ಪ್ರೀತಿಯ ಪುಸ್ತಕ : ಸಂಚಿಕೆ - 132
Saturday, October 12, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 132
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಅಪಾಯ ಎದುರಾದಾಗ ನಾವು ಏನು ಮಾಡುತ್ತೇವೆ...? ನಮ್ಮನ್ನ ನಾವು ಬಚಾವ್ ಮಾಡಿಕೊಳ್ಳಲು ಏನೋ ಒಂದು ಮಾಡಿಯೇ ಮಾಡುತ್ತೇವೆ ತಾನೇ..? ನಾವು ಮನುಷ್ಯರು ಇನ್ನೂ ಜಾಸ್ತಿ ಅಪಾಯ ಎದುರಿಸುವುದಕ್ಕೆ ಏನೇನೋ ಶಸ್ತ್ರಾಸ್ತ್ರಗಳನ್ನೂ ತಯಾರಿಸಿ ಇಟ್ಟುಕೊಂಡಿದ್ದೇವೆ. ನಾವು ಮಾತ್ರ ಅಲ್ಲ, ನಮ್ಮ ಸುತ್ತಮುತ್ತಲಿನ ಎಲ್ಲಾ ಜೀವಿಗಳು ಹಾಗೇನೇ.. ಈ ಪುಸ್ತಕದಲ್ಲಿ ಅಂತಹ ಕೆಲವು ನಮ್ಮ ಸಹಜೀವಿಗಳು ತಮ್ಮ ಅಸ್ತ್ರಗಳ ಬಗ್ಗೆ ನಮಗೆ ಕಥೆ ಹೇಳುತ್ತಿದ್ದಾರೆ. ಅಬ್ಬಾ.. ಎಂತಹ ಅದ್ಭುತ ಕಥೆಗಳು. ಜಿರಲೆ, ಜೇಡ, ಒಂದು ತರಹದ ದುಂಬಿ, ಗೆದ್ದಲು, ಮುಳ್ಳುಹಂದಿ.. ಹೀಗೇ ಒಂದಷ್ಟು ಮಂದಿ ನಮಗೆ ಅವರ ಕಥೆ ಹೇಳುತ್ತಿದ್ದಾರೆ. ರೋಚಕವಾಗಿದೆ. ನೀವೂ ಕೂಡಾ ಇಂತಹ ಕೆಲವು ಅದ್ಭುತಗಳನ್ನು ಗಮನಿಸಿರಬಹುದು. ನಿಮ್ಮ ಅನುಭವಗಳನ್ನೂ ಇದರ ಜೊತೆ ಸೇರಿಸಿಕೊಳ್ಳಬಹುದು.
ಲೇಖಕರು: ಕೊಳ್ಳೇಗಾಲ ಶರ್ಮ
ಚಿತ್ರಗಳು: ರಘುಪತಿ ಶೃಂಗೇರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
ಬೆಲೆ: ರೂ.80/-
6-7 ನೇ ತರಗತಿಯ ಮಕ್ಕಳು, ಓದುವ ಅಭ್ಯಾಸ ಇರುವ ಮಕ್ಕಳು ಓದಿಕೊಳ್ಳಬಹುದು. ಓದಿ ಹೇಳುವುದಕ್ಕೂ ಚೆನ್ನಾಗಿದೆ
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************