-->
ಮಕ್ಕಳ ಕವನಗಳು : ಸಂಚಿಕೆ - 33 - ಕವನ ರಚನೆ : ಶರ್ಮಿಳಾ ಕೆ ಎಸ್, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 33 - ಕವನ ರಚನೆ : ಶರ್ಮಿಳಾ ಕೆ ಎಸ್, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 33
ಕವನ ರಚನೆ : ಶರ್ಮಿಳಾ ಕೆ ಎಸ್ 
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.



ಕಣಕಣದ ನೆತ್ತರಿನಲಿ ಹರಿಯುತಲಿತ್ತು
ಸ್ವಾತಂತ್ರ್ಯದ ತುಡಿತ
ಬಂಧನರಹಿತವಾಗಿ ಜೀವಿಸಲು 
ನೋವನೇ ಮರೆತ
ಸ್ವಾತಂತ್ರ್ಯ ಸಂಗ್ರಾಮದ ಕಲ್ಪನೆಯ 
ಧಾರಣದಲಿ ಹೋರಾಡಿದ 
ನರಕರೂಪಿ ಸೆಲ್ಯುಲರಿನಲಿ 
ಕಳೆದ ಹತ್ತುವರ್ಷಗಳನು
ವಾಗ್ಮಿ, ಲೇಖಕ, ರಾಜಕಾರಣಿ
ಸ್ವಾತಂತ್ರ್ಯ ವೀರ ಸಾವರ್ಕರ್

ಜನಿಸಿದ ಆ ವೀರ, ಊದಿದ 
ಸ್ವಾತಂತ್ರ್ಯದ ಕಹಳೆಯ 
ಅಗಲಿದ ತಾಯಿಯಾಸೆಯನು 
ತೀರಿಸಲು ಹಾತೊರೆದ
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ 
ಯೌವನವನೇ ಮುಡಿಪಾಗಿಟ್ಟು
ವೀರರಲಿಯೇ ವೀರರಾದವರು 
ವೀರ ಸಾವರ್ಕರ್

ದೇವಿಯ ಪಾದಗಳ ಸ್ಪರ್ಶಿಸಿ 
ಪ್ರಮಾಣಿಸಿದ ವೀರ
ಕೊನೆಯುಸಿರಿರುವರೆಗೆ ಹೋರಾಡುವೆ 
ಭಾರತ ಮಾತೆಗಾಗಿ
ಮಹಾಮಾರಿ ಪ್ಲೇಗಿನಿಂದ 
ತಂದೆ ಬಳಲುತಿರಲು
ಪರದಾಡಿದರು ಸಾವರ್ಕರ್ 
ತಂದೆಯ ಉಳಿಯುವಿಕೆಗೆ
ಆಗದೆ ಅಗಲಿದರು 
ತಂದೆಯೂ ವೀರನ ಕೈಹಿಡಿದು 

ಸಾವರ್ಕರರ ಕನಸನು 
ನನಸಾಗಿಸಲು ಪಣತೊಟ್ಟರು
ಗಣೇಶ ಸಾವರ್ಕರರು ದುಡಿದರು ಬೆವಳಿರಿಸಿ
ಸಾವರ್ಕರರ ವಿದ್ಯಾಭ್ಯಾಸಕ್ಕಾಗಿ, 
ಕೊನೆಗೂ ಸಾಧಿಸಿಯೇ ತೋರಿದರು 
ಮಾದರಿಯಾಗಿ ಭಾರತಕೆ ಕೊಟ್ಟರು 
ಗೋವಿಂದ ಧರೇಕಾರನೆನ್ನುವ ರತ್ನವ  
ಮ್ಯಾಜಿನಿಯಿಂದ ಪ್ರೇರಣೆಗೊಂಡು 
ಕಟ್ಟಿದರದ ಮಿತ್ರಮೇಳವ

