-->
ಜಗಲಿ ಕಟ್ಟೆ : ಸಂಚಿಕೆ - 68

ಜಗಲಿ ಕಟ್ಟೆ : ಸಂಚಿಕೆ - 68

ಜಗಲಿ ಕಟ್ಟೆ : ಸಂಚಿಕೆ - 68
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಶಾಲಾ ಶೈಕ್ಷಣಿಕ ಪ್ರವಾಸ, ಶಾಲಾ ಕ್ರೀಡಾ ಉತ್ಸವ, ಶಾಲಾ ವಾರ್ಷಿಕೋತ್ಸವ ಹೀಗೆಲ್ಲಾ ಸರಣಿ ಕಾರ್ಯಕ್ರಮಗಳ ನಡುವೆ ನೀವೆಲ್ಲ ತುಂಬಾ ಸಂಭ್ರಮದಲ್ಲಿದ್ದೀರಿ. ಇನ್ನಷ್ಟೇ ಕೆಲವೇ ದಿನಗಳಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಕಾಲಿಡುತ್ತಿದ್ದೇವೆ. ಈ ಮಧ್ಯ ಮಕ್ಕಳ ಜಗಲಿಯ ಚಿತ್ರಕಲಾ ಸ್ಪರ್ಧೆಯಲ್ಲಿಯೂ ಕೂಡ ಭಾಗವಹಿಸುತ್ತಿದ್ದೀರಿ.
           ನಾಲ್ಕನೇ ವರ್ಷದ ಮಕ್ಕಳ ಜಗಲಿ ಕಲಾಪ್ರಶಸ್ತಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ ಆಗಿರುವುದು ನಿಮಗೆಲ್ಲ ತಿಳಿದಿದೆ. ಹಲವಾರು ಮಂದಿ ಫೋನಾಯಿಸಿ ಕೆಲವು ನಿಬಂಧನೆಗಳ ಬಗ್ಗೆ ಮಾಹಿತಿ ಕೇಳಿದ್ದರು. 'ಪ್ರವಾಸಿ ತಾಣದಲ್ಲಿ ನಾನು' ಎಂಬ ವಿಷಯದಲ್ಲಿ ತಾನು ಕಂಡ ಪ್ರವಾಸಿ ತಾಣವನ್ನು ಜನ ಸಮೂಹದೊಂದಿಗೆ ಚಿತ್ರಸಬೇಕಾದದ್ದು ಅಗತ್ಯತೆ ಇದೆ. ತನ್ನನ್ನು ತಾನು ಪ್ರತಿಬಿಂಬಿಸುವುದಕ್ಕೆ ದೊಡ್ಡವರ ಜೊತೆ ಸಣ್ಣ ಮಕ್ಕಳನ್ನು ತೋರಿಸುವುದು ಅನಿವಾರ್ಯ. ಒಟ್ಟು ಚಿತ್ರಗಳು ಜೀವಂತಿಕೆಯನ್ನು ಕಾಣಬೇಕು. ಚಿತ್ರದ ಸಂಯೋಜನೆ, ಬಣ್ಣ, ಅಂತಿಮ ರೂಪ ಆಕರ್ಷಕವಾಗಿರಬೇಕು.
       10 ರಿಂದ 12ನೇ ತರಗತಿ ವಿಭಾಗದಲ್ಲಿ ಮಾತೃಪ್ರೇಮ (ತಾಯಿಯ ಪ್ರೀತಿ) ವಿಷಯದ ಮೇಲೆ ಚಿತ್ರರಚನೆ ಇರುತ್ತದೆ. ಮಾತೃ ಹೃದಯ ಮಾತ್ರ ಪ್ರೇಮ ಎನ್ನುವುದು ಮನುಷ್ಯನ ವಿಚಾರಕ್ಕೆ ಮಾತ್ರ ಸೀಮಿತವಾಗಿ ಯೋಚನೆ ಮಾಡುವುದಕ್ಕಿಂತಲೂ ಮಿಗಿಲಾಗಿ ಸೃಜನಾತ್ಮಕವಾಗಿ ಯೋಚನೆ ಮಾಡುವುದು ಅಗತ್ಯವಾಗಿದೆ. ತಾಯಿಯ ಹೃದಯ ಎಲ್ಲಾ ಪ್ರಾಣಿ ಪಕ್ಷಿ ಗಿಡ ಮರಗಳಲ್ಲೂ ಕೂಡ ಆ ಒಂದು ಪ್ರೀತಿಯನ್ನು ತೋರಿಸಲು ಸಾಧ್ಯತೆ ಇರುವುದನ್ನು ತಾವು ಕಲಾಕೃತಿಗಳಲ್ಲಿ ತೋರಿಸಬಹುದು. 
