ಪ್ರೀತಿಯ ಪುಸ್ತಕ : ಸಂಚಿಕೆ - 164
Friday, May 23, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 164
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಲೇಖಕರು : ಎಸ್ಥರ್ ದುಫ್ಲೋ, ಇವರು ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ತಮ್ಮ ಸುತ್ತಲಿನ ಲೋಕವನ್ನು ಓದುವ, ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಇಟ್ಟ ಒಂದು ಹೆಜ್ಜೆ. ಈ ಕತೆಯು ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕವಾಗಿ ಪಡೆಯುವ ಕುರಿತಂತೆ ಇರುವ ಐದು ಪುಸ್ತಕಗಳ ಸರಣಿಯ ಭಾಗ.
ಪ್ರೀತಿಯ ಮಕ್ಕಳೇ... ನೆಸೊ ಒಂದಷ್ಟು ತಿಂಗಳು ಹಳ್ಳಿಯನ್ನು ಬಿಟ್ಟು ದೂರ ಹೋಗುತ್ತಿದ್ದಾನೆ. ಕೆಲಸ ಹುಡುಕುತ್ತಾ ದೊಡ್ಡ ಸಿಟಿಗೆ ಮೊದಲ ಬಾರಿ ಹೋಗುತ್ತಿದ್ದಾನೆ. ಅಲ್ಲಿ ಅವನನ್ನು ಹೆದರಿಸುತ್ತಾರೆ. ನೆಸೊ ಹೊಂದಿಕೊಳ್ಳಲು ಬಹಳ ಕಷ್ಟ ಪಡುತ್ತಾನೆ. ಹೇಗೋ ದುಡಿಮೆ ಮಾಡಿ ಮನೆಗೆ ಹಣ ಕಳುಹಿಸುತ್ತಾನೆ. ಅವನ ಗೆಳೆಯ ನಾಜೆ ಬಹಳ ಬಡವ. ಮುಂದೆ ಅವನೂ ನೆಸೊ ಜೊತೆಗೆ ಸೇರಿಕೊಳ್ಳುತ್ತಾನೆ. ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಸೋಂಕು ರೋಗ ಬಂದಾಗ, ಮತ್ತೆ ಊರು ಸೇರುತ್ತಾರೆ. ಕಷ್ಟದ ಬದುಕಿನ ಕಥೆ ಇದು. ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಅವರು ಮತ್ತೆ ಸಿಟಿಗೆ ಹೋಗಿ ದುಡಿಯಲು ಸಾಧ್ಯವಾಯಿತೇ, ಓದಿ ನೋಡಿ.
ಚಿತ್ರಗಳು: ಶಾಯಿನ್ ಒಲೀವ್ಹಿಯೆ
ಅನುವಾದ: ಓ ಎಲ್. ನಾಗಭೂಷಣಸ್ವಾಮಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.100/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************