ಪ್ರೀತಿಯ ಪುಸ್ತಕ : ಸಂಚಿಕೆ - 144
Friday, January 3, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 144
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಬಾಪು ಗಾಂಧಿ ಅವರ ಬದುಕು ತುಂಬಾ ತುಂಬಾ ವಿಸ್ತಾರವಾದದ್ದು. ಎಷ್ಟು ತಿಳಿದುಕೊಂಡರೂ ಸಾಲದು ಅನಿಸುವ ಹಾಗೆ ಇದೆ. ಈ ಪುಸ್ತಕದಲ್ಲಿ ಗಾಂಧೀಜಿಯ ಹತ್ತು ಹತ್ತು ಹಲವು ರೂಪಗಳ ಚಿತ್ರಣವಿದೆ. ಗಾಂಧೀಜಿ ಯಾರು ಅಂತ ಕೇಳಿದರೆ, ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಸತ್ಯಾಗ್ರಹ ಎಂಬ ಅಹಿಂಸಾತ್ಮಕ ಹೋರಾಟದ ದಾರಿಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಅಂತ ಹೇಳಿಯೇ ಹೇಳುತ್ತೇವೆ. ಈ ಪುಸ್ತಕದಲ್ಲಿ ಅವರು ಒಬ್ಬ ಬ್ಯಾರಿಸ್ಟರ್, ದರ್ಜಿ, ಅಗಸ, ಕ್ಷೌರಿಕ, ಭಂಗಿ, ಚಮ್ಮಾರ, ಸೇವಕ, ಬಾಣಸಿಗ, ವೈದ್ಯ, ದಾಯಿ, ಶಿಕ್ಷಕ, ನೇಕಾರ, ವ್ಯಾಪಾರಿ, ರೈತ, ಹರಾಜುಗಾರ, ಬಿಕ್ಷುಕ.. ಹೀಗೇ ಅವರ ಇನ್ನೊಂದಷ್ಟು ರೂಪಗಳನ್ನು ಕಾಣಬಹುದು. ಒಬ್ಬ ವ್ಯಕ್ತಿ ಏನೆಲ್ಲಾ ಆಗುವುದು ಸಾಧ್ಯ ಎಂದು ಬೆರಗಾಗುವ ಹಾಗೆ ಆಗುತ್ತದೆ ಇದನ್ನು ಓದುವಾಗ. ವಿಶೇಷವೆಂದರೆ ಈ ಎಲ್ಲಾ ಕೆಲಸಗಳಲ್ಲಿ ಗಾಂಧೀಜಿ ಪರಿಣಿತರೂ ಆಗಿದ್ದರು. ಇವು ನಮಗೆ ಸದಾ ಪ್ರೇರಣೆ ನೀಡುವ ಜೀವನಗಾಥೆ.
ಲೇಖಕರು: ಅನು ಬಂದೋಪಾಧ್ಯಾಯ
ಚಿತ್ರಗಳು: ಆರ್.ಕೆ ಲಕ್ಷ್ಮಣ್
ಅನುವಾದ: ಎಚ್.ಎನ್.ಗೀತಾ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.175/-
6-7 ನೇ ತರಗತಿಯ ಮಕ್ಕಳು, ಓದುವ ಅಭ್ಯಾಸ ಇರುವ ಮಕ್ಕಳು ಓದಬಹುದು. ಚಿಕ್ಕ ಮಕ್ಕಳಿಗೂ ಓದಿ ಹೇಳುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************