೀಚರ್. ಅಮ್ಮನಂತೆ ಒಲವು ನೀಡಿ, ನನ್ನ ಬಾಳಿಗೆ ಬೆಳಕು ನೀಡಿ, ಮೊಗದಲ್ಲಿ ಸಿಡುಕ ತೋರಿಸಿ, ಹೃದಯದಲ್ಲಿ ಪ್ರೀತಿ ತುಂಬಿ, ನನ್ನ ಆಸೆಗೆ ರೆಕ್ಕೆ ಕಟ್ಟಿದ, ನನ್ನ ಹೃದಯದಿ ನೆಲೆಸಿದ ಶಿಕ್ಷಕಿ ಇವರು.
ಜ್ಞಾನವೆಂಬ ಗಂಗೆಯನ್ನು ಹರಿಸಿ, ಯಶಸ್ಸು ಎಂಬ ಗರಿಯ ತೊಡಿಸಿ, ನನ್ನ ಸಾಧನೆಗೆ ಗೆಲುವು ತರಲು ಜ್ಞಾನವನ್ನು ಧಾರೆ ಎರೆದಿರುತ್ತಾರೆ. ನೀವು ತೋರಿದ ಮಾರ್ಗದಲ್ಲಿ ನಾನು ಎಂದಿಗೂ ಸಾಗುವೆ ಬಾಳಲಿ. ನನ್ನ ಪ್ರೀತಿಯ ಟೀಚರ್.
4ನೇ ತರಗತಿ
ದ.ಕ. ಜಿಂ. ಪಂ. ಸ.ಉ. ಹಿರಿಯ
ಪ್ರಾಥಮಿಕ ಶಾಲೆ. ಕುದ್ಮಾರು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಪ್ರತಿ ವ್ಯಕ್ತಿ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನದಲ್ಲಿ ಗುರುಗಳು ಇರುತ್ತಾರೆ. ಶಿಕ್ಷಣದ ಮೂಲಾರ್ಥವನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವವರು ಗುರುಗಳಾಗಿರುವುದರಿಂದ ಇಡೀ ಪ್ರಪಂಚವೇ ಇವರನ್ನು ಪೂಜಿಸುತ್ತದೆ.
ಗುರುವಿಂದ ಬಂಧುಗಳು ಗುರುವಿಂದ ಪರದೈವ ಗುರುವಿಂದಲಾದುದು ಪುಣ್ಯ ಲೋಕಕ್ಕೆ ಗುರುವಿಂದ ಮುಕ್ತಿ ಸರ್ವಜ್ಞ......
ಮೊದಲೇ ಹೇಳಿದಂತೆ ಶಿಕ್ಷಕರ ದಿನ ಎಂದರೆ ನಮಗೆ ವಿದ್ಯೆ, ಬುದ್ಧಿ ಕಲಿಸಿ ಬದುಕಿನ ಜೀವನ ಪೂರ್ತಿ ಮಾರ್ಗ ತೋರಿಸಿದ ನನ್ನ ಪ್ರೀತಿಯ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಪ್ರತಿ ವಿದ್ಯಾರ್ಥಿಗಳ ಬಾಳಿನಲ್ಲೂ ಗುರುವಿನ ಪಾತ್ರ ಬಹಳ ಮಹತ್ವ. ಹಾಗೆಯೇ ಜೀವನದಲ್ಲೂ ತಂದೆ ತಾಯಿಗಳಂತೆ ಗುರುವಿನ ಪಾತ್ರ ಬಹಳ ಪರಿಪೂರ್ಣವಾಗಿದೆ. ಕೈ ಹಿಡಿದು ಅಕ್ಷರ ತಿದ್ದಿ, ಓದಿ ಬರೆಯಲು ಕಲಿಸುವುದು ಅಲ್ಲದೆ ಕೌಶಲ್ಯಗಳನ್ನು ಕಲಿಸುತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಗುರುಗಳು