ಮಕ್ಕಳ ಕವನಗಳು : ಸಂಚಿಕೆ - 48
Wednesday, June 25, 2025
Edit
ಮಕ್ಕಳ ಕವನಗಳು : ಸಂಚಿಕೆ - 48
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಜಯಶ್ರೀ, 9ನೇ ತರಗತಿ
◾ ಅಭಿಜ್ಞಾ ಎಸ್.ಪಿ, 8ನೇ ತರಗತಿ
◾ ವಿನಿಶ್, 8ನೇ ತರಗತಿ
ಪಕ್ಷಿಗಳ ಇಂಪಾದ ಸ್ವರದ ಚೆಲುವೆ
ನಮ್ಮ ಪರಿಸರದ ಅಂದ
ಬೇರೆಲ್ಲೂ ಇಲ್ಲವೋ ಕಂದ
ಈ ಪುಣ್ಯ ನಾಡು
ಕವಿ ಮಹಾತ್ಮರ ಬೀಡು
ನಮ್ಮ ಪುಣ್ಯ ಈ ನಾಡ ಜನ್ಮ
ಎಂದೆಂದಿಗೂ ತೀರಿಸಲಾಗದ
ಋಣಾನು ಬಂಧವಮ್ಮ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಸರ್ವೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಮುತ್ತು ನಾಚುವ ಕಂಗಳು.
ಗುಲಾಬಿ ಕೆಂಪ ಕೆಂದುಟಿ.
ನವಿಲು ನಾಚುವ ಸೌಂದರ್ಯ
ಅವಳೇ ನನ್ನಮ್ಮಾ
ಹೆತ್ತಳು ಹೊತ್ತಳು
ಮನತುಂಬಿ ಆರೈಸುವಳು.
ಅತ್ತರೆ ಬಾಚಿ
ತಬ್ಬಿ ಸಮದಾನಿಸುವಳು.
ಬಿದ್ದರೆ ಕೈ ಹಿಡಿದು ಎತ್ತುವಳು. ಅಂಜಿದರೆ ಬೆನ್ನು ತಟ್ಟಿ ಮುನ್ನಡೆಸುವಳು ಕಷ್ಟದಲ್ಲೂ ಸುಖದಲ್ಲೂ ಜೊತೆ ನಡೆವಳು ಸಾಲದಮ್ಮ ಈ ಒಂದು ಜನುಮ
ನಿನ್ನ ಋಣ ತೀರಿಸಲು
8ನೇ ತರಗತಿ 'ಅಮೋಘ'
ಶ್ರೀ ರಾಮ ಆಂಗ್ಲ ಮಾಧ್ಯಮ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಹಕ್ಕಿಯಾದ ಸುಂದರ ಸ್ವಪ್ನವನ್ನು....
ಸುಂದರ ಆಗಸದಿ ಹಾರಡುತ್ತಿದೆ...
ನನ್ನ ಎಲ್ಲ ದುಃಖವ
ನೆನೆಯದೆ..
ಹೀಗೆ ಸಾಗಿದೆ ಮುಂದಕೆ
ಎದುರಾಯ್ತು ಒಂದು ಮೋಡ
ತಪ್ಪಿಸಲು ನಾನು ಆಚೆ ಈಚೆ ಹೋದೆ
ಆಗ ನಾನಿದ್ದೆ
ಮಂಚದ ಕೆಳಗೆ.....!!
8ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************