ಮಕ್ಕಳ ಕವನಗಳು : ಸಂಚಿಕೆ - 51 : ಕವನ ರಚನೆ : ಬಾಲಕೃಷ್ಣ.ಬಿ, ಪ್ರಥಮ ಪಿಯುಸಿ
Tuesday, July 15, 2025
Edit
ಮಕ್ಕಳ ಕವನಗಳು : ಸಂಚಿಕೆ - 51
ಕವನ ರಚನೆ : ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ
ಕಾಲೇಜು, ಸುಬ್ರಹ್ಮಣ್ಯ
ಕಡಬಾ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಾಳೆ ಎಂಬುದು..
ಇವತ್ತು ಬದುಕು ನೀ ಸುಮ್ಮನೆ
ಇವತ್ತು ಸಂಭ್ರಮಿಸು ಎಲ್ಲರ ಜೊತೆ
ನಾಳೆ ಎಂಬುದು ಬರದೇ
ಇರಬಹುದು ಜಾಗೃತೆ
ಹಳೆ ನೆನಪುಗಳುದುರಲಿ ಬಿಡು
ಬೀಸುವ ಗಾಳಿಗೆ
ಹೊಸತನವನ್ನು ಹುಟ್ಟಿಸಿಕೊ
ನಿನ್ನನ್ನು ಪ್ರೀತಿಸುವ ಜನಗಳಿಗೆ
ನಾಳೆ ಎಂದು ಕೂತರೆ ನಿಂತರೆ
ಆ ನಾಳೆಯೇ ನೀನು ಕಣ್ಣು ಮುಚ್ಚಿಕೊಂಡರೆ
ಬಿಟ್ಟು ಬಿಡು ಆ ನಾಳೆ ಎಂಬುವ ಶಬ್ದವನ್ನ
ಹುಟ್ಟಿಸಿಕೋ ಇವತ್ತು ಎಂಬ ದಿನವನ್ನ
ನಾಳೆ ಎಂಬುದು ಜೀವನದಲ್ಲಿ
ಕಾಲ್ಪನಿಕವಾಗಿ ಯೇ ಇರಲಿ
ಇವತ್ತು ಎಂಬುದು ಬದುಕಿನಲ್ಲಿ ಶಾಶ್ವತವಾಗಿರಲಿ
............................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ
ಕಾಲೇಜು, ಸುಬ್ರಹ್ಮಣ್ಯ
ಕಡಬಾ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಜನರು ಬಸ್ಸಿಗೆ ಕಾಯುವ ಆತುರಗಳೆಷ್ಟೋ!!
ಮಕ್ಕಳು ಬಸ್ಸಿಗೆ ಕಾಯುವ ಕಾತುರಗಳೆಷ್ಟೋ!!
ನೂಕು ನುಗ್ಗಲು ಇದ್ದರೂ ಬಸ್ಸಿಗೆ ಹೋಗಿ
ಸೇರಬೇಕೆಂಬ ಛಲಗಳೆಷ್ಟೋ!!
ಒಂದು ಬಸ್ಸು ತಪ್ಪಿದರೆ ಮತ್ತೊಂದು ಬಸ್ಸು
ಇಲ್ಲವೆಂಬ ಭಯಗಳೆಷ್ಟೋ||೧||
ಅದೊಂದು ದಿನ ಬಸಿನ್ನಲ್ಲಿ ಹೋಗುವ ದೃಶ್ಯವನ್ನು ಮರೆಯದೆ ಇರುವೆ ಎನ್ನ ಮನದಲಿ
ಬಸ್ಸಿನ ಚಾಲಕನ ಕಷ್ಟವನ್ನು
ಅರಿಯದ ಜನಗಳೆಷ್ಟೋ !!
ಕಂಡಕ್ಟರಿಗೆ ಇರುವ ಕಷ್ಟವನ್ನು
ತಿಳಿಯದ ಮಂದಿಗಳೆಷ್ಟೋ!!
ಕಷ್ಟ ಇದ್ದರೂ ದುಃಖ ಇದ್ದರೂ
ತಮ್ಮ ನೋವನ್ನು ಮರೆಸಿ ನಿಂತು
ಕಂಡಕ್ಟರ್ ಕೆಲಸ ಮಾಡುವ ದಿವಸಗಳೆಷ್ಟೋ!!
