ಪ್ರೀತಿಯ ಪುಸ್ತಕ : ಸಂಚಿಕೆ - 145
Saturday, January 11, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 145
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಸ್ವಾತಂತ್ರ್ಯ ದಿನಾಚರಣೆ ಬಂದರೆ ಶಾಲೆಯಲ್ಲಿ ಏನೇನೋ ಕಾರ್ಯಕ್ರಮಗಳು. ಅದಕ್ಕೆ ತಯಾರಿ ಇರುತ್ತದೆ. ಅದರ ಸಂಭ್ರಮ ನಿಮಗೆ ಗೊತ್ತೇ ಇದೆ. ಈ ಪುಸ್ತಕದಲ್ಲಿ ಗೋದಾವರಿ ಬಡಾವಣೆಯಲ್ಲಿ ನಡೆವ ಸ್ವಾತಂತ್ರ್ಯ ದಿನಾಚರಣೆಯ ಸೊಗಸಾದ ಚಿತ್ರಣವಿದೆ. ಬಡಾವಣೆಯ ಪ್ರತಿಯೊಬ್ಬರೂ ಏನೇನೋ ತಯಾರಿ ಮಾಡುವ ಕೆಲಸದಲ್ಲಿ ಮುಳುಗಿದ್ದಾರೆ. ಪಯೋಶನಿಗೆ ಏನಾದರೂ ವಿಶೇಷವಾಗಿರೋದು, ಅತ್ಯದ್ಭುತ ವಾಗಿರುವಂಥದ್ದು ಮಾಡುವ ಆಸೆ. ಬ್ಯಾಂಡಿಗೆ ಸೇರಿಕೊಳ್ಳಲು ಬ್ಯಾಂಡ್ ಮಾಸ್ಟರ್ ತೋತಾಜಿ ಸಹಕರಿಸುತ್ತಲೇ ಇಲ್ಲ. ನ್ಯಾನ್ಸಿ ಅವಳನ್ನು ಕರೆದು ಸ್ವತಂತ್ರ ಸೋದರಿಯರ ಗುಂಪಿಗೆ ಸೇರಿಸಿದಳು. ಇವರೆಲ್ಲಾ ಸೇರಿ ಎಂತಹಾ ಅದ್ಭುತ ಮಾಡಿದರು ಅಂತ ಪುಸ್ತಕ ಓದಿದರೆ ಗೊತ್ತಾಗುತ್ತದೆ. ದೊಡ್ಡ ಪುಸ್ತಕ, ಆಕರ್ಷಕ ಚಿತ್ರಗಳೂ ಇವೆ.
ಲೇಖಕರು: ಮೇನಕಾ ರಾಮನ್
ಚಿತ್ರಗಳು: ಕೃತಿಕಾ ಸೂಸರ್ಲ
ಅನುವಾದ: ಜಯಶ್ರೀ ಕಾಸರವಳ್ಳಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.85/-
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ; 3-5 ನೇ ತರಗತಿಯ ಮಕ್ಕಳು ಓದಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************