ಪ್ರೀತಿಯ ಪುಸ್ತಕ : ಸಂಚಿಕೆ - 178
Friday, August 29, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 178
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಅಕ್ಷರಗಳಿಲ್ಲದ ಪುಸ್ತಕವಿದು. ಪುಟ ತುಂಬಾ ಚಿತ್ರಗಳು. ನೀವೇ ಕಥೆ ಕಟ್ಟಿಕೊಳ್ಳಬಹುದು. ಸಂಜೆಯಾಗಿದೆ, ದಿನವಿಡೀ ಬೆಳಕು ನೀಡಿದ ಭಾನು, ಮನೆಗೆ ಹೋಗಿದ್ದಾಳೆ. ಅವಳು ಅಲ್ಲಿ ಏನು ಮಾಡುತ್ತಾಳೆ ಅನ್ನುವ ಕುತೂಹಲ ನಿಮಗೆ ಇದೆಯೇ..? ಇದ್ದರೆ ಭಾನು ಮನೆಗೆ ಹೋಗೋಣ. ಅವಳು ನಮ್ಮನ್ನು ಊಟಕ್ಕೆ ಕರೆದಿದ್ದಾಳೆ. ನೀವು ಗಮನಿಸಿದಿರಾ? ನಾವು ಹೆಚ್ಚಾಗಿ ಸೂರ್ಯನನ್ನು ‘ಅವನು’, ‘ಇವನು’ ಅನ್ನುತ್ತೇವೆ. ಇಲ್ಲಿ ಸೂರ್ಯನನ್ನು ‘ಅವಳು’ ಅನ್ನುತ್ತಾರೆ. ಚಿತ್ರಗಳನ್ನು ಬೆರಗಿನಿಂದ ನೋಡುವ ಹಾಗೆ ಇದೆ. ನೋಡಿ ಆನಂದಿಸಿ, ನಿಮ್ಮದೇ ಕಥೆ ಕಟ್ಟಿಕೊಳ್ಳಿ. ಸೂರ್ಯನ ಮನೆಗೆ ನೀವು ಹೋಗುವ ಅನುಭವವನ್ನು ಕಲ್ಪಿಸಿಕೊಂಡು ಬರೆಯಿರಿ.
ಲೇಖಕರು : ಓಗಿನ್ ನಯಮ್
ಚಿತ್ರಗಳು: ಓಗಿನ್ ನಯಮ್
ಅನುವಾದ: ಹೇಮಾ ಖುರ್ಸಾಪುರ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.85/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
******************************************