ಪ್ರೀತಿಯ ಪುಸ್ತಕ : ಸಂಚಿಕೆ - 134
Friday, October 25, 2024
Edit
ಪ್ರೀತಿಯ ಪುಸ್ತಕ
ಬೇಸಿಗೆ ರಜೆಯ ಮಜಾ
ಪ್ರೀತಿಯ ಮಕ್ಕಳೇ.... ಬೇಸಿಗೆಯ ರಜಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಈ ಪುಸ್ತಕದಲ್ಲಿ ತೇಜು ರಜದಲ್ಲಿ ಅವನ ವಿಶ್ವ ಮಾಮನ ಫಾರ್ಮಿಗೆ ಹೋಗುತ್ತಾನೆ. ಅವನ ಮಾಮ ಅವನನ್ನು ಎಳೆನೀರಿನೊಂದಿಗೆ ಸ್ವಾಗತಿಸುತ್ತಾರೆ. ತೇಜು ಹಳ್ಳಿಗೆ ಬಂದಿರುವುದೇ ಮೊದಲ ಬಾರಿ. ತೆಂಗಿನ ಮರದಿಂದ ಕಾಯಿ ಕೀಳಿಸೋದು, ಗೊಬ್ಬರ ಹಾಕಿಸೋದು, ನೀರು ಬಿಡೋದು ಎಲ್ಲಾ ಕೆಲಸದ ಜೊತೆಗೆ ಸೇರಿಕೊಳ್ಳುತ್ತಾನೆ. ಆಮೇಲೆ ಮಾಮ ಅವನಿಗೆ ತೆಂಗಿನ ಗರಿಯಿಂದ ಆಟಿಕೆಗಳನ್ನು ಮಾಡಲು ಹೇಳಿಕೊಡುತ್ತಾರೆ. ಕನ್ನಡಕ, ಕೈಗಡಿಯಾರ, ಉಂಗುರ – ಎಲ್ಲಾ ಹಾಕಿಕೊಂಡು ಸಂತಸದಿಂದ ತೋಟ ಸುತ್ತುತ್ತಾನೆ. ನಿಮಗೂ ಬೇಸಿಗೆ ರಜದ ವಿಶೇಷ ಅನುಭವಗಳು ಇರಬಹುದಲ್ಲವೇ? ಈ ಪುಸ್ತಕದ ಕೊನೆಯಲ್ಲಿ ತೆಂಗಿನ ಗರಿಯಿಂದ ಆಟಿಕೆಗಳನ್ನು ಮಾಡುವ ವಿಧಾನಗಳನ್ನು ಕೂಡಾ ತೋರಿಸಿದ್ದಾರೆ. ತೆಂಗಿನ ಮರದ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ನೀಡಿದ್ದಾರೆ.
..................................... ವಾಣಿ ಪೆರಿಯೋಡಿ


ಸಂಚಿಕೆ - 134
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಲೇಖಕರು: ಯಶಸ್ವಿನಿ ಎಸ್.ಎನ್
ಚಿತ್ರಗಳು: ಲಕ್ಷ್ಯ ಶ್ರೀವಾಸ್ತವ
ಪ್ರಕಾಶಕರು: ಹರಿವು ಬುಕ್ಸ್
ಬೆಲೆ: ರೂ.120/
5ನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು. ಚಿಕ್ಕ ಮಕ್ಕಳಿಗೂ ಚಿತ್ರ ತೋರಿಸುತ್ತಾ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಹರಿವು ಬುಕ್ಸ್, ಬೆಂಗಳೂರು, ದೂರವಾಣಿ- 8088822171, www.harivubooks.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************