ಪ್ರೀತಿಯ ಪುಸ್ತಕ : ಸಂಚಿಕೆ - 146
Friday, January 17, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 146
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಇದೊಂದು ಇರುವೆಗಳ ಗುಂಪು. ಇಲ್ಲಿ ಕಿಟ್ಟಿ, ಚಿಟ್ಟಿ, ಟಿಟ್ಟಿ ಮತ್ತು ಪಿಟ್ಟಿ ಇರುವೆಗಳು ಇವೆ. ಜೊತೆಜೊತೆಗೆ ಆಹಾರ ಹುಡುಕಿಕೊಂಡು ಹೋಗುತ್ತವೆ. ಆಗ ಒಬ್ಬ ಆಗಂತುಕ ಇವರಿಗೆ ಎದುರಾಗುತ್ತಾನೆ. ಅವನು ಯಾರು? ಗೆಳೆಯನೇ? ಶತ್ರುವೇ? ಯಾಕೆ ಬಂದ ಎಂಬುದೇ ಕಥೆಯ ಸಾರ. ನೇರ ನೋಟಕ್ಕೆ ಇರುವೆಯಂತೆಯೇ ಕಾಣುವ ಆದರೆ ಇರುವೆಯಂತೆ ಕಷ್ಟಪಟ್ಟು ದುಡಿಯದ ಇದೊಂದು ಜೀವಿ ಯಾವುದು ಎಂದು ಇರುವೆಯ ನಾಯಕನಿಗೂ ಯೋಚನೆಯಾಗುತ್ತದೆ. ಅಚ್ಚರಿಯೆಂದರೆ ಅದು ಒಂದು ಇರುವೆ ರೂಪದ ಜೇಡ ಆಗಿರುತ್ತದೆ. ಅದು ಯಾಕೆ ಇರುವೆಗಳ ಜೊತೆಗೆ ಬಂತು ಅಂತ ನಿಮಗೂ ಅನಿಸಬಹುದು. ಅಲ್ಲವೇ. ಓದಿ ನೋಡಿ. ಕಾಲ್ಪನಿಕ ಕಥೆಯೊಂದಿಗೆ ಇರುವೆ ಅನುಕರಿಸುವ ಜೇಡಗಳ ಬಗ್ಗೆ ಒಂದಿಷ್ಟು ಮಾಹಿತಿಯೂ ಇದೆ. ದೊಡ್ಡ ಗಾತ್ರದ ಪುಸ್ತಕ. ಸನ್ನಿವೇಶಕ್ಕೆ ತಕ್ಕಂತೆ ಪುಟ ತುಂಬಾ ಚಿತ್ರಗಳು.
ಲೇಖಕರು: ಅನುಪಮಾ ಕೆ. ಬೆಣಚಿನಮರ್ಡಿ
ಚಿತ್ರಗಳು : ಶೈಲಜಾ ಎಸ್.
ಪ್ರಕಾಶಕರು: ಅವ್ವಾ ಪುಸ್ತಕ
ಬೆಲೆ: ರೂ175/-
4-5ನೇ ತರಗತಿಯ ಮಕ್ಕಳು ಓದಬಹುದು. ಚಿಕ್ಕ ಮಕ್ಕಳಿಗೂ ಓದಿ ಹೇಳುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅವ್ವಾ ಪುಸ್ತಕ, www.awwabooks.com 9739266465; 9945550869
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************