ಪ್ರೀತಿಯ ಪುಸ್ತಕ : ಸಂಚಿಕೆ - 131
Saturday, October 5, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 131
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಈ ಕುಂಬಾರನ ಹಂದಿಯ ಹೆಸರು ಏನು ಗೊತ್ತೇ? ಲಲಿತಾ – ಅಂತ. ಮಹಾ ಕೀಟಲೆ, ಕಿತಾಪತಿಯ ಹಂದಿ. ಒಮ್ಮೆ ಕುಂಬಾರನ ಸುಂದರ ಮಡಕೆಗಳೆಲ್ಲಾ ಒಡೆದು ಹೋದವು. ಕುಂಬಾರನಿಗೆ ತಲೆಬಿಸಿಯಾಯಿತು. ಇದು ಲಲಿತಾದೇ ಕೆಲಸ ಅಂತ ಕುಂಬಾರ ಅಂದುಕೊಂಡ. ಆದರೆ ಮಡಕೆ ಒಡೆದದ್ದು ಲಲಿತಾ ಅಲ್ಲ. ಯಾರಿರಬಹುದು? ಓದಿ ನೋಡಿ. ದೊಡ್ಡ ಪುಸ್ತಕ. ಪುಟ ತುಂಬಾ ದೊಡ್ಡ ದೊಡ್ಡ ಚಿತ್ರಗಳು. ಹಂದಿಯ ಎಲ್ಲಾ ಸರ್ಕಸ್ಸುಗಳನ್ನೂ ಚಿತ್ರಗಳಲ್ಲೇ ಕಾಣಬಹುದು. ಬರಹ ತುಂಬಾ ಕಡಿಮೆ. ಪುಣೆಯಲ್ಲಿ ವಾಸಿಸುತ್ತಿರುವ ಕುಂಬಾರ ಮತ್ತು ಅವನ ಮುದ್ದಿನ ಹಂದಿಯಿಂದ ಪ್ರೇರಿತಗೊಂಡ ನೈಜ ಕಥೆ ಇದು.
ಲೇಖಕರು: ರೋಹಿತ್ ಕುಲಕರ್ಣಿ
ಚಿತ್ರಗಳು: ಪ್ರಿಯಾ ಕುರಿಯನ್
ಅನುವಾದ: ಸುಭಾಷಿಣಿ ಎಮ್.ಎಲ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/-
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************