ವೀರನಲಿ ಸ್ವಾತಂತ್ರ್ಯದ ಯೋಚನೆಯನು 
ಬಿತ್ತಿದ್ದು ಕಾಳಪತ್ರಿಕೆ 
''ಜಯೋಸ್ತುತೆ'' ಕವನವನು
ಕೊಡುಗೆಯಾಗಿಸಿದರು ಸಾವರ್ಕರರು
ಬಂಗಾಳದ ವಿಭಜನೆಯು ಹೊತ್ತಿಸಿತು 
ವೀರನಲಿ ಸ್ವಾತಂತ್ರ್ಯದ ಜ್ವಾಲೆಯನು,
ಪರಿಣಾಮವೇ ಸ್ವದೇಶಿ ಚಳವಳಿ
ವಿದೇಶಿಯರಿಗೆ ಸಿಂಹಸ್ವಪ್ನದಂತಿದ್ದರು ಸಾವರ್ಕರರು

ವಿದೇಶಿ ಬಟ್ಟೆಗಳಿಗೆ ಬೆಂಕಿಯಿಡುವುದರ 
ಮೂಲಕವೇ ನಡೆಸಿದರು 
ಸ್ವದೇಶಿ ಚಳವಳಿಯನು 
ಬೆಂಕಿಜ್ವಾಲೆಯ ಮುಂದೆಯೇ
ಉಕ್ತಿಯಿತ್ತರದು ನಡುಗಿತು 
ಬಿಳಿಯರ ಸಾಮ್ರಾಜ್ಯ 
ಕೇವಲವಲ್ಲವಿದು ಇಡುವುದು 
ವಿದೇಶಿ ಬಟ್ಟೆಗಳಿಗೆ ಬೆಂಕಿ 
ಇದಾಗುವುದು ಮುಂದೆ ಬ್ರಿಟೀಷರ ಚಿತೆಗೆ ಕೊಳ್ಳಿಯೆಂದು 

ಶಿವರಾಮ ಮತ್ತು ತಿಲಕರ 
ಸಾಕ್ಷಿಯ ಮೇರೆಗೆ ನಡೆದರು
ಸಾವರ್ಕರರು ಲಂಡನ್ನಿಗೆ ವಿದ್ಯೆಯ ಕಲಿಯಲು
ಹೋದ ಮರುಕ್ಷಣವೇ ತಿಳಿಯಿತು 
ವೀರನ ಕಂದಮ್ಮನ ಮರಣವಾಣಿ 
ಮರುಗಿತು ಹೃದಯ ಆದರೂ 
ಕಳೆಗುಂದಲಿಲ್ಲ ಆ ವೀರತ್ವ
ನೋವಿನಲಿಯೇ ಬರೆದರು ''ಸಾಗರಪ್ರಾಣತಳಮಳಲ''ಎಂಬ ಗೀತೆಯನು

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪರಿಕಲ್ಪನೆಯಲಿ ಬರೆದ ಕೃತಿಯನು 
ಭಾರತೀಯರಿಗೆ ತಲುಪಿಸಲು 
ಸಾವರ್ಕರರು ಪಟ್ಟಕಷ್ಟ ಒಂದೆರಡಲ್ಲ 
ಹಡಗಿನಲಿಯಿದ್ದ ಬಟ್ಟೆವ್ಯಾಪಾರಿಯ 
ಬಟ್ಟೆಯ ಮಧ್ಯದಲಿ ಇಟ್ಟರು ಸಾವರ್ಕರರು
ಮುಂದಿನ ಸ್ವತಂತ್ರ್ಯ ಭಾರತದ ಭವಿಷ್ಯವ 
ಆದರೂ ಮುದ್ರಣಿಸಲು 
ಅಣ್ಣ ಮಾಡಿದ ಸಾಹಸ ಹೇಳತೀರದು 

ಮುದ್ರಣಗೊಳಿಸಲಾಗದೇ ಪುಸ್ತಕವನು ಹಿಂತಿರುಗಿಸಿದರು ಪುನಃ ವಿದೇಶಕ್ಕೆ 
ಭಾಷಾಂತರಿಸಿದರು ಆಂಗ್ಲಭಾಷೆಗೆ 
ಮುದ್ರಣಗೊಳಿಸಲು ಫ್ರಾನ್ಸ್‌,
ಜರ್ಮನಿ ದೇಶಗಳು ನೆರವು ನೀಡಿದರೂ
ಅಲ್ಲಿ ಮಂಡಲ ಹಾಕಿ ಕುಳಿತಿರುವ
ಬ್ರಿಟೀಷರಿಂದಾಗಿ ಸಾಧ್ಯವಾಗದೆಯೇ 
ರೂಪಿಸಿದರದೊಂದು ಪ್ರಬಲವಾದ ಯೋಜನೆಯನು 

