-->
ಪ್ರೀತಿಯ ಪುಸ್ತಕ : ಸಂಚಿಕೆ - 176

ಪ್ರೀತಿಯ ಪುಸ್ತಕ : ಸಂಚಿಕೆ - 176

ಪ್ರೀತಿಯ ಪುಸ್ತಕ
ಸಂಚಿಕೆ - 176
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                           
      ಕಂಡಲ್ಲಿ ಕಲೆ – ಇಲ್ಲಿ ಅಲ್ಲಿ ಮತ್ತು ಕಸದ ಬೀಡಲ್ಲಿ
ಪ್ರೀತಿಯ ಮಕ್ಕಳೇ.. ಕಸದ ಬೀಡಲ್ಲೂ ಕಲೆಯನ್ನು ತೋರಿಸುವ ವಿಶಿಷ್ಠ ಪುಸ್ತಕ ಇದು. ಕಸದಲ್ಲಿ ಕಾಣುವ ಕಲೆ, ಅದನ್ನು ವಿವರಿಸುವ ಚುಟುಕಿನಂತಹ ಪದ್ಯಗಳನ್ನು ಇಲ್ಲಿ ಕಾಣಬಹುದು. ತರಕಾರಿ ಸಿಪ್ಪೆ, ಹಳೆಯ ಸಿಡಿ, ಪೆನ್ಸಿಲ್ ಮೆಂಡ್ ಮಾಡುವಾಗ ಬರುವ ಮರದ ತೆಳು ಪದರ, ಐಸ್ ಕ್ರೀಂ ಚಮಚ, ಪಿಸ್ತಾದ ಗಟ್ಟಿ ಸಿಪ್ಪೆ, ಚಾಕಲೇಟಿನ ಕವರ್.. ಎಲ್ಲದರೊಳಗೂ ಕಲೆಯ ಸೊಗಸು ಇದೆ. ಚಾಕಲೇಟ್ ಕವರಿನಿಂದ ಹಕ್ಕಿಯ ರೆಕ್ಕೆ ಮಾಡಿದ್ದು, ಅದಕ್ಕೊಂದು ಪದ್ಯ ಹೀಗಿದೆ ನೋಡಿ – “ರೆಕ್ಕೆ ಬಡಿ ಪಟ ಪಟ್; ಹಾರಿ ಹಾರಿ ಬಡ ಬಡ; ಮಾತು ಬೇಡ ವಟವಟ, ಸುಯ್ ಸುಯ್ ಸುಳಿದಾಟ”. ನೀವೂ ಈ ರೀತಿ ಕಸದಿಂದ ಏನೇನೋ ತಯಾರಿಸಿ ಆಮೇಲೆ ಅದರ ಬಗ್ಗೆ ಹಾಡು ಕಟ್ಟಬಹುದು. 

ಲೇಖಕರು : ಬಿಜಲ್ ವಚ್ಚರಜನಿ, ಅಪರ್ಣಾ ಕಪೂರ್
ಛಾಯಾ ಚಿತ್ರಗಳು: ರಾಧಾ ರಂಗರಾಜನ್ 
ಚಿತ್ರಗಳು: ಪ್ರಿಯಾ ಕುರಿಯನ್, ಅದ್ರಿಜಾ ಘೋಷ್, ಕನಾಟೋ ಜಿಮೊ, ಶೀನಾ ದೇವಯ್ಯ 
ಅನುವಾದ: ಎಂ.ಆರ್ ಗಣೇಶ    
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.70/-

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article