ಪ್ರೀತಿಯ ಪುಸ್ತಕ : ಸಂಚಿಕೆ - 173
Friday, July 25, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 173
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಕುಂಭಕರ್ಣನ ಕಥೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವಾಗುತ್ತದೆ. ಹಲವಾರು ಸಾರಿ ಕೇಳಿಸಿಕೊಳ್ಳುವುದಕ್ಕೂ ಖುಷಿಯೇ. ಇಲ್ಲಿ, ಕುಕ್ಕುವಿನ ಅಪ್ಪ ಅವನಿಗೆ ಪ್ರತಿ ರಾತ್ರಿ ಕಥೆ ಹೇಳಬೇಕು. ಆರು ತಿಂಗಳು ಸತತವಾಗಿ ಸದಾ ಮಲಗುವ ಬೃಹದಾಕಾರನಾದ ಕುಂಭಕರ್ಣನ ಕಥೆ. ಕಥೆ ಕೇಳುತ್ತಾ ಕೇಳುತ್ತಾ ಕುಕ್ಕು ನಿದ್ದೆಗೆ ಜಾರುತ್ತಾನೆ. ಅವನಿಗೆ ಕನಸಲ್ಲೂ ಕುಂಭಕರ್ಣನೇ ಕಾಣುತ್ತಾನೆ. ಕನಸಲ್ಲಿ ಕುಂಭಕರ್ಣನಿಗೆ ಕೊಡುವ ಲಾಡುವಿನ ಪರಿಮಳಕ್ಕೆ ಕುಕ್ಕುವಿಗೆ ಎಚ್ಚರವಾಗುತ್ತದೆ. ಲಾಡು ಎಲ್ಲಿ ಅಂತ ಹುಡುಕುತ್ತಾನೆ. ಚಂದ ಚಂದದ ಚಿತ್ರಗಳ ಜೊತೆಗೆ, ಪುಟ್ಟ ಪುಟ್ಟ ವಿವರಗಳ ಜೊತೆಗೆ ತಮಾಷೆಯಾಗಿ ಬರೆದ ಈ ಪುಸ್ತಕ ನಿಮಗೆ ಇಷ್ಟ ಆಗುವ ಹಾಗೆ ಇದೆ. ನೀವು ಒಂದು ವೇಳೆ ಕುಂಭಕರ್ಣನನ್ನು ಭೇಟಿಯಾದರೆ ಅವನ ಹತ್ತಿರ ಏನೇನು ಕೇಳುತ್ತೀರಿ? ಯೋಚನೆ ಮಾಡಿ. ಮಜಾ ಇರುತ್ತದೆ.
ಲೇಖಕರು : ಅರುಂಧತಿ ವೆಂಕಟೇಶ್
ಚಿತ್ರಗಳು: ಶ್ರೇಯಾ ಸೆನ್
ಅನುವಾದ: ದೀಪಾ ಗಣೇಶ್
ಪ್ರಕಾಶಕರು:ತುಲಿಕಾ
ಬೆಲೆ: ರೂ.175/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
ಇದು 4+ ವಯಸ್ಸಿನ ಮಕ್ಕಳಿಗಾಗಿ ಇದೆ. ಸ್ವಲ್ಪ ದೊಡ್ಡ ಮಕ್ಕಳಿಗೂ ಇಷ್ಟವಾಗುವ ಹಾಗೆ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************