ಪತ್ರಿಕೆಯಲಿ ಫ್ರಾನ್ಸಿನಲಿ 
ಪುಸ್ತಕ ಮುದ್ರಿಸುವುದಾಗಿ ಸುದ್ದಿಯನಿತ್ತರು
ಸುದ್ದಿಯ ಕೇಳಿದ ಮೂಢ ಬಿಳಿಯರು 
ನಡೆದರು ಫ್ರಾನ್ಸಿಗೆ
ಭಾರತದ ಕುಡಿಯ ಚುರುಕು ಯೋಜನೆಯಿಂದಲಿ 
ಹಾಲೆಂಡಿನಲಿ ಮುದ್ರಣಗೊಳಿಸಿದರು ಸಾವರ್ಕರರು ಭಾರತದ ಭವಿಷ್ಯವ 
ಸಕಲಪ್ರಯತ್ನದಾನಂತರ ಮರಳಿಸಿದರು 
ಭಾರತ ಸ್ವಾತಂತ್ರ್ಯ ಸಂಗ್ರಾಮ ಕೃತಿಯನು

ಜಾಕ್ಸನನೆಂಬ ಬ್ರಿಟೀಷಧಿಕಾರಿಯನು ಅನಂತಲಕ್ಷ್ಮಣನೆಂಬುವವನು ಹತ್ಯೆಗೈದಾಗ 
ಅದರಪರಾಧವನು ಹೊರಿಸಿದರು ವೀರನ ಮೇಲೆ
ಮೇಡಂ ಕಾಮಾರಾಶ್ರಯದಲಿದ್ದ ಸಾವರ್ಕರರು ಯಾರ ಮಾತನು ಕೇಳದೆಯೇ 
ಹೊರಟುಬಂದರು ಲಂಡನಿಗೆ 
ಬಂದಿತರಾದರು ಬ್ರಿಟೀಷರಿಂದ 
ನ್ಯಾಯಾಲಯದ ತೀರ್ಪಿನ ಮೇರೆಗೆ 
ಕರೆತಂದರು ವೀರನನು ಭಾರತಕೆ
ಆಪ್ತಗೆಳೆಯ ಕಣ್ಣೀರನಿತ್ತಾಗ ಭಗವದ್ಗೀತೆಯನೋದಿದ ತನುವಿಗೆ ನೋವೆಂಬುವಿಲ್ಲೆಂದರು 

ಹಡಗಿನಲಿ ಬರುವಾಗಲೇ ಪೋಲೀಸರಿದ್ದರೂ 
ಹಡಗಿನ ಕಿಟಕಿಯಿಂದ ತೂರಿದರು ದೇಹವ
ಕಿಟಕಿಯಲಿ ಸಿಲುಕಿ ನೆತ್ತರಹೊಳೆ ಹರಿಯುವಾಗಲೂ
ಎದೆಗುಂದದೆ ಸ್ವಾತಂತ್ರ್ಯ ಲಕ್ಷ್ಮಿಗೆ ಜಯವಾಗಲಿಯೆಂದು
ಸಾಗರಕೆ ಧುಮುಕಿ ಈಜಿ ದಡಸೇರಲಾಗದಿರುವಾಗಲೂ ದಡಸೇರಿದರಾದರೂ
ಭಾರತದಲಿಯಿದ್ದ ಬಿಳಿಯರ ಬಂಧನಕೊಳಗಾದರೂ ವೀರನ ಕಣ್ಣಿನಲಿ 
ಕಿಂಚಿತ್ತೂ ಕಡಿಮೆಯಾಗಲೇಯಿಲ್ಲ ದೇಶಪ್ರೇಮ ಕಾರಣವೇ ಸ್ವಾತಂತ್ರ್ಯದ ತುಡಿತ

