ಅಪ್ಪಂದಿರ ದಿನದ ವಿಶೇಷ : ಸಂಚಿಕೆ -1 : ಬರಹ : ವಿಭಾ ದೇವರಮನೆ, 5ನೇ ತರಗತಿ
Sunday, June 15, 2025
Edit
ಅಪ್ಪಂದಿರ ದಿನದ ವಿಶೇಷ : ಸಂಚಿಕೆ -1
ಬರಹ : ವಿಭಾ ದೇವರಮನೆ
5ನೇ ತರಗತಿ
ಮಾಧವ ಕೃಪಾ ಸ್ಕೂಲ್
ಮಣಿಪಾಲ, ಉಡುಪಿ ಜಿಲ್ಲೆ
ಎಲ್ಲಾ ದಿನಗಳು ವಿಶೇಷವೇ... ಹಾಗೇ ಜೂನ್ 15 - ವಿಶ್ವ ಅಪ್ಪಂದಿರ ದಿನವೆಂದು ಆಚರಿಸಲಾಗುತ್ತಿದೆ. ಆಸರೆ ಹಾಗೂ ಸ್ಪೂರ್ತಿಯಾಗುವ ತಂದೆಯನ್ನು ಸ್ಮರಿಸುವ ದಿನ. ಈ ದಿನ ಮಕ್ಕಳ - ಜಗಲಿಯಲ್ಲಿ ತನ್ನ ಅಪ್ಪನ ಕುರಿತ ಮಾತುಗಳು.... ಮಕ್ಕಳು ಹೇಳಿದ ಪ್ರೀತಿಯ ನುಡಿಗಳು ಇಲ್ಲಿವೆ....
ಥ್ಯಾಂಕ್ಸ್ ಅಪ್ಪಾ !
ನಿನಗಿವತ್ತು ಥ್ಯಾಂಕ್ಸ್
ಹೇಳ್ಬೇಕು ಅನಿಸ್ತಿದೆ.
ಹಾಗೆ ನೋಡಿದ್ರೆ,
ನಿನ್ನ ಬಳಿ ಯಾವಾಗ್ಲೂ
ಕೇಳಿ ಪಡ್ಕೊಳ್ಳೋದೇ ಹೆಚ್ಚು
ಮರಳಿ ಥ್ಯಾಂಕ್ಸ್ ಹೇಳಿದ್ದೆ ಕಡಿಮೆ.
ನಿಂಗೊತ್ತು ನಿಂಗದು ಬೇಕಾಗಿಲ್ಲ ಅಂತ.
ತಂದೆಯ ವ್ಯಕ್ತಿತ್ವ, ಮಗಳಿಗೆ
ಜಗತ್ತಿನ ಎಲ್ಲ ಗಂಡಸರ ಕುರಿತು
ಅಭಿಪ್ರಾಯ ಮೂಡಿಸುತ್ತೆ ಅಂತಾರೆ.
ಥ್ಯಾಂಕ್ಸ್ ಅಪ್ಪಾ !
ನನಗೆ ಸದಭಿಪ್ರಾಯ ಮೂಡಿಸಿದ್ದಕ್ಕೆ.
ಥ್ಯಾಂಕ್ಸ್ ಅಪ್ಪಾ !
ಕುಟುಂಬದ ಜವಾಬ್ದಾರಿಗಳಿಂದ
ನೀನೆಂದೂ ವಿಮುಖನಾಗಲಿಲ್ಲ
ದುಶ್ಚಟಗಳಿಲ್ಲದಿರುವುದೇ
ಮಕ್ಕಳಿಗೆ ನೀಡುವ ಕಾಣಿಕೆಯೆನ್ನುವುದಾದರೆ
ನೀನು ದೊಡ್ಡ ಕಾಣಿಕೆ.
ಥ್ಯಾಂಕ್ಸ್ ಅಪ್ಪಾ!
ನನಗೆ ನೋವಾದಾಗ ಅಮ್ಮಾ
ಎಂದು ಕಿರಿಚಿದರೂ,
ಓಡಿ ಬರೋದು ನೀನೇ ಮೊದಲು.
ಥ್ಯಾಂಕ್ಸ್ ಅಪ್ಪಾ.
ಹೆತ್ತಿದ್ದರೂ
ನೀನು ನನ್ನನ್ನು ಸದಾ ತಲೆಯಲ್ಲಿ
ಹೊತ್ತು ತಿರುಗುತ್ತೀ ಎಂದು ನನಗೆ ಗೊತ್ತು.
ಥ್ಯಾಂಕ್ಸ್ ಅಪ್ಪಾ.
ಮಗಳನ್ನು ಮಗನ ಹಾಗೇ
ಬೆಳೆಸಿದ್ದೀನಿ ಅಂತ
ನೀನು ಎಂದೂ ಹೇಳಲೇ ಇಲ್ಲ.
ಬದಲಿಗೆ
ನಾನು ಮಗಳಾಗಿರುವುದಕ್ಕೇ...
ಸಂಭ್ರಮ ಪಟ್ಟವನು ನೀನು.
ಥ್ಯಾಂಕ್ಸ್ ಅಪ್ಪಾ.
ಇತರರ ಎದುರಲ್ಲಿ
ಸದಾ ಹೆಮ್ಮೆಯಿಂದ
ನನ್ನ ಮಗಳು ಎಂದು
ಪರಿಚಯ ಮಾಡ್ತೀಯಲ್ಲ
ಆ ಕ್ಷಣದಲ್ಲಿ ನನಗೆ
ಪ್ರತೀ ಜನ್ಮದಲ್ಲೂ
ನಿನ್ನ ಮಗಳಾಗೇ
ಹುಟ್ಟೇಕು ಅನ್ಸುತ್ತೆ.
ಥ್ಯಾಂಕ್ಸ್ ಅಪ್ಪಾ.
ಆಟ ಆಡುವಾಗ,
ಕೋಪಗೊಂಡಾಗ,
ಕೋಳಿ ಜಗಳ ಆದಾಗ
ಸಾವಿರ ಸಲ ನಿನಗೆ
ಐ ಹೇಟ್ ಯು ಎಂದಿದ್ದೇನೆ
ಆದರೆ ಇವತ್ತು
ಮನಸಾರೆ ಹೇಳ್ತೀನಿ
ಐ ಲವ್ ಯು ಅಪ್ಪಾ
ಥ್ಯಾಂಕ್ಸ್ ಅಪ್ಪಾ!
(ಸಹಾಯ : ಅಪ್ಪ)
5ನೇ ತರಗತಿ
ಮಾಧವ ಕೃಪಾ ಸ್ಕೂಲ್
ಮಣಿಪಾಲ, ಉಡುಪಿ ಜಿಲ್ಲೆ
******************************************