-->
ಮಕ್ಕಳ ಕವನಗಳು : ಸಂಚಿಕೆ - 39 - ಕವನ ರಚನೆ : ಪ್ರತೀಕ್ಷಾ ತಂಟೆಕ್ಕು , 9ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 39 - ಕವನ ರಚನೆ : ಪ್ರತೀಕ್ಷಾ ತಂಟೆಕ್ಕು , 9ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 39
ಕವನ ರಚನೆ : ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ
ಎಲ್. ಸಿ. ಆರ್. ಇಂಡಿಯನ್
ಹೈಸ್ಕೂಲ್, ಕಕ್ಯಪದವು, ಉಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.


ನಂಬಿಕೆ ಎಂಬ ಬೇರಿನಿಂದ
ಸ್ನೇಹ ಎಂಬ ಬುನಾದಿಯಿಂದ 
ಒಗ್ಗಟ್ಟುಎಂಬ ಸೂತ್ರದಿಂದ 
ಕಾಳಜಿ ಎಂಬ ಕೊಂಬೆಗಳಿಂದ 
ನಿಸ್ವಾರ್ಥತೆ ಎಂಬ ಮರದಲ್ಲಿ 
ಅರಳುವ ಹೂವೆ ಗೆಳೆತನ.

ಜೀವನದ ಕಷ್ಟ ಸುಖದಲ್ಲಿ ಜೊತೆಗೈದು 
ಬಾಳ ಪಯಣದೊಳು ಜೊತೆ ಬೆರೆದು 
ಖುಷಿಯಲ್ಲಿ ಸಿಹಿ ಹಂಚಿಕೊಂಡು
ತೊಳಲಿನಲ್ಲಿ ಕಣ್ಣೀರ ಸಮಪಾಲಗಿಸಿಕೊಂಡು
ಜೀವನದಲ್ಲಿ ಸಿಹಿಯ 
ರಸ ಚೆಲ್ಲುವುದೇ ಗೆಳೆತನ.

ಜೀವನ ಎಂಬ
ಸಿಹಿ ತಿನಿಸಿಗೆ ಸರಿಯಾದ ಪಾಕವೇ
ಮಿತ್ರತ್ವ.
ಈ ಸ್ನೇಹವೆ ನಿಜವಾದ ಜೀವನದ ಸತ್ವ
ಇದೆ ಬಾಳ ಬೆಳಗಿಸೋ
ತತ್ವ.
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ
ಎಲ್. ಸಿ. ಆರ್. ಇಂಡಿಯನ್
ಹೈಸ್ಕೂಲ್, ಕಕ್ಯಪದವು, ಉಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



ನೀ ಮುನ್ನಡೆ 
ನಿನ್ನ ಪ್ರತಿಭೆಯ ಅನಾವರಣಕ್ಕಾಗಿ 
ನೀ ಮುನ್ನಡೆ ನಿನ್ನ ಶಕ್ತಿಯನ್ನು             
ತೋರಿಸುದಕ್ಕಾಗಿ

ನೀ ಮುನ್ನಡೆ 
ನಿನ್ನ ನೋಡಿ ನಕ್ಕವರ ನೇತ್ರ ಕುಕ್ಕಿಸಲು 
ನೀ ಮುನ್ನಡೆ 
ನಿನ್ನ ಕನಸಿಗೆ ರೆಕ್ಕೆ ಕಟ್ಟಿ ಹಾರಲು

ನೀ ಮುನ್ನಡೆ 
ನಿನ್ನ ಸ್ವಪ್ನದತ್ತ ದಾರಿ ಸೃಷ್ಟಿಸುತ್ತ
ನೀ ಮುನ್ನಡೆ 
ಹಿಂಜರಿಕೆ ಎಂಬ ಶತ್ರುವನ್ನು ಬೆನ್ನಟ್ಟಿಸುತ್ತ

ನೀ ಮುನ್ನಡೆ 
ನಿನಗೋಸ್ಕರ ಎದ್ದು ನುಡಿಯಲು 
ನೀ ಮುನ್ನಡೆ 
ನಿನಗೆ ಟೀಕಿಸಿದವರ ಮುಂದೆ ಬೆಳೆಯಲು 

ನೀ ಮುನ್ನಡೆ 
ನಿನ್ನ ಸಾಧನೆಯ ಸುದೀರ್ಘ ಪಯಣದತ್ತ 
ನೀ ಮುನ್ನಡೆ ಸಾಧನೆಯ
ಸಾಗರದತ್ತ.
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ
ಎಲ್. ಸಿ. ಆರ್. ಇಂಡಿಯನ್
ಹೈಸ್ಕೂಲ್, ಕಕ್ಯಪದವು, ಉಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*****************************************