ಒಂದು ಅರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ ಮಹಾನ್ ವ್ಯಕ್ತಿ ಆಗಿರುವರು. ಬದುಕಿನಲ್ಲಿ ನಮ್ಮನ್ನು ಸರಿಯಾದ ದಾರಿಯಲ್ಲಿ, ನಡತೆಯಲ್ಲಿ ಸಾಗುವಂತೆ ಮಾಡುವವರೇ ಗುರುಗಳು. ಇವರ ಬೋಧನೆಯು ನಮ್ಮನ್ನು ಉತ್ತಮ ಸಾಧನೆ ಮಾಡಲು ಸಹಾಯಕವಾಗಿದೆ. ಗುರುಗಳು ಮಾರ್ಗದರ್ಶಕರು ಮಾತ್ರವಲ್ಲದೆ, ಸಮಯ ಹೆಚ್ಚಾದಾಗ ಅವರು ವಿವಿಧ ಪಾತ್ರಗಳನ್ನು ಅಳವಡಿಸುವುದು. ಹಾಗೆಯೇ ನಾವು ಬೇಸರವಾದಾಗ ತಂದೆ ತಾಯಿಯ ಮನಸ್ಸಿನವರಂತೇ ಆಗುತ್ತಾರೆ. ಗುರುಗಳು ಮಕ್ಕಳಿಗೆ ಕೇವಲ ವಿದ್ಯೆಯನು ನೀಡದೆ ಬದುಕಿನ ರೀತಿ ನೀತಿ ಜೀವನ ಕ್ರಮವನ್ನು ಕಲಿಸುತ್ತಾರೆ. ನೀವು ನಮಗೆ ಸರಳವಾಗಿ ಮತ್ತು ತಾಳ್ಮೆ ಪ್ರೀತಿ ಹಾಗೂ ಕೇವಲ ತಿಳುವಳಿಕೆಯನ್ನು ನಮ್ಮ ಜೀವನದ ಕಷ್ಟಗಳನ್ನು ಎದುರಿಸಲು ಪ್ರೇರಣೆಯನ್ನು ನೀಡಿದ್ದೀರಿ. ನಮ್ಮ ಪಯಣದ ದಾರಿಯಲ್ಲಿ ನಿಮ್ಮ ಋಣವು ಅತ್ಯಂತ ಅಪಾರವಾಗಿದ್ದು ಎಂದಿಗೂ ತೀರಿಸಲಾಗದು. ಇಂತಹ ನನ್ನ ಮಹಾನ್ ಗುರುಗಳಿಗೆ ನನ್ನ ಮನಃಪೂರ್ವಕವಾಗಿ ನಮನಗಳು .
ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
ಶ್ರೀ ಸುಬ್ರಹ್ಮಣ್ಯೇಶರ ಪದವಿ ಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಗುರುಗಳೆಂದರೆ ಜ್ಞಾನ ಮತ್ತು ಅನುಭವಗಳ ಅಮೃತಧಾರೆ. ಬರಿದಾಗಿರುವ ಮನದಲ್ಲಿ ಉತ್ತಮ ಚಿಂತನೆಗಳನ್ನು ಬಿತ್ತುವ ಅಮೂಲ್ಯ ರತ್ನ. ಹಸಿ ಮಣ್ಣಿನಂತೆ ಇರುವ ಮುಗ್ಧ ಮನಗಳಿಗೆ ಆಕಾರ ಕೊಟ್ಟು ಮುಂದೆ ಎಲ್ಲರಿಗೂ ಗೋಚರವಾಗುವಂತಹ ಸಮಾಜಮುಖಿ ವ್ಯಕ್ತಿತ್ವ ನಿರ್ಮಿಸುವ ಕಲೆಗಾರಿಕೆ ಗುರುವಿನಲ್ಲಿ ಅಡಕವಾಗಿದೆ. ಅದಕ್ಕಾಗಿ ಗುರು ಅತೀ ಉನ್ನತ ಸ್ಥಾನವನ್ನು ಪಡೆದಿದ್ದಾನೆ.
ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಎನ್ನುವುದು ಬಹಳ ಮಹತ್ವದ ಘಟ್ಟ. ಬಾಲ್ಯದ ಆಟ, ಆ ಹುಡುಗಾಟ, ಮರೆಯಲು ಸಾಧ್ಯವಿಲ್ಲ. ಆರಂಭಿಕ ವಿದ್ಯಾಭ್ಯಾಸದಲ್ಲಿ ನಮಗೆ ದೊರೆತ ಗುರು ನಮ್ಮ ಬದುಕನ್ನೇ ಬದಲಾಯಿಸಬಲ್ಲನು. ಶೇಷ್ಠ ಗುರುವನ್ನು ನಾವು ಪಡೆದಿದ್ದಲ್ಲಿ ನಮ್ಮಷ್ಟು ಅದೃಷ್ಟವಂತರು ಇನ್ನಾರಿಲ್ಲ. ನನ್ನ ಹೃದಯವನ್ನು ತಟ್ಟಿದ ಮೊದಲ ಗುರು ಶ್ರೀಮತಿ ಸಾವಿತ್ರಿ ಮಾತಾಜಿ. ನನ್ನ ಮನೋಬಲವನ್ನು ಪ್ರೋತ್ಸಾಹಿಸಿದ ಇತರ ಗುರುಗಳು... ಶ್ರೀ ಮುರಳಿಕೃಷ್ಣ, ಶ್ರೀಮತಿ ನೀತು, ಶ್ರೀ ರಮೇಶ್ ...
ಗುರುಗಳ ಮನಸ್ಸು, ಶ್ರಮ, ಕಾರ್ಯವೈಖರಿ ಮತ್ತು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಅವರು ತೆಗೆದುಕೊಳ್ಳುವ ಪರಿಭಾಸಕ್ಕೆ ವಿಧ್ಯಾರ್ಥಿಗಳು ತಲೆಬಾಗಲೇ ಬೇಕು. ಗುರು, ವಿದ್ಯಾರ್ಥಿ ಜೀವನದ ಜೀವಾಳ. ಹಾಗಾಗಿ ನಾವೆಲ್ಲರೂ ನಮ್ಮ ಜೀವನ ಪಾವನವಾಗಿಸಿದ ಗುರುಗಳಿಗೆ ಗೌರವ ಸಲ್ಲಿಸೋಣ. ಸಮಾಜ ನಿರ್ಮಾಣ ಮಾಡುವ ಅವರ ಎಲ್ಲಾ ಶ್ರಮಕ್ಕೂ ಆಭಾರಿಯಾಗೋಣ. ಶಿಕ್ಷಕ ವೃತ್ತಿ ಬಹಳ ಶ್ರೇಷ್ಠ ಹಾಗೂ ಸಾರ್ಥ್ಯಕ್ಯ ವೃತ್ತಿ. ಅಂತಹ ವೃತ್ತಿಯನ್ನು ಅರ್ಥಪೂರ್ಣವಾಗಿ ನಿಭಾಯಿಸುವ ನನ್ನ ಎಲ್ಲಾ ಶಿಕ್ಷಕ ಮಿತ್ರರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಶ್ರೀ ಗುರುಭ್ಯೋ ನಮಃ.
8ನೇ ತರಗತಿ
ಸಾಂದೀಪನಿ ವಿದ್ಯಾ ಸಂಸ್ಥೆ, ನರಿಮೊಗರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನನಗೆ ರಮಣಿ ಮೇಡಂ ಅಂದ್ರೆ ತುಂಬಾ ಇಷ್ಟ... ಯಾಕಂದ್ರೆ ನಂಗೆ ಕಲಿಕೆಯಲ್ಲಿ ಕಡಿಮೆ ಮಾರ್ಕ್ಸ್ ಬಂದಾಗ ಬಯ್ದೆ ಎಲ್ಲರಿಗೂ ಸಮಾಧಾನ ಮಾಡಿ ಹೇಳ್ತಾ ಇದ್ರು. ಬರ್ದು ಕಲೀರಿ ಅಂತ, ಮತ್ತೊಂದು ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೀತೀರ ಅಂತ, ನನಗೆ ಈ ಮೇಡಂ ತಾಯಿ ಸಮಾನ ಅನ್ನಬಹುದು. ನನಗೆ ಉತ್ತಮ ಮಾರ್ಗದರ್ಶನ ನೀಡಿ ಸಹೋದರಿಯಂತೆ ನಮ್ಮೊಂದಿಗೆ ಬೆರೆತು, ಜೀವನದಲ್ಲಿ ಶಿಸ್ತು ಮೂಡಿಸಿದ ದೇವತೆ. ಮೇಡಂ ನಿಮಗೆ ಎಷ್ಟು ಧನ್ಯವಾದ ಹೇಳಿದರು ತೀರದು. ತಾಯಿಯಿಂದ ಉಸಿರು ಬರುತ್ತೆ, ತಂದೆಯಿಂದ ಹೆಸರು ಬರುತ್ತದೆ, ಆದರೆ ಒಬ್ಬ ಗುರುವಿನಿಂದ ಉಸಿರು ನಿಲ್ಲೋವರೆಗೂ ಹೆಸರು ಬರುವ ವಿದ್ಯೆ ಬರುತ್ತದೆ. ಮೇಡಂ ಯಾವಾಗ್ಲೂ ಒಂದು ಮಾತು ಹೇಳ್ತಾ ಇದ್ರು. ಶಾಲೆಯಲ್ಲಿ ಕಷ್ಟ ಆದ್ರೂ ಸಹಿಸಿಕೊಂಡು ಪಾಠ ಕಲಿತು ಬಿಡು, ಇಲ್ಲಾ ಅಂದ್ರೆ ಜೀವನ ಪಾಠ ಕಲಿಸುತ್ತದೆ, ಆ ಪಾಠವನ್ನು ಸಹಿಸಿಕೊಳ್ಳೋಕಾಗಲ್ಲ, ಅಷ್ಟು ಕಠೋರವಾಗಿರುತ್ತದೆ. ನಾನು 10ನೇ ತರಗತಿಯಲ್ಲಿ ಇರುವಾಗ ನಮ್ಮ ಮನೆಯ ಪರಿಸ್ಥಿತಿ ಸರಿ ಇಲ್ಲದೇ ತುಂಬಾ ಕಷ್ಟದಲ್ಲಿದ್ದೆ. ಆವಾಗ ಅಪ್ಪನಿಗೆ ಅನಾರೋಗ್ಯ ಇದ್ದ ಕಾರಣ ಶಾಲೆಗೆ ಹೋಗಲು ಕಷ್ಟ ಆಗಿತ್ತು. ಆವಾಗ ಇದೇ ಮೇಡಂ ನಂಗೆ ಎಲ್ಲಾ ಮಾತಾಡಿ ಶಾಲೆಗೆ ಬಾ ಎಂದು ಸಮಾಧಾನ ಪಡಿಸಿ, ಶಾಲಾ ಫೀಸ್ ಎಲ್ಲಾ ಕೊನೆಗೆ ಕಟ್ಟಿದ್ರೆ ಸಾಕು ಅಂತ ಹೇಳಿ ಉತ್ತೇಜನ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡಿ ಪೆನ್ ಪುಸ್ತಕಕ್ಕೆ ಹಣ ನೀಡಿ ಬದುಕಿನ ಸತ್ಯತೆಯನ್ನು ತಿಳಿ ಹೇಳಿದ ಮೇಡಂ ಇವರು. ಇವರಿಗೆ ಎಷ್ಟು ಧನ್ಯವಾದ ಹೇಳಿದರೂ ತೀರದು, ಎಲ್ಲರನ್ನೂ ತನ್ನ ಮಕ್ಕಳಂತೆ ನೋಡುವ ಗುಣ ತುಂಬಾ ಮೆಚ್ಚುವಂತದ್ದು.... ನಿಮ್ಮ ಶಿಷ್ಯೆ ಎನ್ನಲು ತುಂಬಾ ಹೆಮ್ಮೆ ಧನ್ಯವಾದಗಳು ಮೇಡಂ
............................................... ಫರ್ಹನ