          ಅದೇ ರೀತಿ ಒಂದು ಬಾರಿ ಮಕ್ಕಳ ಜಗಲಿ ಪ್ರಶಸ್ತಿ ಪಡೆದುಕೊಂಡಂತಹ ವಿದ್ಯಾರ್ಥಿ ಇನ್ನೊಂದು ಬಾರಿ ಪ್ರಶಸ್ತಿಯನ್ನು ಪಡೆದುಕೊಳ್ಳಬೇಕಾದರೆ ಒಂದು ವಿಭಾಗವನ್ನು ದಾಟಿ ಮುಂದಿನ ಹಂತದ ವಿಭಾಗದಲ್ಲಿ ಪಡೆದುಕೊಳ್ಳಲು ಅವಕಾಶ ಇರುತ್ತದೆ. ಕನಿಷ್ಠ 4 ರಿಂದ 6 ಆರು ವರ್ಷಗಳ ಅಂತರವಿರುವುದು. ಮಕ್ಕಳಲ್ಲಿ ಪ್ರಯೋಗಶೀಲತೆ, ಕಠಿಣ ಪ್ರಯತ್ನ, ಅಂತಿಮ ಗುರಿಯನ್ನು ತಲುಪುವ ನಿರಂತರ ಪ್ರಯತ್ನವನ್ನು ಕಾಯ್ದಿಟ್ಟುಕೊಳ್ಳುವ ಸಲುವಾಗಿ ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳ ಜಗಲಿಯ ಎಲ್ಲಾ ನಿರ್ಧಾರಗಳ ಹಿಂದೆ ಒಂದು ಉತ್ತಮ ಉದ್ದೇಶವನ್ನು ಕಂಡುಕೊಂಡಿದ್ದೇವೆ. 
        ಎಲ್ಲರಿಗೂ ಮುಂಚಿತವಾಗಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಎಲ್ಲಾ ವಿದ್ಯಾರ್ಥಿಗಳು ಎಂದಿನಂತೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿ ಆಗಬೇಕು. ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 67 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಮತ್ತು ರಮ್ಯಾ ಆರ್ ಭಟ್, ಸಹ ಶಿಕ್ಷಕಿ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಮೂರು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ತೇ,
     ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಶೌಚದ ಉಪಾಂಗಗಳಾದ ಸಂತೋಷ, ಸ್ವಾಧ್ಯಾಯ, ತಪಸ್ಸು ಮತ್ತು ಈಶ್ವರ ಪ್ರಣೀದಾನಗಳ ಕುರಿತು ವಿವರವಾದ ಮಾಹಿತಿ ಲಭ್ಯವಾಯಿತು. 
     'ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು' ಎನ್ನುವ ಗಾದೆ ಮಾತಿಗೆ ಅನ್ವರ್ಥವೆನ್ನುವಂತೆ ರಮೇಶ್ ಸರ್ ರವರ 'ಕಿರಿದೆಂದು ನಿರ್ಲಕ್ಷಿಸದಿರಿ' ಲೇಖನ. ತುಂಬಾ ಉಪಯುಕ್ತ ಲೇಖನ.
      ಸಸ್ಯಗಳಲ್ಲಿ ವಿಸರ್ಜಿತ ವಸ್ತುಗಳು ಹಾಗೂ ಅವುಗಳ ಉಪಯುಕ್ತತೆಯನ್ನು ದಿವಾಕರ ಸರ್ ರವರು ಸುಂದರವಾಗಿ ತಮ್ಮ ಈ ಸಲದ ಸಂಚಿಕೆಯಲ್ಲಿ ತಿಳಿಸಿದ್ದಾರೆ. 