ಕೈ ಕಾಲು ನೋವುಗಳಿದ್ದರು
ಮನೆಯವರಿಗೋಸ್ಕರ ಕೆಲಸ ಮಾಡುವ
ಚಾಲಕನಿಗೆ ಇರುವ ನೋವುಗಳೆಷ್ಟೋ||೨||
ಅದೊಂದು ದಿನ ಬಸಿನ್ನಲ್ಲಿ ಹೋಗುವ ದೃಶ್ಯವನ್ನು ಮರೆಯದೆ ಇರುವೆ ಎನ್ನ ಮನದಲಿ
ಸುರಿಯುವ ಮಳೆಯ ಹನಿಗಳೆಷ್ಟೋ !!
ಸುಂದರವಾದ ಪ್ರಕೃತಿಯ ಸೌಂದರ್ಯವೆಷ್ಟೋ !!
ಮಕ್ಕಳು ಮಾತನಾಡುವ ಸಂಭಾಷಣೆಗಳೆಷ್ಟೋ !!
ಚಿಲಿಪಿಲಿ ನಗುವ ಧ್ವನಿಯ ಕೇಳಿರುವುದೆಷ್ಟೋ !!
ಹೊರ ಜಿಲ್ಲೆಗಳ ಹೊಸ ಭಾಷೆಯ ಮಾತನಾಡುವ ಜನಗಳೇಷ್ಟೋ !!
ಅವರ ಜೊತೆ ನಾವು ಮಾತನಾಡುವ ಸವಿ ಸಮಯವೆಷ್ಟೋ ||೩||
ಅದೊಂದು ದಿನ ಬಸಿನ್ನಲ್ಲಿ ಹೋಗುವ ದೃಶ್ಯವನ್ನು ಮರೆಯದೆ ಇರುವೆ ಎನ್ನ ಮನದಲಿ!?........
............................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ
ಕಾಲೇಜು, ಸುಬ್ರಹ್ಮಣ್ಯ
ಕಡಬಾ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಳೆ ಹನಿಗಳು ತಂಪು ಮಾಡಿತು
ಚಿಲಿಪಿಲಿ ಚಿಲಿಪಿಲಿ ಎಂದು
ಕೋಗಿಲೆಯು ಸುಮಧುರ ಕಂಠದಿಂದ
ಮೋಡಿ ಮಾಡಿತು ಈ ಎನ್ನ ಮನದಲಿ ||೧||
ತುಂತುರು ಹನಿಯಾಗಿಸಿ,
ತಂಪಿನ ಚಳಿಯಾಗಿಸಿ
ಪರಿಸರ ಸೌಂದರ್ಯದ ಅಂಚಿನಲ್ಲಿ
ಮೂಡಿ ಬಂದಿತು ಈ ಎನ್ನ ಮನದಲಿ ||೨||
ತಂಪಿನ ಮೋರೆ ಮಾಡಿಸಿ
ಬಿಸಿ ಬಿಸಿ ಚಹಾ ಕುಡಿಸಿ
ಸೊಗಸಾಗಿ ಬರಹವನ್ನು ಬರೆಸಿತು
ಈ ಎನ್ನ ಮನದಲಿ ||೩||
ಹಸಿರೆಲೆಗಳ ಗಿಡಮರಗಳು
ಸುಂದರವಾದ ಹೂ ಬಳ್ಳಿಗಳು
ಮಿಂಚಿನ ಗುಡುಗುಗಳು
ಹಕ್ಕಿಗಳ ಶಬ್ಧಗಾನಗಳು
ಮೂಡಿ ಬಂದಿತು ಈ ಎನ್ನ ಮನದಲಿ||೪||
ರಜೆಯ ಸಂಭ್ರಮವೂ
ಹನಿಯ ಮುತ್ತುಗಳು
ಹಸಿದ ಹೊಟ್ಟೆಯ ಹಸಿವುಗಳು ,
ಪ್ರಕೃತಿಯ ಸೌಂದರ್ಯಗಳು
ಹಕ್ಕಿಯ ಗಾಯನವು
ಮೂಡಿ ಬಂದಿತು ಈ ಎನ್ನ ಮನದಲಿ||೫||
ಕೊನೆಗೆ ಬರವು ಮುಕ್ತಾಯವಾಯಿತು
ಅದನ್ನು ನೋಡಿ ಎನ್ನ ಮನದಲಿ
ನಗುವೊಂದು ಮೂಡಿತು
ಮಳೆಯು ನಿಂತಿತು
ಖುಶಿಯ ಭಾವನೆಯೂ ಉಕ್ಕಿ ಹರಿಯಿತು
ಜೀವದಲ್ಲಿ ಇಂತಹ ಕ್ಷಣ ಇದೆಯೆಂದು ಭಾಸವಾಯಿತು ಈ ಎನ್ನ ಮನದಲಿ||೬||
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ
ಕಾಲೇಜು, ಸುಬ್ರಹ್ಮಣ್ಯ
ಕಡಬಾ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************