ಕೊನೆಗೆ ಬಿಳಿಯರ ತಂತ್ರದಿಂದ ಸೆರೆಸಿಕ್ಕಿದರೂ
ಕಾಲಾಪಾನಿನ ಶಿಕ್ಷೆಗೆ
ಅಂಡಮಾನಿನ ಸೆಲ್ಯುಲರಿನಲಿಯಿದ್ದರೂ
ಬಿಡಲಿಲ್ಲ ವೀರ ವೀರತ್ವವನು
ಇಪ್ಪತ್ತೈದು ವರುಷಗಳ 
ಕಾರಾಗೃಹ ಶಿಕ್ಷೆಯನಿತ್ತರು ಕೂಡ
ಸಮಧಾನವಾಗದ ಬ್ರಿಟೀಷರು ಮತ್ತೊಂದು ಶಿಕ್ಷೆಯನಿತ್ತರು ವೀರನಮೇಲೆ

ಪ್ರಯತ್ನವನೇ ಬಿಡದೆಯೇ  
ಹೋರಾಡಿದ ಆ ವೀರ
ಅಂತಿಮ ಶವಯಾತ್ರೆಯೆಂದೇ ಕರೆಯುತಿದ್ದ ಕಾಲಾಪಾನಿನ ಶಿಕ್ಷೆಗೆ
ಒಳಪಟ್ಟ ಸಾವರ್ಕರರು 
ಕಳೆದರು ಜೈಲಿನಲಿ ಅರವತ್ತು ವರುಷಗಳ
ಜೈಲುವಾಸವಾದರೂ ಬೇಡಿಯೊಂದಿಗೆ 
ವರ್ಷಪೂರ್ತಿ ನಿಂತಿರುವ
ಕರಾಳ ಶಿಕ್ಷೆಯನನುಭವಿಸಿದರು 
ವೀರ ಸಾವರ್ಕರರು ಸುಮ್ಮನಿರಲ್ಲಿಲ್ಲ 
ಈ ವೀರ ಹೋರಾಟಗಾರ ಶಿಕ್ಷೆಯಲ್ಲಿಯೂ 

ಜೈಲಿನಲ್ಲಿಟ್ಟಿರಲು ವೀರನನು 
ನೇಣಿಗೇರಿಸುವ ಕೋಣೆಯ ಬಳಿಯೇ 
ಕಾರಣವೇ ವೀರತ್ವವನು ಉಪಶಮಸಿಸುವದು
ಸಾವಿನಬಾಯಿಗೆ ಆಹಾರವಾಗುವರ ಕಿರುಚಾಟ,
ಕೂಗಾಟದಿಂದಲಿ ಕುಗ್ಗಲಿಲ್ಲ 
ದೇಶಭಕ್ತಿ ಜಾಸ್ತಿಯೇಯಾಯಿತು 
ಕಿರುಚಾಟ, ಕೂಗಾಟ, ಅರುಚಾಟಗಳಿದ್ದರೂ
ಬರಿದಾಗಲಿಲ್ಲ ದೇಶಪ್ರೇಮ 

ಕಾರಾಗೃಹದಲಿ ನೀಡುತ್ತಿದ್ದ ಆಹಾರದಲಿ ಇರುತ್ತಿದ್ದ ಹಾವು ಚೇಳುಗಳ ಕಂಡು 
ಮುಂದೊಂದು ದಿನ 
ಇದೇ ತರಹದ ಗತಿಯೇ ಬ್ರಿಟಿಷರಿಗೂ 
ತೆಂಗಿನ ನಾರಿನ ಹಗ್ಗವನ್ನು ತಯಾರಿಸುವಾಗೆಲ್ಲ ಆಗುವುದಿದು ಬಿಳಿಯರಿಗೆ ಯಮಪಾಶವು ಭಾರತೀಯರಲಿ ತುಂಬಿದರದು ಕೀಳ್ಭಾವನೆಯ  
ಮುಟ್ಟುತ್ತಿರಲಿಲ್ಲೆದು ಅಂಡಮಾನಿನ ಗಾಣದೆಣ್ಣೆಯ 
ಸಾವರ್ಕರರು ಮಾಡಿದೆಣ್ಣೆಯಾಗಿರುವುದೆಂಬ ಸಂಶಯದಲಿ  