ದ್ವಿತೀಯ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನಿಮ್ಮ ಶಿಷ್ಯೆಯಾಗಿರುವ ನಾನು ಮನಸ್ಫೂರ್ತಿಯಾಗಿ ನನ್ನ ಗುರು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಯಾವ ಸಾಧನೆಯು ಇಲ್ಲದೇ ಗೊತ್ತು ಗುರಿ ಇಲ್ಲದೇ ದೂರದಿಂದ ನೋಡಿ ಎದೆ ತಟ್ಟಿ ನನ್ನ ಗುರು ಎಂದು ಹೇಳುತ್ತೇನೆ. ಗುರು ಎಂಬ ಭಾಂದವ್ಯ ಗೊತ್ತಿಲ್ಲದವಳಿಗೆ ಗುರು ಶಿಷ್ಯ ಎಂಬ ಅರಿವು ಮೂಡಿಸಿದವರು ಸೀತಾಲಕ್ಷ್ಮಿ ಮೇಡಂ ಇವರು.... "ದೇವರಿಗೆ ಹಾಕಬೇಕು ಎಂದು ಹೂವನ್ನು ಕೊಯ್ದು ಅರಳಿಸಿ, ಅದನ್ನು ಕಟ್ಟದೆ ಅದು ಹಾಳಾಯಿತಲ್ಲ" ಅನ್ನುವವಳು ನಾನು. ನನ್ನಲ್ಲಿ ಮಲ್ಲಿಗೆ ಹೂವನ್ನು ಕೆಲವರು ಕೇಳುವಾಗ ಹೂ ಇತ್ತು ಹಾಳಾಯಿತು ಎನ್ನುತ ಇದ್ದೆ. ಆದರೆ ನೀವು ಬರೆದಿರುವ ಕವನ ಸಂಕನದಲ್ಲಿ ಹೂವಿನ ಹುಚ್ಚಿ ಎಂಬ ಲೇಖನವು ಭಾವಸಾರ ಸಂಕಲನದಲ್ಲಿ ಓದಿ ಮಲ್ಲಿಗೆ ಹೂ ನಿಮಗೆ ಇಷ್ಟವೆಂದು ಅರಿತೆ. ಆಗ ಆ ಪುಸ್ತಕದ ಓದಿಗೆ ತಲೆ ತಗ್ಗಿಸಿ ನಿಂತೆ. ಇಷ್ಟು ವರ್ಷಕಾಲ ಓದಿ, ನಲಿದು ಎಲ್ಲವನು ದಾಟಿ ಕೊನೆಯ ದ್ವಿತೀಯ ಪಿಯು ತರಗತಿಯಲ್ಲಿ ನಿಂತಿದ್ದೇನೆ. ಆದರೆ ಇಷ್ಟು ವರ್ಷಕಾಲ ನಿಮ್ಮಂತಹ ಗುರು ನಾನು ಕಂಡಿಲ್ಲ. ಎಲ್ಲರ ಭಾವನೆಯನ್ನು ತಿಳಿಯುವ ಶಕ್ತಿ ತಮಗಿದೆ. ರಾಮಾಯಣದಲ್ಲಿ ಸೀತೆ ಸೌಂದರ್ಯವನ್ನು ಹೊಂದಿದರೆ ಸೀತಾಲಕ್ಷ್ಮಿಯಾಗಿರುವ ನೀವು ಅವರಂತೆ ಸೌಂದರ್ಯ ಹೊಂದಿದ್ದೀರಿ. ಗುರುವಿನನಲ್ಲಿ ನಟಿಯಾಗಿ ನಿಂತಿದ್ದೀರಿ. ಜಗತ್ತಿನಲ್ಲಿ ಸರಿ ಸಾಟಿ ಇಲ್ಲದವರು ತಂದೆ ತಾಯಿಯ ಪ್ರೀತಿ. ಪ್ರೀತಿಯಿಂದ ಗೌರವಿಸೋ ಕಲಿಸಿದ ಗುರುವಿಗೆ. ನಮ್ಮ ಬದುಕಿನ ಆದರವೇ ಗುರು. ಇವರು ಮಾಡುವರು ಬುದ್ದಿ ಹೇಳುವ ಕಾರ್ಯ. ಇವರೇ ನಮ್ಮಎಲ್ಲ ಸಾಧನೆಗೆ ನಮ್ಮ ಜಾತಕ ನನ್ನ ನೆಚ್ಚಿನ ಸೀತಾಲಕ್ಷ್ಮಿ ಮ್ಯಾಮ್. ನನ್ನ ಗುರುವಾಗಿರುವ ಸೀತಾಲಕ್ಷ್ಮಿ ಮ್ಯಾಮ್ ಅವರು ಅರಳಿದ ಹೂವಿನಂತೆ, ಅವರು ಬರೆದಿರುವ ಪುಸ್ತಕಗಳು ಕಣ್ಣು