ಶಿವರಾತ್ರಿ ಹಬ್ಬದ ಮಹತ್ವ - ಬರಹ : ದಿವ್ಯ ಜ್ಯೋತಿ ಶೆಟ್ಟಿ, 8ನೇ ತರಗತಿ
Wednesday, February 26, 2025
Edit
ಮಕ್ಕಳ ಲೇಖನ : ಶಿವರಾತ್ರಿ ಹಬ್ಬದ ಮಹತ್ವ
ಬರಹ : ದಿವ್ಯ ಜ್ಯೋತಿ ಶೆಟ್ಟಿ
8ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ
ಉಡುಪಿ ಜಿಲ್ಲೆ.
ಹಿಂದುಗಳ ಪ್ರಕಾರ ಅನೇಕ ಹಬ್ಬಗಳಲ್ಲಿ ಮಹಾಶಿವರಾತ್ರಿ ಹಬ್ಬವು ಒಂದಾಗಿದೆ. ಶಿವನಿಗೆ ಶಿವರಾತ್ರಿ ಪ್ರಿಯವಾದ ದಿನ. ಪುರಾಣದ ಪ್ರಕಾರ ಶಿವರಾತ್ರಿಯಂದು "ನನ್ನನ್ನು ಪೂಜಿಸುವ ಭಕ್ತರಿಗೆ ನಾನು ವಿಶೇಷವಾಗಿ ಅನುಗ್ರಹಿಸುತ್ತೇನೆ" ಎಂದು ಸ್ವತಹ ಶಿವನೇ ದೇವಿ ಪಾರ್ವತಿಯ ಬಳಿ ಹೇಳುತ್ತಾರೆ ಎಂದು ಪುರಾಣ ಹೇಳುತ್ತದೆ.
ಶಿವರಾತ್ರಿ ಯಂದು - ಶಿವನಿಗೆ ಪ್ರಿಯವಾದ ಬಿಲ್ಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜೆ ಮಾಡಿದರೆ ಯಾಗ ಮಾಡಿದ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಪೌರಾಣಿಕ ಪ್ರಕಾರ ಈ ದಿನದಂದು ಶಿವ ಮತ್ತು ಪಾರ್ವತಿಯ ಮಿಲನವಾಗಿತ್ತು. ಮಹಾಶಿವರಾತ್ರಿ ಎಂದರೆ ಇದರ ಅರ್ಥ ಹೀಗಿದೆ.... ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ, ಈ ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನ. ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.
ಅನೇಕ ಶಿವಸ್ತುತಿಗಳಲ್ಲಿ, ಈ ಶಿವಸ್ತುತಿಯು ಒಂದು, ಇದು ಹೇಳುವುದೇನೆಂದರೆ -
"ಬದುಕು ನನ್ನದು ನಿರ್ಣಯ ನಿನ್ನದು"
"ಬಯಕೆ ನನ್ನದು ನೀಡುವ ಇಚ್ಛೆ ನಿನ್ನದು"
"ಪ್ರಯತ್ನ ನನ್ನದು ಫಲ ನಿನ್ನದು"
ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಓಂ... ನಮಃ... ಶಿವಾಯ...
ಚಿತ್ರ : ಅಂತರ್ಜಾಲ ಕೃಪೆ.
8ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ
ಉಡುಪಿ ಜಿಲ್ಲೆ
*******************************************