ಕವಿಯಾದವಗೆ ಆಸ್ತಿಯು 
ಪುಸ್ತಕ ಲೇಖನಿಯಾದರೂ 
ಕಾಲಾಪಾನಿನಲಿ ಸಿಗಲಿಲ್ಲ 
ಕೇವಲ ಕಾಗದ ಲೇಖನಿ
ಅಂಜದ ವೀರನ ತನ್ನ ಬೇಡಿಯ 
ಮೊಳೆಯನೇ ಲೇಖನಿಯಾಗಿಸಿದ 
ಕೆತ್ತಿದದು ಪಾಠವ ಗೋಡೆಯ ಮೇಲೆ ಕೈದಿಗಳಿಗಾಯಿತದು ಜೀವನ ಪಾಠ 
ಕೈದಿಗಳಿಗೊಬ್ಬನೇ ದೇವರಾದವನೀತ 

ಗಾಣದ ಕೆಲಸ ಮಾಡುವಾಗಲೇ 
ನೀಡಿದರದು ಜಾಗತಿಕ ಜ್ಞಾನ
ಒರಟು ಗೋಡೆಯಲಿ ಕೆತ್ತಿದರದು 
ಜೀವನ ಪಾಠ
ವಿನೂತನ ಚಿಂತನೆಗಳನು 
ಧಾರೆಯೆರೆದವನೀತ 
ಕರುಳುಬಳ್ಳಿಯ ಸಂಬಂಧಗಳೆರಡು 
ಪಟ್ಟರು ಕಷ್ಟ ಕಾಲಾಪಾನಿನಲಿ
ಅಣ್ಣ ಗಣೇಶ ಸಾವರ್ಕರ 
ತಮ್ಮ ವಿನಾಯಕ ಸಾವರ್ಕರ

ಹಿಂದುತ್ವವನು ಪೂಜಿಸುತ್ತಲಿದ್ದ 
ಜನನಾಯಕ ಸಾವರ್ಕರ್
ಸಿಂಧೂನದಿಯಿಂದ ಭರತವರುಷವನು ಪಿತೃದೇವನೆಂದು 
ಹಿಂದೂ ಧರ್ಮದ ತೊಟ್ಟಿಲಾದ ಮಾತೃಭೂಮಿಯೆಂದು 
ಭಾರತಕ್ಕಾಗಿಯೇ ಹೋರಾಡುವವರೇ ನೈಜಹಿಂದೂಗಳೆಂಬ 
ಉದಾತ್ತ ಪರಿಕಲ್ಪನೆಯನು 
ಹೊಂದಿದರೆಮ್ಮಯ ವೀರ ಸಾವರ್ಕರ್

ಸ್ವಾತಂತ್ರ್ಯದ ತುಡಿತದಲ್ಲಿ ದೇಶಕ್ಕಾಗಿ 
ಪ್ರಾಣ ಕೊಟ್ಟ ದಿಟ್ಟಮುಳ್ಳಿನಂತೆ ಕಾಡಿದ
ಬಿಳಿಯರಿಗೆ ಸಿಂಹಸ್ವಪ್ನ ವಾಗಿಬಿಟ್ಟ 
ಯುವಜನತೆಗೆ ಮಾದರಿಯಾಗಿ 
ದೇಶ ಪ್ರೇಮ ತೋರಿಸಿಕೊಟ್ಟ 
ಛಲವೊಂದಿದ್ದರೆ ಗೆಲುವು ನಿಶ್ಚಿತವೆಂಬ
ಉಕ್ತಿ ಕೊಟ್ಟ
ಭರತಭೂಮಿಯ ಸ್ವಾತಂತ್ರ್ಯ ವೀರ
ಸಾವರ್ಕರೆನ್ನಯ ಜೀವನಕೆ ತೋರಿದರದು 
ನೈಜ ದೇಶ ಪ್ರೇಮದ ದಾರಿಯ
...................................... ಶರ್ಮಿಳಾ ಕೆ ಎಸ್ 
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
******************************************


Ads on article

Advertise in articles 1

advertising articles 2

Advertise under the article