      ವಿನೂತನ ಶೈಲಿಯಲ್ಲಿ ಈ ವಾರ ವಿಜಯಾ ಮೇಡಂರವರಿಂದ ಗಿಜಿ ಗಿಜಿ ಕಾಯಿಯ ಗಿಡದ ಇನ್ನೊಂದು ಪ್ರಭೇದದ ಪರಿಚಯ ಉತ್ತಮವಾಗಿತ್ತು.
      ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಂದರ ಪ್ರವಾಸಿ ತಾಣ ಭೀಮೇಶ್ವರ ದೇವಸ್ಥಾನದ ಸುಂದರ ಪರಿಚಯ ರಮೇಶರವರಿಂದ ಈ ಸಲದ ಪಯಣ ಸಂಚಿಕೆಯಲ್ಲಿ.
      'ಶುದ್ಧ ಫಟಿಂಗ' ಎನ್ನುವ ಕತೆಯ ಸುಂದರ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ. 
      ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆಗಳು ಸೊಗಸಾಗಿ ಮೂಡಿ ಬರುತ್ತಿವೆ.
      ಶಿಕ್ಷಕರ ಡೈರಿಯಲ್ಲಿ ರಮ್ಯಾ ಮೇಡಂರವರು ಶಾಲೆಗೆ ಹೊಸದಾಗಿ ಸೇರಿದ ಮಕ್ಕಳೂ ಕೆಲಸಗಳನ್ನು ಮಾಡಬೇಕು ಎಲ್ಲದರಲ್ಲೂ ಎಲ್ಲಾ ಮಕ್ಕಳು ಸಮಾನರು ಎನ್ನುವ ಸಂವಿಧಾನದ ಆಶಯವನ್ನು ಸಾರುವ ಅನುಭವದ ಮಾತುಗಳು ಚೆನ್ನಾಗಿದ್ದುವು.
     ಚಿತ್ರ ಸಂಚಿಕೆಯಲ್ಲಿ ಪುಟಾಣಿ ನಮ್ಯರವರು ರಚಿಸಿದ ಚಿತ್ರಗಳು ಚೆನ್ನಾಗಿವೆ. ಅಭಿನಂದನೆಗಳು ನಮ್ಯ.
    ಕೊನೆಯದಾಗಿ ಜಗಲಿಯ ಎಲ್ಲಾ ಹಿರಿಯರಿಗೆ, ಕಿರಿಯರಿಗೆ ಮತ್ತು ಪುಟಾಣಿಗಳಿಗೆ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಎಲ್ಲರಿಗೂ ನಮಸ್ಕಾರಗಳು,
     ನಮ್ಮ ಬದುಕು ಸುಂದರವಾಗಬೇಕಾದರೆ ನಾವು ಕ್ರಮದ ಜೀವನ ವಹಿಸಬೇಕು. ಹಣದಿಂದ ಶ್ರೀಮಂತಿಕೆ ಪಡೆಯುವುದಕ್ಕಿಂತ ನಮ್ಮ ಶ್ರೀಮಂತಿಕೆಯು ದೈಹಿಕ, ಬೌದ್ಧಿಕ, ಮಾನಸಿಕ, ಸಾಂಸ್ಕೃತಿಕವಾಗಿರಬೇಕು. ಸುಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
     ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವಾದ ವರ್ಣಕ ಕ್ಲೋರೋಫಿಲ್ ಕುರಿತಾದ ವಿವರಣೆ ಎಲ್ಲರಿಗೂ ಅರ್ಥವಾಗುವಂತೆ ಇದೆ. ಉತ್ತಮ ಸಂಚಿಕೆ. ಧನ್ಯವಾದಗಳು ಸರ್.
     ಉರ್ಕಿ ಗಿಡದ ಪರಿಚಯ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಇದೇ ರೀತಿ ಹೊಸ ಹೊಸ ಗಿಡಗಳ ಪರಿಚಯ ನಮಗೆಲ್ಲರಿಗೂ ಸಿಗಲಿ ಎಂಬ ಆಶಯ.