ತಾನೇ ಶಕ್ತಿಶಾಲಿ ಎಂದು 
ಬೀಗುತ್ತಿದ್ದ ರಾವಣನ                        
ಅಹಂಕಾರ ಕಾಲದ                
ಮುಂದೆ ಸೋತಿತು.                               
ರಾಮನಿಂದ ಆತನ                         
ಅಂತ್ಯವಾಯಿತು

ತನಗೆ ಅಂತ್ಯವಿಲ್ಲ                            
ಎಂದು ಬೀಗುತ್ತಿದ್ದ
ಹಿರಣ್ಯಾಕ್ಷನ ಅಹಂಕಾರ                     
ಸಮಯದ ಮುಂದೆ ತಲೆಬಾಗಿತು 
ವರಾಹ ಅವತಾರದಿ ದೇವನಿಂದ ಆತನ ಅಂತ್ಯವಾಯಿತು.

ಇನ್ನು ಈ ಕಲಿಯುಗದಿ                      
ಮುಖಕ್ಕೆ ಬಣ್ಣ ಬಳಿದು                      
ಮತ್ತೋರ್ವರ 
ವದನಕ್ಕೆ ಮಸಿ 
ಬಳಿಯುವರು
ಕೆಲವರು.

ಕಾಲ ಯಾರನ್ನು ಕಾಪಾಡದು 
ಕರ್ಮ ಯಾರನ್ನು ಬಿಡದು.
ಕಾಲ ಮುಖವಾಡವ                          
ಕಳಚದೆ ಬಿಡುವುದೇ?
ಅದ ಹಿಂದಿರುವ ಮೊಗವ                
ಅನಾವರಣ ಮಾಡದೆ?

ಕಾಲಕ್ಕೂ 
ಕರ್ಮಕ್ಕೂ  
ಅಮೋಘ ನಂಟು 
ನೀ ಬೆಸಕಿದ 
ಕರ್ಮವ 
ಹಿಂತಿರುಗಿಸಲು ಕಾಲವುಂಟು.

ಊಸರವಳ್ಳಿಯಾಗಿರುವ 
ಜನರ ನಿಜರೂಪವ 
ಕಳಚದೆ ಬಿಡುವುದೇ ಕಾಲ?
ಸತ್ಯಕ್ಕೆ ಸೋಲಿದ್ದರು ಸಾವಿಲ್ಲ 
ಕಾಲ ಸತ್ಯವ ತಿಳಿಸದೆ                        
ಸುಮ್ಮನಿರೋದಿಲ್ಲ.

ಮೋಸ ಹೋದವರು ಹಾಕುತಿಹರು ಶಾಪ 
ಕೇಡಿಗಳಿಗೆ ಅಂಟಿಕೊಳ್ಳದೆ ಇರುವುದೇ 
ಅವರ ಕಣ್ಣೀರ ಪಾಪ?
ಅವರನ್ನು ಕಾಡದೆ ಬಿಡುವುದೇ 
ಕಾಲನ ವಿಕೋಪ 
ಅವರನ್ನು ಸುಮ್ಮನೆ ಬಿಡುವುದೇ 
ಈ ವಿಕೋಪದ ತಾಪ.

ಕಾಲ ಮಾಡುತ್ತದೆ 
ಅಧರ್ಮದ ಸಂಹಾರ 
ಎಲ್ಲದಕ್ಕೂ 
ಕಾಲವೇ ಉತ್ತರ
ಆದ್ದರಿಂದ ನಾ ಹೇಳುವುದೊಂದೇ 
ಕಾಲಾಯ ತಸ್ಮಾಯ ನಮಃ 
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ
ಎಲ್. ಸಿ. ಆರ್. ಇಂಡಿಯನ್
ಹೈಸ್ಕೂಲ್, ಕಕ್ಯಪದವು, ಉಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************

Ads on article

Advertise in articles 1

advertising articles 2

Advertise under the article