ತುಂಬಿ ಓದಿದರೂ ಸಾಕಾಗುದಿಲ್ಲ. ಅವರ ಕೈಯಲ್ಲಿ ಏನೋ ಶಕ್ತಿ ಇದೆ. ಅದು ಬರಹ ರೂಪದಲ್ಲಿ ಪುಸ್ತಕಗಳು ಬರೆದು ವಿದ್ಯಾರ್ಥಿಗಳ ಕಲಿಕೆಯಾ, ಮಾತಾಡುವ ಶೈಲಿಯನ್ನೇ ಬದಲಾಯಿಸಿದೆ. ಆದರೆ ಎಲ್ಲೇ ಇದ್ದರು ಹೇಗೆ ಇದ್ದರು ನನ್ನ ಕೈಯಲ್ಲಿ ಬರೆಯುವುದು ನಿಮ್ಮ ಕವನಗಳೇ, ನಿಮ್ಮ ಭಾವನೆಗಳೇ....!! ಕೊಂಚ ಸಮಯದಲ್ಲಿ ಮಿನುಗುತ್ತಿರುವ ಆ ನಿಮ್ಮ ನಗು ಸೀರೆಯಲ್ಲಿ, ಸೀತೆಯಾಗಿ ಕಾಣುವರು ನೀವು. ಪರಿಭಾವಗಳ ಅದಿರು ಎಂಬ ಕಥೆಯ ಪುಸ್ತಕವನ್ನು, ಭಾವಸಾರ ಲೇಖನ ಸಂಕಲನ, ನನ್ನೊಳಗಿನ ನಾನು, ಛಾಯೆಯೊಳ್ ಸಾಹಿತ್ಯ ಕವನ ಸಂಕಲನ ಬರೆದಿರುವ ನೀವು ನನ್ನ ಕೆಲವು ವ್ಯಕ್ತಿತ್ವವನ್ನೇ ಬದಲಾಯಿಸಿದೆ. ಭಾವಸಾರ ಪುಸ್ತಕವು ನಮ್ಮ ಕೆಲವು ಸುಳ್ಳಿನ ಭಾವನೆಗಳನ್ನೇ ಬದಲಾಯಿಸಿದೆ. ಆ ನಿಮ್ಮ ಕವನ ಪುಸ್ತಕಗಳಿಗೆ ತಲೆ ಭಾಗಿ ಕೃತಜ್ಞತೆಯಾಗಿ ನಿಲ್ಲುತೇನೆ. ಏನೇ ಆದರೂ ನನ್ನ ವ್ಯಕ್ತಿತ್ವವನ್ನು ಬದಲಾಯಿಸಿದ ನನ್ನ ನೆಚ್ಚಿನ ಗುರು ಸೀತಾಲಕ್ಷ್ಮಿ ಮ್ಯಾಮ್. ಅವರಲ್ಲಿ ಕೇವಲ ತಿಳುವಳಿಕೆಯನ್ನು ಹಂಚುವಷ್ಟೇ ಅಲ್ಲ.. ಜೀವನದ ಕಷ್ಟಗಳನ್ನು ಎದುರಿಸುವ ಶಕ್ತಿ ಮತ್ತು ಪ್ರೇರಣೆಯು ನೀಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನೇ ಹೊರತರುವ ಕೌಶಲ್ಯ ಹೊಂದಿರುತ್ತಾರೆ. ನಾನು ಮನತುಂಬಿ ಹೇಳುತ್ತೇನೆ. ಏನೇ ಆದರೂ, ಹೇಗೆ ಇದ್ದರು ನನ್ನ ಗುರು, ನನ್ನ ನೆಚ್ಚಿನ ಗುರು..... ನಿಮಗೆ ಸದಾ ಪೂರ್ತಿ ನಮನಗಳು ಮ್ಯಾಮ್.... ಸೀತಾಲಕ್ಷ್ಮಿ....... ಇನ್ನೊಂದು ಜನ್ಮ ದಲ್ಲಿ ನನ್ನ ಗುರುವಾಗಿಯೇ ಇರಿ.... ಇಂತಿ ನಿಮ್ಮ ಶಿಷ್ಯೆ
................................... ಸಮೀರಾ ಬಾನು
ದ್ವಿತೀಯ ಪಿ ಯು ಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************