     ಕೆಳದಿಯ ಭವ್ಯ ಇತಿಹಾಸದ ಕುರಿತು ಸುಂದರ ಸಂಚಿಕೆ ಈ ಸಲದ ರಮೇಶರವರ ಪಯಣ ಸಂಚಿಕೆ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್.
      ವಾಣಿಯಕ್ಕನ ವರಿಂದ 'ಟ್ರಾಕ್ಟರ್ ಸವಾರಿ' ಎನ್ನುವ ಮಿಂಟುವಿನ ಕನಸಿನ ಕಥೆಯನ್ನೊಳಗೊಂಡಿರುವ ಉತ್ತಮ ಪುಸ್ತಕದ ಪರಿಚಯವಾಯ್ತು.
      ಮಕ್ಕಳ ಚಿತ್ರ ಸಂಚಿಕೆಯಲ್ಲಿ ದಿಗ್ವಿಜಯರವರ ಚಿತ್ರಗಳು ತುಂಬಾ ಉತ್ತಮವಾಗಿದ್ದುವು. ಅಭಿನಂದನೆಗಳು ದಿಗ್ವಿಜಯ್.
     ಪದದಂಗಳ ನಿರಂತರವಾಗಿ ಅಚ್ಚುಕಟ್ಟಾಗಿ ಮುಂದುವರಿಯುತ್ತಿದೆ ಅಭಿನಂದನೆಗಳು ರಮೇಶ್ ರವರಿಗೆ.
      ಜಗಲಿಯ ಎಲ್ಲರಿಗೂ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ನಮಸ್ತೇ,
     ವಸ್ತು ಒಂದೇ ಆದರೂ ನೋಡುಗರ ದೃಷ್ಟಿ ಬೇರೆ ಬೇರೆ ಇರುತ್ತದೆ ಮತ್ತು ಅವರಿಗೆ ಬೇರೆ ಬೇರೆ ರೀತಿಯಲ್ಲಿ ಕಾಣುತ್ತದೆ. 'ವಸ್ತು ಸಾಮ್ಯ ಚಿತ್ತ ಭೇಧ' ಸುಂದರ ಲೇಖನ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ. ಬೆಳಕಿನ ಕಣ ಹಾಗೂ ಅಲೆಗಳ ಸ್ವಭಾವದ ಕುರಿತಾಗಿ
ಬೆಳಕು ಚೆಲ್ಲಿದ ಲೇಖನ ದಿವಾಕರ ಸರ್ ರವರಿಂದ. ಸರೋಳಿ ಗಿಡದ ಕುರಿತಾದ ಪರಿಚಯದೊಂದಿಗೆ ಹಾಗೂ ವಿವರವಾದ ಮಾಹಿತಿ ವಿಜಯಾ ಮೇಡಂ ರವರಿಂದ.
      ರಮೇಶ್ ರವರ ಪಯಣ ಸಂಚಿಕೆಯಂತೂ ಅದ್ಭುತವಾಗಿ ಮೂಡಿ ಬರುತ್ತಿದೆ. ಪ್ರಕೃತಿ ರಮಣೀಯ ಸ್ಥಳ ಮುತ್ತತ್ತಿಯ ಪರಿಚಯ ಸೊಗಸಾಗಿತ್ತು. ದಿವಾಕರ ಸರ್ ರವರ ವಿಶೇಷ ಲೇಖನ ರಿಪ್ ಪ್ರವಾಹದ ಕುರಿತು ಅಗತ್ಯ ಮಾಹಿತಿ ನೀಡಿದೆ. ಬೀಚ್ ಕಡೆ ಪ್ರವಾಸ ಮಾಡುವ ಮಕ್ಕಳು ಹಾಗೂ ಇತರರು ಎಲ್ಲರೂ ಇದನ್ನು ಗಮನದಲ್ಲಿರಿಸಿ. ಸಕಾಲಿಕ ಲೇಖನ. ಧನ್ಯವಾದಗಳು ಸರ್.
     ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಹೇಗಪ್ಪ ಓಡಿಸೋದು ಈ ಜ್ವರ ಎನ್ನುವ ಕುತೂಹಲಕಾರಿ ಪುಸ್ತಕದ ಪರಿಚಯ ಸೊಗಸಾಗಿತ್ತು. ರಮೇಶ್ ಉಪ್ಪುಂದ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
    ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article