-->
ಪ್ರೀತಿಯ ಪುಸ್ತಕ : ಸಂಚಿಕೆ - 155

ಪ್ರೀತಿಯ ಪುಸ್ತಕ : ಸಂಚಿಕೆ - 155

ಪ್ರೀತಿಯ ಪುಸ್ತಕ
ಸಂಚಿಕೆ - 155
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
      
       

                          ರಾಜು ಮತ್ತು ಮರ
ಪ್ರೀತಿಯ ಮಕ್ಕಳೇ... ಮರದ ಉಪಯೋಗ ಏನು ಅಂತ ಕೇಳಿದರೆ ನೀವು ಪಟ ಪಟನೆ ಪಟ್ಟಿ ಮಾಡಬಲ್ಲಿರಿ. ಹೌದು ತಾನೇ. ಮರದ ಬಗ್ಗೆ ಗೊತ್ತಿರುತ್ತದೆ. ಆದರೆ ಪ್ರೀತಿಸಿ ಅದನ್ನು ರಕ್ಷಣೆ ಮಾಡುವವರು ಎಷ್ಟು ಮಂದಿ. ಇದು ಮರವನ್ನು ಪ್ರೀತಿಸುವ ಒಬ್ಬ ಕ್ರಿಯಾಶೀಲ ಹುಡುಗನ ಕಥೆ. ರಾಜು ಹುಟ್ಟುವಾಗಲೆ ಅವನ ಮನೆಯ ಎದುರು ಒಂದು ಮರವಿತ್ತು. ರಾಜುವಿಗೆ ಆ ಮರದ ಜೊತೆಗೆ ತುಂಬಾ ಒಡನಾಟ ಬೆಳೆಯಿತು. ಊಟ ಮಾಡಲು ಹಟ ಮಾಡುವಾಗಲೆಲ್ಲಾ ಅಮ್ಮ ಅವನನ್ನು ಮರದ ಬಳಿಗೇ ಕರೆದೊಯ್ಯುತ್ತಿದ್ದಳು. ಹಾಗೆಯೇ ಮರದ ಜೊತೆಗೆ ರಾಜುವಿನ ಸ್ನೇಹ ಪ್ರೀತಿ ಬೆಳೆದಿತ್ತು. ಅಷ್ಟರಲ್ಲಿ ಒಂದು ಸುದ್ದಿ ಬಂತು, ರಾಜುವಿನ ನಿದ್ದೆ ಕೆಡಿಸಿತು. ಅವನ ಊರಿನ ಹೆದ್ದಾರಿಯ ಅಗಲೀಕರಣ ಶುರುವಾಗಿತ್ತು. ರಸ್ತೆಯಂಚಿನ ಮರಗಳನ್ನು ಕಡಿಯಲು ಆದೇಶ ಬಂದಿತ್ತು. ರಾಜುವಿಗೆ ಅಳುವೇ ಬಂದಿತ್ತು. ಆದರೆ ಅವನು ಸುಮ್ಮನೇ ಕೂರಲಿಲ್ಲ. ಮರವನ್ನು ಉಳಿಸಿಯೇ ತೀರುವುದಾಗಿ ನಿರ್ಧಾರ ಮಾಡಿದ. ಇದು ಸುಲಭದ ಕೆಲಸವಲ್ಲ. ರಾಜು ಸೋತನೇ, ಗೆದ್ದನೇ, ಹೇಗೆ ಗೆದ್ದ? ಎಲ್ಲಾ ವಿಚಾರ ಪುಸ್ತಕದ ಒಳಗೆ ಇದೆ. ಇಣಿಕಿ ನೋಡಿ.  
ಲೇಖಕರು: ಸುಧಾ ಆಡುಕೊಳ 
ಚಿತ್ರಗಳು: ಎಂ.ಮೋಹನ್ 
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು

ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article