-->
ಪ್ರೀತಿಯ ಪುಸ್ತಕ : ಸಂಚಿಕೆ - 142

ಪ್ರೀತಿಯ ಪುಸ್ತಕ : ಸಂಚಿಕೆ - 142

ಪ್ರೀತಿಯ ಪುಸ್ತಕ
ಸಂಚಿಕೆ - 142
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                                 ಅಮ್ಮ 
ಪ್ರೀತಿಯ ಮಕ್ಕಳೇ.... ‘ಅಮ್ಮ’ ಎಲ್ಲರ ಬದುಕಿನಲ್ಲೂ ಒಬ್ಬ ಅಮೂಲ್ಯ ವ್ಯಕ್ತಿ. ಅತ್ಯಂತ ಆಪ್ತ ವ್ಯಕ್ತಿ. ಈ ಪುಸ್ತಕದಲ್ಲಿ ಅಮ್ಮನನ್ನು ನೆನಪಿಸುವ ಎರಡು ಕಥೆಗಳು ಇವೆ. ಅಮ್ಮ ಮತ್ತು ದಲಿತ ಕೇರಿಯ ಬೆಳಕು. ಮೊದಲ ಕಥೆಯಲ್ಲಿ ಪುಟ್ಟು ಹುಡುಗ ಗಗನ ತನ್ನ ಅಮ್ಮನನ್ನು ಕಳೆದುಕೊಂಡಿರುತ್ತಾನೆ. ಅವನಿಗೆ ಆಕಸ್ಮಿಕವಾಗಿ ನದಿ ತೀರದಲ್ಲಿ ಕುಳಿತಿದ್ದಾಗ ಜಲದೇವತೆ ಸಿಗುತ್ತಾಳೆ. ಅವನಿಗೆ ಪ್ರೀತಿ ತೋರಿಸುತ್ತಾಳೆ ಮತ್ತು ತನ್ನ ಕಷ್ಟವನ್ನೂ ಹೇಳಿಕೊಳ್ಳುತ್ತಾಳೆ. ಗಗನ ಏನು ಮಾಡುತ್ತಾನೆ, ಓದಿ ನೋಡಿ. ಅಂತೆಯೇ ದಲಿತ ಕೇರಿಯ ಬಡ ಹುಡುಗ ಹನುಮಂತು, ಓದಿ ದೊಡ್ಡವನಾಗಿ, ತನ್ನ ಅಮ್ಮನಿಗಾಗಿ ಮತ್ತು ಊರಿಗಾಗಿ ತೋರಿಸುವ ಪ್ರೀತಿಯ ಕಥೆ ಇದೆ. ಕಷ್ಟಪಟ್ಟು ತನಗೆ ವಿದ್ಯೆ ನೀಡಿ ಬೆಳಸಿದ ಅಮ್ಮ, ಸಹಕರಿಸಿದ ಊರವರಿಗೆ ಸಂಭ್ರಮದಿಂದ ಕೃತಜ್ಞತೆ ತೋರಿಸುವ ವಿಚಾರ ಇಲ್ಲಿ ಇದೆ. 
ಲೇಖಕರು: ಸುಧಾ ಭಂಡಾರಿ (ಸುವಿಧಾ) 
ಪ್ರಕಾಶಕರು: ಅಕ್ಷರ ಮಂಟಪ, ಬೆಂಗಳೂರು
ಬೆಲೆ: ರೂ.60/-
6, 7ನೇ ತರಗತಿಯ ಮಕ್ಕಳು ಓದಬಹುದಾದ ಪುಸ್ತಕ. ಕೆಲವು ಕಥೆಗಳನ್ನು ಚಿಕ್ಕವರಿಗೂ ಓದಿ ಹೇಳಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಕ್ಷರ ಮಂಟಪ, ಬೆಂಗಳೂರು, 9986167684/9481111193 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article