ಪ್ರೀತಿಯ ಪುಸ್ತಕ : ಸಂಚಿಕೆ - 159
Saturday, April 19, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 159
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಅಜ್ಜಿ ಅಜ್ಜ ಜೊತೆಗೆ ಆಡುವುದು ಕಾಲ ಕಳೆಯುವುದು ಎಲ್ಲರಿಗೂ ಇಷ್ಟವೇ ತಾನೇ? ಈ ಪುಸ್ತಕದಲ್ಲಿ ಸೂರಜಿಗೆ ಮತ್ತು ಅವನ ಅಜ್ಜಮ್ಮನಿಗೆ ಹೊಸದನ್ನು ಕಂಡು ಹಿಡಿಯುವುದು ಅಂದರೆ ಬಹಳ ಇಷ್ಟ. ಸೂರಜ್ ಅಜ್ಜಿ ಹತ್ರ ಕೊಬ್ಬರಿ ಮಿಠಾಯಿ ಮಾಡೋಣ್ವಾ ಅಂತ ಕೇಳುತ್ತಾನೆ. ಅಜ್ಜಿ, ‘ನೀನು ಸಹಾಯ ಮಾಡೋದಾದರೆ ಮಾತ್ರ’ ಅನ್ನುತ್ತಾರೆ. ಅಜ್ಜಿ ಮತ್ತು ಸೂರಜ್ ಸೇರಿಕೊಂಡು ಕೊಬ್ಬರಿ ಮಿಠಾಯಿ ಮಾಡುವ ಕಥೆ ನಿಜಕ್ಕೂ ಅದ್ಭುತವಾಗಿದೆ. ತೆಂಗಿನ ಕಾಯಿ ಕೊಯ್ಯುವುದರಿಂದ ಹಿಡಿದು ಮಿಠಾಯಿ ತಿನ್ನುವವರೆಗೂ ಅವರು ಬಳಸುವ ಯಂತ್ರಗಳು ಆಸಕ್ತಿದಾಯಕವಾಗಿವೆ. ಚಿತ್ರಗಳೇ ಕಥೆಯನ್ನು ಹಿಡಿದಿಡುತ್ತವೆ. ಓದಿದರೆ ನಿಮಗೂ ಕೊಬ್ಬರಿ ಮಿಠಾಯಿ ಮಾಡುವ ಆಸೆ ಹುಟ್ಟುತ್ತದೆ, ಮತ್ತು ತರತರಹದ ಯಂತ್ರಗಳ ಪರಿಚಯವೂ ಆಗುತ್ತದೆ.
ಲೇಖಕರು ಮತ್ತು ಚಿತ್ರಗಳು: ರಾಜೀವ್ ಐಪ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.75/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************