-->
ಪ್ರೀತಿಯ ಪುಸ್ತಕ : ಸಂಚಿಕೆ - 139

ಪ್ರೀತಿಯ ಪುಸ್ತಕ : ಸಂಚಿಕೆ - 139

ಪ್ರೀತಿಯ ಪುಸ್ತಕ
ಸಂಚಿಕೆ - 139
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                 
               
                               ಶುದ್ಧ ಫಟಿಂಗ
ಪ್ರೀತಿಯ ಮಕ್ಕಳೇ... ಸಾಹುಕಾರರೊಬ್ಬರು ಬಡತನಕ್ಕೆ ಇಳಿದು ಊರು ಬಿಡಬೇಕಾಗಿ ಬಂದ ಕಥೆ ಇದು. ಅವರ ಕುಟುಂಬ ಮತ್ತು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಾಪಿಳ್ಳೆ ಸಮುದಾಯದ ಸಂಬಂಧ ಮತ್ತು ಎಡವಟ್ಟುಗಳ ಚಿತ್ರಣ ಇದರಲ್ಲಿ ಕಾಣುತ್ತದೆ. ಈ ಮಾಪಿಳ್ಳೆಯವರನ್ನು ನಂಬುವುದು ಕಷ್ಟ ಎಂಬುದು ಆ ಊರಿನವರ ಸಾಮಾನ್ಯ ಅಭಿಪ್ರಾಯ. ಆದರೂ ಮನೆಕೆಲಸ, ತೋಟದ ಕೆಲಸ ಮಾಡುವವರೆಲ್ಲಾ ಮಾಪಿಳ್ಳೆಯವರೇ ಆಗಿದ್ದರು. ಅವರು ನಿಜಕ್ಕೂ ಕೆಟ್ಟವರೇ? ಅವರ ಬಗ್ಗೆ ಯಾಕೆ ಜನರು ಅಂತಹ ಅಭಿಪ್ರಾಯ ಬೆಳೆಸಿಕೊಂಡಿದ್ದಾರೆ? ಅರ್ಥಮಾಡಿಕೊಳ್ಳಲು ಓದಿ ನೋಡಿ. ನಮ್ಮ ಸುತ್ತಲೂ ನಾವು ಕೂಡಾ ಯಾವುದಾದರೂ ಸಮುದಾಯವನ್ನು ಹೀಗೆ ಕೆಟ್ಟವರು ಎಂದು ಆರೋಪಿಸಿ ಬಿಡುತ್ತೇವೆಯೇ? ಅದು ನ್ಯಾಯವೇ ಎಂದು ಯೋಚಿಸುವುದು ಕೂಡಾ ಮುಖ್ಯ.  
ಲೇಖಕರು: ಬಾಗಲೋಡಿ ದೇವರಾಯ 
ಚಿತ್ರಗಳು: ಅರೂಪ್ ಗುಪ್ತ 
ಅನುವಾದ: ನಾ.ದಾಮೋದರ ಶೆಟ್ಟಿ 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ 
ಬೆಲೆ: ರೂ 9/- ( ಈಗ ಬದಲಾಗಿರಬಹುದು)
ಚಿಕ್ಕ ಪುಸ್ತಕ ಇದು. ಆದರೆ ವಿಚಾರ ಸೂಕ್ಷ್ಮವಾದದ್ದು. 6-7 ತರಗತಿ ಮಕ್ಕಳು ಓದಬಹುದು. ಓದಿ ವಿವರಿಸಲೂ ಬಹುದು. (ನವಸಾಕ್ಷರತೆ ಸಾಹಿತ್ಯ ಮಾಲೆಯ ಕೃತಿ ಇದು)
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article